Shweta Tiwari statement about the rumors: ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೇ ಹೆಸರುವಾಸಿಯಾಗಿದ್ದಾರೆ. ಇದೀಗ ತಮ್ಮ ಮಗಳ ಬಗ್ಗೆಯೇ ಶಾಕಿಂಗ್‌ ಹೇಳಿಕೆ ನೀಡಿದ ಅವರು, ಅಚ್ಚರಿಗೊಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಪಾಲಕ್ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಅಪ್ಪು ಜೊತೆ ನಟಿಸಿ ʼಪರಮಾತ್ಮʼನ ಪ್ರೀತಿಯಲ್ಲಿ ಪರವಶಳಾಗಿದ್ದ ನಟಿ ದೀಪಾ ಸನ್ನಿಧಿ ಈಗ ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ ಗೊತ್ತಾ?


ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, "ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ. ಇವತ್ತು ಒಬ್ಬ, ನಾಳೆ ಮತ್ತೊಬ್ಬ... ಪ್ರತಿ ನಿಮಿಷಕ್ಕೆ ಆಕೆಗೆ ಒಬ್ಬ ಬಾಯ್ ಫ್ರೆಂಡ್‌ ಬೇಕು ಎಂಬೆಲ್ಲಾ ಅರ್ಥಗಳಲ್ಲಿ ವದಂತಿ ಹರಿದಾಡುತ್ತವೆ ಈ ಬಗ್ಗೆ ಹೆಚ್ಚು ಗಮನ ಹರಿಸಲ್ಲ" ಎಂದಿದ್ದಾರೆ.


"ಆಕೆ ಬಲಶಾಲಿ ಹೌದು. ಆದರೆ ನಾಳೆ ಕೆಲವು ಕಾಮೆಂಟ್, ಕೆಲವು ಲೇಖನ, ಕೆಲವು ಅಂತಹ ವಿಷಯಗಳು ಆಕೆಗೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಈ ರೀತಿಯ ಏನಾದರೂ ಸಂಭವಿಸಬಹುದೆಂದು ನಾನು ಹೆದರುತ್ತೇನೆ ಅವಳು ಇನ್ನೂ ಮಗು" ಎಂದು ಹೇಳಿದ್ದಾರೆ.


ಪಾಲಕ್ ತಿವಾರಿ, ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾಗಿದ್ದು, ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಶ್ವೇತಾ ಮತ್ತು ರಾಜಾ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು.


ಇದನ್ನೂ ಓದಿ: ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು: ಇಂದಿಗೂ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ ಇವರು!


2021 ರಲ್ಲಿ, ಪಾಲಕ್ ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಪಾಲಕ್ ಅನೇಕ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋ ಕೂಡ ಕಂಡುಬಂದಿದೆ. ಹೆಚ್ಚಾಗಿ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಈಕೆ ಹೆಸರು ಲಿಂಕ್ ಆಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ