Famous Actress about Casting Counch: ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ದಕ್ಷಿಣಕ್ಕೆ ಹೋಲಿಸಿದರೆ, ಉತ್ತರದಲ್ಲಿ ನಾಯಕಿಯರು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳಗಳು ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿಗೆ ನಾಯಕಿಯರು ಮತ್ತು ಪಾತ್ರಧಾರಿಗಳು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ.‌


COMMERCIAL BREAK
SCROLL TO CONTINUE READING

ಇದನ್ನೂ ಓದಿ-Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್‌ ಪ್ರಾರ್ಥನೆ


 ಇತ್ತೀಚೆಗಷ್ಟೇ ತೆಲುಗು ನಟಿಯೊಬ್ಬರು ಕಮಿಟ್‌ಮೆಂಟ್ ನೀಡಿದರೂ ಆಫರ್‌ಗಳು ಬರುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಾಂಡಿ ಸರಣಿಯಲ್ಲಿ ಅಭಾ ರತ್ನ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಇದರಲ್ಲಿ ಹಿಂದಿ ನಟಿ ಅಭಾ ರತ್ನ ಮನಿಷಾ ಕೊಯಿರಾಲಾ ಹದಿಹರೆಯದ ಹುಡುಗಿಯಾಗಿ ನಟಿಸಿದ್ದಾರೆ. 


ಇದನ್ನೂ ಓದಿ-‘ಬ್ಯಾಂಕ್ of ಭಾಗ್ಯಲಕ್ಷ್ಮಿ’ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿದ ನಿರ್ದೇಶಕ ಸಿಂಪಲ್ ಸುನಿ


ಇತ್ತೀಚೆಗಷ್ಟೇ ಇಂಡಸ್ಟ್ರಿಯಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಅಭಾ ರತ್ನ ಮಾತನಾಡಿದ್ದಾಳೆ. "ವೃತ್ತಿಜೀವನದ ಆರಂಭದ ದಿನಗಳಲ್ಲಿ ಕೆಲವರು ನನಗೆ ಮೀಟಿಂಗ್ ಇದೆ ಎಂದು ಕೆಲವರು ಫೋನ್ ಮಾಡಿ ಹೇಳುತ್ತಿದ್ದರು.. ಆಗ ನನಗೆ ಆ ಫೋನ್ ಕರೆಗಳ ಬಗ್ಗೆ ಅಷ್ಟಾಗಿ ಅರ್ಥವಾಗಿರಲಿಲ್ಲ.. ಆದರೆ ಅದು ಮೀಟಿಂಗ್‌ ಅಲ್ಲ ಎಂದು ಅನುಮಾನಕ್ಕೆ ಬರುತ್ತಿತ್ತು... ನಾನು ಅವರು ಕರೆದ ಕೂಡಲೇ ಹೋಗುತ್ತಲೇ ಇರಲಿಲ್ಲ.. ಹಾಗೆ ಮಾಡುವ ಧೈರ್ಯವೂ ನನಗಿರಲಿಲ್ಲ. ಆದರೆ ಯಾರೂ ನೇರವಾಗಿ ನನ್ನನ್ನು ಸಂಪರ್ಕಿಸಿಲ್ಲ.. ಅಲ್ಲದೇ ಅಂತಹ ಸಂದರ್ಭಗಳನ್ನು ನೇರವಾಗಿ ಎದುರಿಸಿಲ್ಲ ಎಂದಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅಭ ರತ್ನ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.