famous singer sunidhi chauhan: ಈ ಸಿಂಗರ್‌ ರಿಯಾಲಿಟಿ ಶೋ ಗೆದ್ದ ನಂತರ ಇಂಡಸ್ಟ್ರಿಗೆ ಬಂದು ಸಾಕಷ್ಟು ಕೀರ್ತಿ ಗಳಿಸಿದರು. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವನ್ನು ಇವರು ಎದುರಿಸಿದ್ದಾರೆ. ಪ್ರೀತಿಯಲ್ಲಿ ಬಿದ್ದು, ಧರ್ಮದ ಗೋಡೆಯನ್ನು ದಾಟಿ ಕುಟುಂಬದ ವಿರುದ್ಧವಾಗಿ ಮದುವೆ ಆದರು. ಆದರೆ ಈ ಸಂಬಂಧ ಕೇವಲ ಒಂದು ವರ್ಷದಲ್ಲಿ ಮುರಿದುಹೋಯಿತು.  


COMMERCIAL BREAK
SCROLL TO CONTINUE READING

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಪ್ರಸಿದ್ಧರಾದ ಗಾಯಕಿ ಕೇವಲ ಧ್ವನಿಯಲ್ಲಿ ಮಾತ್ರವಲ್ಲ, ನೋಟದಲ್ಲಿಯೂ ಸುಂದರಿ. ಮ್ಯೂಸಿಕ್ ರಿಯಾಲಿಟಿ ಶೋ ಗೆಲ್ಲುವ ಮೂಲಕ ರಾತ್ರೋರಾತ್ರಿ ಎಲ್ಲರ ಗಮನ ಸೆಳೆದವರು. ಯಶಸ್ಸಿನತ್ತ ಓಡುತ್ತಿದ್ದ ಈ ಹುಡುಗಿ ಪ್ರೇಮಕ್ಕಾಗಿ ಮನೆಯವರ ವಿರೋಧ ಕಟ್ಟಿಕೊಂಡರು. ತನಗಿಂತ 13 ವರ್ಷ ದೊಡ್ಡ ಹುಡುಗನನ್ನು ಮದುವೆಯಾದರು. ನಂತರ ಅವರು ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು. 2000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಈ  ಗಾಯಕಿಗೆ 9 ವರ್ಷಗಳ ನಂತರ ನಿಜವಾದ ಪ್ರೀತಿ ಸಿಕ್ಕಿದೆ.


ಇದನ್ನೂ ಓದಿ: ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್‌ ತಾಯಿ ಕನ್ನಡದ ಹೆಸರಾಂತ ನಟಿ... ಅಣ್ಣಾವ್ರ ತಂಗಿಯಾಗಿ ನಟಿಸಿ ಜನಪ್ರಿಯತೆ ಪಡೆದ ತಾರೆ! ಯಾರೆಂದು ಗೊತ್ತಾಯ್ತ?


ಈ ಗಾಯಕಿ ಬೇರೆ ಯಾರೂ ಅಲ್ಲ ಸುನಿಧಿ ಚೌಹಾಣ್. ಇಂದು ಚಿತ್ರರಂಗದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿಯಲ್ಲಿ ಮಾತ್ರವಲ್ಲದೆ ಮಲಯಾಳಂ, ಪಂಜಾಬಿ, ಕನ್ನಡ, ಬೆಂಗಾಲಿ ಮತ್ತು ಭೋಜ್‌ಪುರಿ ಮುಂತಾದ ಹಲವು ಭಾಷೆಗಳಲ್ಲಿ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 1996 ರಲ್ಲಿ, ದೂರದರ್ಶನದಲ್ಲಿ ಪ್ರಸಾರವಾದ 'ಮೇರಿ ಆವಾಜ್ ಸುನೋ' ಎಂಬ ಸಂಗೀತ ರಿಯಾಲಿಟಿ ಶೋ ಮನ್ನಣೆ ಪಡೆದರು. ಕೇವಲ 13 ನೇ ವಯಸ್ಸಿನಲ್ಲಿ ಸಂಗೀತ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. 


14 ಆಗಸ್ಟ್ 1983 ರಂದು ನವದೆಹಲಿಯಲ್ಲಿ ಜನಿಸಿದ ಸುನಿಧಿ ಚೌಹಾಣ್, ಬಾಲಿವುಡ್‌ನಲ್ಲಿ ವಿಭಿನ್ನ ಸ್ಥಾನವನ್ನು ಸೃಷ್ಟಿಸಿದ್ದಾರೆ. ಭಾರತದ 'ಟೇಲರ್ ಸ್ವಿಫ್ಟ್' ಎಂದು ಸುನಿಧಿ ಚೌಹಾಣ್ ಕರೆಯಲ್ಪಡುತ್ತಾರೆ. 


ಸುನಿಧಿ ಚೌಹಾಣ್ ಮುಂಬೈಗೆ ಬಂದಾಗ ನೃತ್ಯ ನಿರ್ದೇಶಕ ಬಾಬಿ ಖಾನ್ ಅವರನ್ನು ಭೇಟಿಯಾದರು. ಸುನಿಧಿ ಬಾಬಿ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಧರ್ಮದ ಗೋಡೆ ದಾಟಿ ಕೇವಲ 18 ನೇ ವಯಸ್ಸಿನಲ್ಲಿ ಬಾಬಿ ಖಾನ್ ಅವರನ್ನು ವಿವಾಹವಾದರು. ಆದರೆ ಸುನಿಧಿ ಮತ್ತು ಬಾಬಿ ನಡುವಿನ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಅವರಿಬ್ಬರೂ ಕೇವಲ ಒಂದು ವರ್ಷದಲ್ಲಿ ವಿಚ್ಛೇದನ ಪಡೆದರು. 


ಇದನ್ನೂ ಓದಿ: BBK11: ಈ ಬಾರಿ ಸುದೀಪ್ ಬದಲು ರಿಷಬ್‌ ಶೆಟ್ಟಿ ಬಿಗ್‌ ಬಾಸ್‌ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?‌


ವರದಿಗಳ ಪ್ರಕಾರ, ಸುನಿಧಿ ಚೌಹಾಣ್ ಮತ್ತು ಬಾಬಿ ಖಾನ್ ಒಟ್ಟಿಗೆ ತುಂಬಾ ಸಂತೋಷವಾಗಿದ್ದರು, ಆದರೆ ಅವರ ನಡುವಿನ ಧರ್ಮದ ಗೋಡೆಯಿಂದಾಗಿ, ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ.


2003 ರಲ್ಲಿ ಬಾಬಿ ಖಾನ್ ಜೊತೆಗಿನ ವಿಚ್ಛೇದನದ ನಂತರ ಸುನಿಧಿ ಚೌಹಾಣ್ ಕುಗ್ಗಿ ಹೋದರು. ಆ ಸಮಯದಲ್ಲಿ ಇರಲು ಮನೆ ಇರಲಿಲ್ಲ. ಕೈಯಲ್ಲಿ ಹಣವಿರಲಿಲ್ಲ. ಸುನಿಧಿ ಚೌಹಾಣ್ ಅವರ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಅವರ ಸ್ನೇಹಿತೆ ಅನು ಮಲಿಕ್ ಬೆಂಬಲ ನೀಡಿದರು. 


ನಂತರ ಸುನಿಧಿ ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದರು. ಮೊದಲ ಪತಿಯಿಂದ ವಿಚ್ಛೇದನ ಪಡೆದು ಸುಮಾರು 9 ವರ್ಷಗಳ ನಂತರ ಸುನಿಧಿಯ ಜೀವನದಲ್ಲಿ ಪ್ರೀತಿ ಮತ್ತೊಮ್ಮೆ ಮೂಡಿತು. ಸ್ನೇಹಿತ ಹಿತೇಶ್ ಸೋನಿಕ್ ಸುನಿಧಿಯನ್ನು ಮದುವೆಯಾದರು.


ಸುನಿಧಿ ಮತ್ತು ಹಿತೇಶ್ 2012 ರಲ್ಲಿ ಮದುವೆಯಾದರು. 2018 ರಲ್ಲಿ ತಮ್ಮ ಮಗುವನ್ನು ಸ್ವಾಗತಿಸಿದರು. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹಲವು ವರದಿಗಳು ಬಂದಿದ್ದವು, ಆದರೆ ಸುನಿಧಿ ಅವೆಲ್ಲವನ್ನೂ ಅಲ್ಲಗಳೆದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.