Honey Singh: ಜನಪ್ರಿಯ ಸಿಂಗರ್ ಮತ್ತು ರಾಪರ್ 'ಯೋ ಯೋ ಹನಿ ಸಿಂಗ್' ಸದ್ಯ ಸುದ್ದಿಯಲ್ಲಿದ್ದಾರೆ. ಹನಿ ಸಿಂಗ್ ಯಶಸ್ಸಿನ ಉತ್ತುಂಗದಲ್ಲಿರುವಾಗ ಅವರ ವೃತ್ತಿಜೀವನವು ಇದ್ದಕ್ಕಿದ್ದಂತೆ ನೆಲಕಚ್ಚಿತು... ಇದೀಗ ಮತ್ತೊಮ್ಮೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅನೇಕ ಸೂಪರ್‌ಹಿಟ್ ರಾಪ್ ಹಾಡುಗಳು ಮತ್ತು ಹಾಡುಗಳನ್ನು ಹಾಡಿದ ನಂತರ ಹನಿ ಸಿಂಗ್ ಸಂಗೀತದ ಲೋಕದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಕೌಟುಂಬಿಕ ಸಮಸ್ಯೆ ಹಾಗೂ ಡ್ರಗ್ಸ್ ನಿಂದಾಗಿ ಹನಿ ಸಿಂಗ್ ನಾಪತ್ತೆಯಾಗಿದ್ದರು. 


COMMERCIAL BREAK
SCROLL TO CONTINUE READING

ಮಧ್ಯ ವ್ಯಸನದಿಂದಾಗಿ ಹನಿ ಸಿಂಗ್ ಯಶಸ್ಸಿನ ಶಿಖರದಿಂದ ನೇರವಾಗಿ ಕುಸಿದರು. ಇಂದಿಗೂ ಹನಿ ಸಿಂಗ್ ಮೊದಲಿನಂತೆ ಜನಪ್ರಿಯತೆ ಗಳಿಸಲು ಶ್ರಮಿಸುತ್ತಿದ್ದಾರೆ. ಹನಿ ಸಿಂಗ್ ಮ್ಯೂಸಿಕ್ ಆಲ್ಬಂಗಳು ಮತ್ತು ಲೈವ್ ಕನ್ಸರ್ಟ್‌ಗಳ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲಲು ಸಿದ್ಧರಾಗಿದ್ದಾರೆ. ಇದರೊಂದಿಗೆ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಹನಿ ಸಿಂಗ್ ಅಭಿಮಾನಿಗಳಿಗೆ ಉತ್ತಮ ಸಲಹೆ ನೀಡಿದ್ದಾರೆ. 


ಇದನ್ನೂ ಓದಿ-South Actress: ಸಹ ನಟರು ಶ್ರೀದೇವಿಗೆ ಏಕೆ ಹೆದರುತ್ತಿದ್ದರು? ಅಸಲಿ ಸತ್ಯ ಇದು!!


ಗಾಂಜಾ ಸೇದಬೇಡಿ: ಅಭಿಮಾನಿಗಳಿಗೆ ಹನಿ ಸಿಂಗ್ ಸಲಹೆ: 
ಇತ್ತೀಚೆಗಷ್ಟೇ ಹನಿ ಸಿಂಗ್ ಮ್ಯೂಸಿಕ್‌ ಕಾನ್ಸರ್ಟ್‌ ನೀಡಿದ್ದರು.. ಆ ಸಮಯದಲ್ಲಿ YO YO ಹನಿ ಸಿಂಗ್ ಇದ್ದಕ್ಕಿದ್ದಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದು.. "ಸಹೋದರ ಮತ್ತು ಸಹೋದರಿಯರೇ ಗಾಂಜಾ ಸೇದಬೇಡಿ.., ಈ ಚಟದಿಂದ ನನ್ನ ಐದು ವರ್ಷಗಳು ವ್ಯರ್ಥವಾಯಿತು, ನಿಮಗೆ ಬೇಕಾದಷ್ಟು ಮದ್ಯ ಸೇವಿಸಿ ಆದರೆ ಗಾಂಜಾ ಸೇದಬೇಡಿ.. ಅದರಿಂದಲೇ ನನ್ನ ಜೀವನ ಹಾಳಾಗಿದೆ" ಎಂದು ಹನಿ ಸಿಂಗ್ ಅವರು ತಮ್ಮ ಮನದಾಳದಿಂದ ಅಭಿಮಾನಿಗಳಿಗೆ ಈ ಸಲಹೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಹನಿ ಸಿಂಗ್ ಅವರ ಹೇಳಿಕೆಯಿಂದ ಗಾಂಜಾ ತನ್ನ ಜೀವನವನ್ನೇ ಹಾಳು ಮಾಡಿದೆ ಎಂಬುದು ಗೊತ್ತಾಗಿದೆ.


ಇದನ್ನೂ ಓದಿ-Holi 2024 : ಬಾಲಿವುಡ್ ನಟ-ನಟಿಯರ ಈ ಬಾರಿಯ ಹೋಲಿ ಆಚರಣೆ ಹೀಗಿದೆ ನೋಡಿ


ಹನಿ ಸಿಂಗ್ ಮತ್ತು ಬಾದ್ ಶಾ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಹನಿ ಸಿಂಗ್ ಅವರ ಹಲವು ಹಾಡುಗಳನ್ನು ಬಾದ್‌ಶಾ ಬರೆದಿದ್ದಾರೆ. ಈ ರಾಪ್ ಹಾಡುಗಳು ಪ್ರಪಂಚದಾದ್ಯಂತ ಬಂಪರ್‌ಹಿಟ್ ಆಗಿವೆ. ಆದರೆ ಹನಿ ಸಿಂಗ್ ತನ್ನಿಂದಾಗಿ ಜನಪ್ರಿಯವಾಗುತ್ತಿರುವುದನ್ನು ಅರಿತ ಬಾದ್ ಷಾ ನಂತರ ಆತನಿಗೆ ಸಾಹಿತ್ಯ ಬರೆಯುವುದನ್ನು ನಿಲ್ಲಿಸಿದ. ಇದೀಗ ಹನಿ ಸಿಂಗ್ ಮತ್ತು ಬಾದ್‌ಶಾ ಹಾಡುಗಳನ್ನು ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ.


ಹನಿ ಸಿಂಗ್ ಯಾರು?: 
ಹನಿ ಸಿಂಗ್ 15 ಮಾರ್ಚ್ 1983 ರಂದು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಜನಿಸಿದರು. ಹನಿ ಜನಪ್ರಿಯ ರಾಪರ್ ಮತ್ತು ಗಾಯಕ, ಪ್ರಪಂಚದಾದ್ಯಂತ ಅವರನ್ನು 'ಯೋ ಯೋ ಹನಿ ಸಿಂಗ್' ಎಂದು ಕರೆಯುತ್ತಾರೆ. ಹನಿ ಸಿಂಗ್ ಅವರ ತಂದೆಯ ಹೆಸರು ಸರಬ್ಜಿತ್ ಸಿಂಗ್ ಮತ್ತು ತಾಯಿಯ ಹೆಸರು ಭೂಪಿಂದರ್ ಕೌರ್. ಹನಿ ಸಿಂಗ್ ದೆಹಲಿಯ ಗುರುನಾನಕ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. 1995 ರಲ್ಲಿ, ಹನಿ ಸಿಂಗ್ ಇಂಗ್ಲಿಷ್ ಹಾಡುಗಳನ್ನು ಕೇಳಲು ಪ್ರಾರಂಭಿಸಿದರು. ಅವರು ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿ, 'ಇಂಗ್ಲಿಷ್ ಬೀಟ್', 'ಬ್ರೌನ್ ರಾಂಗ್', 'ಗಬ್ರು', 'ಲುಗಿ ಡ್ಯಾನ್ಸ್', 'ಪಾರ್ಟಿ ವಿತ್ ಭೂತನಾಥ್', 'ದೇಸಿ ಆರ್ಟಿಸ್ಟ್', 'ಲವ್ ಡೋಜ್', 'ಸನ್ನಿ ಸನ್ನಿ' ಮುಂತಾದ ಹಲವು ಹಾಡುಗಳನ್ನು ಹಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.