ಲವರ್ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ.. ಡಿವೋರ್ಸ್.. ಪ್ರಖ್ಯಾತ ಸಿರೀಯಲ್ ನಟಿಯ ಬಾಳಲ್ಲಿ ದುರಂತ!
Famous Serial Actress: ಸಿನಿಮಾ/ಟಿವಿ ಇಂಡಸ್ಟ್ರಿಯಲ್ಲಿ ಪ್ರೀತಿಯಲ್ಲಿ ಬೀಳುವುದು ಮತ್ತು ಬ್ರೇಕ್ ಅಪ್ ಆಗುವುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ಈ ನಟಿ ಪತಿಗೆ ವಿಚ್ಛೇದನ ನೀಡಿದ್ದರು. ಯಾಕೆಂದರೆ.. ಆಕೆಯ ಪತಿ ಪ್ರೇಯಸಿಯ ಜೊತೆ ಮಲಗುವ ಕೋಣೆಯಲ್ಲಿ ಸಿಕ್ಕಿಬಿದ್ದಿದ್ದನು..
Jennifer Winget: ಜೆನ್ನಿಫರ್ ವಿಂಗೆಟ್ ಹಿಂದಿ ಸಿರೀಯಲ್ ನಾಯಕಿ. ಈಕೆಗೆ ವೃತ್ತಿ ಜೀವನದಲ್ಲಿ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ.. ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಿದ್ದರೂ, ನಟಿ ಎಂದಿಗೂ ಛಲ ಬಿಡಲಿಲ್ಲ.
ಜೆನ್ನಿಫರ್ ವಿಂಗೆಟ್ ನಾರ್ತ್ ಕೆಲವು ಸಮಯದಿಂದ ಟಿವಿ ಪ್ರಪಂಚದ ರಾಣಿಯಾಗಿದ್ದಾರೆ. ಧಾರಾವಾಹಿಗಳಲ್ಲಿ ತನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಾಳೆ. ಇಷ್ಟೇ ಅಲ್ಲದೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾಳೆ ಈ ಚೆಲುವೆ.
ಇದನ್ನೂ ಓದಿ-ಭೀಮ ಚೆಲುವೆ ಪ್ರಕೃತಿ ಸೌಂದರ್ಯಗೆ ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶ
ಜೆನ್ನಿಫರ್ ತನ್ನ ವೃತ್ತಿಜೀವನದಲ್ಲಿ 'ದಿಲ್ ಮಿಲ್ ಗಯೆ', 'ಬೇಹದ್', 'ಕಹಿನ್ ತೊ ಹೋಗಾ', ನಂತಹ ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ತೆರೆಯ ಮೇಲೆ ರಾಣಿಯಂತೆ ಮುಂದುವರಿಯುವ ಜೆನ್ನಿಫರ್ ಜೀವನದಲ್ಲಿ ಸೋತಿದ್ದಾಳೆ. ಈಕೆಯ ಹಿಂದಿನ ವಿಷಯ ತಿಳಿದರೆ ನಮಗೂ ನೋವಾಗುತ್ತದೆ.
ಜೆನ್ನಿಫರ್ ವಿಂಗೆಟ್ ಚಿಕ್ಕ ವಯಸ್ಸಿನಲ್ಲಿ ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು. ಇಬ್ಬರೂ ಮೊದಲ ಬಾರಿಗೆ ಟಿವಿ ಶೋನಲ್ಲಿ ಭೇಟಿಯಾದರು. ಮೊದಲು ಸ್ನೇಹಿತರಾಗಿದ್ದ ಅವರು ನಂತರ ಪ್ರೇಮಿಗಳಾಗಿ ಮದುವೆಯಾಗಿದ್ದರು.. ಆದರೆ ಇವರಿಬ್ಬರೂ ಹೆಚ್ಚು ಕಾಲ ಜೊತೆಯಾಗಿ ಇರಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ-ನಟಿ ದೀಪಿಕಾ ಪುತ್ರಿಯ ಪೋಟೋ ಲೀಕ್.. ಎಷ್ಟು ಮುದ್ದಾಗಿದ್ದಾಳೆ ಗೊತ್ತಾ ದುವಾ!?
ವರದಿಯ ಪ್ರಕಾರ, ಜೆನ್ನಿಫರ್ .. ಕರಣ್ ಸಿಂಗ್ ಗ್ರೋವರ್ ತನ್ನ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು... ಅವರ ಮದುವೆಯ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅದನ್ನು ನೋಡಿದ ಜೆನ್ನಿಫರ್ ಕರಣ್ ಗೆ ಎಲ್ಲರ ಮುಂದೆ ಆತನಿಗೆ ಕಪಾಳಮೋಕ್ಷ ಮಾಡಿದ್ದರಂತೆ.. ಪತಿ ತನಗೆ ಮೋಸ ಮಾಡಿದ್ದರಿಂದ ಜೆನ್ನಿಫರ್ ಳ ನೋವು ಅಷ್ಟಿಷ್ಟಲ್ಲ..ಮದುವೆಯಾದ 10 ತಿಂಗಳಲ್ಲೇ ಆತನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ವಿಚ್ಛೇದನ ಪಡೆದಿದ್ದಾರೆ. ಆದರೆ ಜೆನ್ನಿಫರ್ ಅವರ ಪತಿ ಕರಣ್ ಸಿಂಗ್ ಗ್ರೋವರ್ ಇದುವರೆಗೆ ಮೂರು ಮದುವೆಯಾಗಿದ್ದಾರೆ.
ಆದರೆ ಜೆನ್ನಿಫರ್ ಇನ್ನೂ ಮದುವೆಯಾಗಿಲ್ಲ. ಹಿಂದಿನ ಘಟನೆಯಿಂದಾಗಿ ನಟಿ ತನ್ನ ಜೀವನದಲ್ಲಿ ಹೊಸ ಸಂಗಾತಿಯನ್ನು ಪಡೆದುಕೊಳ್ಳಲು ಇಚ್ಚಿಸಿಲ್ಲ... ಈಗ ಜೆನ್ನಿಫರ್ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.