Fan Letter to Yash : ರಾಕಿಂಗ್‌ ಸ್ಟಾರ್‌ ಅವರ ಮುಂದಿನ ಚಿತ್ರ ಯಾವುದು ಅಂತ ಅವರ ಅಭಿಮಾನಿಗಳು ತಲೆಕಡಿಸಿಕೊಂಡಿದ್ದಾರೆ. ಇದುವರೆಗೂ ರಾಕಿಭಾಯ್‌ ಮಾತ್ರ ತಮ್ಮ ಮುಂದಿನ ಪ್ರಾಜೆಕ್ಟ್‌ ಕುರಿತು ಎಲ್ಲೂ ಒಂದು ಮಾತು ಹೇಳಿಲ್ಲ. ಇದರಿಂದ ರಾಮಾಚಾರಿ ಫ್ಯಾನ್ಸ್‌ಗೆ ಬೇಸರ ಉಂಟಾಗಿದೆ. ಇದೀಗ ಬೇಸತ್ತ ಅಭಿಮಾನಿಯೊಬ್ಬ ಯಶ್‌ಗೆ ಪತ್ರ ಬರೆದು ಬೇಗನೆ ಮುಂದಿನ ಸಿನಿಮಾ ಅನೌನ್ಸ್‌ ಮಾಡುವಂತೆ ಮನವಿ ಮಾಡಿದ್ದಾರೆ. ಲೆಟರ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಹೌದು... ಕನ್ನಡದ ಯಶ್‌ ಕೆಜಿಎಫ್ ಚಾಪ್ಟರ್ 2 ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ರಾರಾಜಿಸುತ್ತಿದ್ದಾರೆ. ಯಶ್‌ ಕಾಲಿಟ್ಟಲೆಲ್ಲ ಅಭಿಮಾನಿಗಳು ರಾಕಿ ರಾಕಿ ಎಂಬ ಘೋಷಣೆ ಕೇಳಿಬರುತ್ತಿವೆ. ಆದ್ರೆ ಯಶ್‌ ಮೇಲೆ ಅವರ ಅಭಿಮಾನಿಗಳಿಗಿರುವ ಬೇಸರ ಅಂದ್ರೆ, ಯಾವುದೇ ಸಿನಿಮಾ ಅನೌನ್ಸ್‌ ಮಾಡದೇ ಇರುವುದು. ಹೌದು ಸಾಕಷ್ಟು ಸಮಯವಾಗಿದೆ. ಇದು ವರೆಗೂ ರಾಕಿ ತಮ್ಮ ಮುಂಬರುವ ಚಿತ್ರದ ಕುರಿತು ಎಲ್ಲೂ ಮಾಹಿತಿ ಹೇಳಿಲ್ಲ. ಇದೀಗ ಇದರಿಂದ ಬೇಸತ್ತಿರುವ ಫ್ಯಾನ್ಸ್‌ ಒಬ್ಬ ಪತ್ರ ಬರೆದು ಮನವಿ ಮಾಡಿದ್ದಾರೆ.


ಇದನ್ನೂ ಓದಿ:  Pathaan Ticket Price : ʼಪಠಾಣ್ʼ ಟಿಕೆಟ್ ದರ ಇಷ್ಟು ಕಡಿಮೆನಾ..? ಫ್ಯಾನ್ಸ್‌ ಫುಲ್ ಖುಷ್‌


ಇನ್ನು ಯಶ್ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್‌ ನಿರ್ದೇಶಕರ ಜೊತೆ ಮಾಡಲಿದ್ದಾರೆ ಅದಕ್ಕಾಗಿ ಅವರು ವಿದೇಶಗಳಿಗೆ ತೆರಳಿದ್ದರು ಎನ್ನವ ಮಾತುಗಳು ಕೇಳಿಬಂದಿದ್ದವು. ಅಲ್ಲದೆ, ಅವತಾರ 2 ಸಿನಿಮಾ ನಿರ್ದೇಶಕ ಜೊತೆ ಕೈಗೂಡಿಸಿದ್ದು, ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಸಿನಿಮಾ ಮಾಡ್ತಾರೆ ಯಶ್‌ ಅಂತ ಇಂಡಿಯನ್‌ ಸಿನಿಮಾ ಇಂಡ್ರಸ್ಟ್ರೀಯಲ್ಲಿ ಟಾಕ್‌ ಆಗಿತ್ತು. ಈ ವಿಚಾರ ಕೇಳಿದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದರು. ಬನ್ನಿ ಅಭಿಮಾನಿ ಯಶ್‌ ಅವರಿಗೆ ಏನಂತಾ ಪತ್ರ ಬರೆದಿದ್ದಾರೆಂದು ನೋಡುವ..


ಇವರಿಗೆ,
ಯಶ್, ನಟ,
ಭಾರತೀಯ ಚಿತ್ರರಂಗ
ವಿಷಯ: ಯಶ್‌ಬಾಸ್‌ ರವರ ಮುಂದಿನ ಚಿತ್ರದ ಅಪಡೇಟ್‌ ಬಗ್ಗೆ


ಮೊದಲಿಗೆ ವಿಶ್ವದ ದೃಷ್ಟಿಯನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿದ ನಮ್ಮ ಪ್ರೀತಿಯ ಆರಾಧ್ಯ ದೈವ ರಾಕಿಂಗ್‌ ಸ್ಟಾರ್‌ ಯಶ್‌ ಬಾಸ್‌ ರವರಿಗೆ ಪ್ರತ್ಪೂರ್ವಕ ಧನ್ಯವಾದಗಳು. ಮೇಲಿನ ವಿಷಯಕ್ಕೆ ಸ೦ಬ೦ಧಿಸಿದಂತೆ ಎಲ್ಲರಿಗೂ ತಿಳಿದಂತೆ ಯಶ್ ಬಾಸ್‌ ರವರಿಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳು ಇದ್ದು ಎಲ್ಲರೂ ತಮ್ಮ ನೆಚ್ಚಿನ ನಟನನ್ನು ಮತ್ತೆ ತೆರೆಯ ಮೇಲೆ ನೋಡಲು ಆಶಿಸುತ್ತಿರುತ್ತಾರೆ, ಕೆ.ಜಿ.ಎಫ್‌ ಭಾಗ 2 ತೆರೆಕಂಡು ಸುಮಾರು 282 ದಿನಗಳು ಕಳೆದಿದ್ದು ಮುಂದಿನ ಚಿತ್ರದ ಬಗ್ಗೆ ಸುಳಿವು ಕೂಡ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ , ಈಗಾಗಲೆ ತಿಳಿದಿರುವ ಹಾಗೆ ನಿಮ್ಮ ಯೋಜನೆ, ಆಲೋಚನೆ ಹಾಗೂ ತಯಾರಿಯು ನಮ್ಮ ಊಹೆಗೂ ದೊಡ್ಡದಾಗಿಯೇ ಇರುತ್ತದೆ ಆದರೂ ಅಭಿಮಾನಿಗಳ ತವಕ ಹಾಗೂ ಉತ್ಸಾಹವನ್ನು ಮನದಲ್ಲಿಟ್ಟುಕೊ೦ಡು /ಯಶ್‌19 ಚಿತ್ರದ ಘೋಷಣೆ ಹಾಗೂ ಶೀರ್ಷಿಕೆಯನ್ನು ಆದಷ್ಟು ಬೇಗ ಜಗತ್ತಿನ ಮುಂದೆ ತರಬೇಕೆಂದು ಈ ಪತ್ರದ ಮೂಲಕ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.


ವಂದನೆಗಳೊಂದಿಗೆ
ಇಂತಿ
ತಮ್ಮ ಅಭಿಮಾನಿಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.