Kiccha Sudeep photo in blood : ನಟ ಕಿಚ್ಚ ಸುದೀಪ್‌ ಬಗ್ಗೆ ಹೆಚ್ಚೇನು ಹೇಳೋಕೆ ಆಗುತ್ತೆ ಹೇಳಿ.. ತಮ್ಮ ನಟನೆ, ಸ್ಟೈಲ್‌, ಸ್ಮೈಲ್‌, ಸಾಮಾಜಿಕ ಕಾರ್ಯಗಳ ಮೂಲಕ ಅದೇಷ್ಟೋ ಹೃದಯಗೆದ್ದ ಅತ್ಯುತ್ತಮ ನಟ. ಕನ್ನಡ ಸಿನಿ ಪ್ರೇಮಿಗಳಿಂದ ಕಿಚ್ಚ ಎಂದು ಬಿರುದಾಂಕಿತನಾದ ಅಭಿನಯ ಚಕ್ರವರ್ತಿಯನ್ನು ಅವರ ಅಭಿಮಾನಿಗಳು ಹೃದಯಲ್ಲಿಟ್ಟುಕೊಂಡು ಪ್ರೀತಿ ಮಾಡ್ತಾರೆ. ಅಲ್ಲದೆ, ಫೋಟೋವನ್ನು ಎದೆ, ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಾರೆ.


COMMERCIAL BREAK
SCROLL TO CONTINUE READING

ಸಧ್ಯ ಯುವತಿಯೊರ್ವಳು ತಮ್ಮ ರಕ್ತದಿಂದ ಕಿಚ್ಚನ ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾರೆ. ಯಸ್‌... ಶಿವಮೊಗ್ಗ ನಿವಾಸಿ ವೈಷ್ಣವಿ ಎಂಬುವರು ತಮ್ಮ ರಕ್ತದಲ್ಲಿ ಸುದೀಪ್ ಅವರ ಫೋಟೊ ಬಿಡಿಸಿಕೊಂಡಿದ್ದು, ಇದೀಗ ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


ಇದನ್ನೂ ಓದಿ: ವಿಭಿನ್ನ ಬಯಕೆ ಸಹಜ ಆದರೆ..ನಟಿ ಕಂಗನಾ ಆಸೆಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್..!


ರಕ್ತದಲ್ಲಿ ಮೂಡಿದ ಕಿಚ್ಚನ ಫೋಟೋವನ್ನು ಅವರ ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ತಮ್ಮ ಫೋಟೋ ವೈರಲ್‌ ಆದ ಬೆನ್ನಲ್ಲೆ, ಸುದೀಪ್ ಅವರು ಕೂಡ ಇದನ್ನು ರಿಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಇಮೋಜಿ ಹಾಕಿದ್ದಾರೆ. ಈ ಮೂಲಕ ಅಭಿಮಾನಿಯ ಅಭಿಮಾನ ಕಂಡು ಮೂಕವಿಸ್ಮಿತರಾಗಿದ್ದಾರೆ.


ನಟ ಯಶ್ ಕಾಣೆಯಾಗಿದ್ದಾರೆ.! ರಾಕಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ


ಸಧ್ಯ ಕಿಚ್ಚ ಸುದೀಪ್‌ ಅವರು ತಮ್ಮ ಮುಂಬರುವ ಚಿತ್ರ ಕಿಚ್ಚ 46 ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್‌ ಧಾನು ನಿರ್ಮಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಟೀಸರ್‌ ರಿಲೀಸ್‌ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.