ಬೆಂಗಳೂರು: 'ಜೇಮ್ಸ್‌' ಸಿನಿಮಾ ಬಗ್ಗೆ ಹೇಳುತ್ತಾ ಕುಳಿತರೆ ಸಮಯವೇ ಸಾಲಲ್ಲ.ಯಾಕಂದ್ರೆ ಟೀಸರ್‌ ಹಾಗೂ 1 ಹಾಡಿನಿಂದ 'ಜೇಮ್ಸ್‌' ಸಿನಿಮಾ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ.ಹೀಗಾಗಿಯೇ 'ಜೇಮ್ಸ್‌' ಬಿಡುಗಡೆಗೆ ಇನ್ನೂ 10 ದಿನ ಬಾಕಿ ಇದ್ದರೂ ಎಲ್ಲೆಲ್ಲೂ 'ಅಪ್ಪು' ಕಟೌಟ್ ಗಳೇ ರಾರಾಜಿಸುತ್ತಿವೆ.ಈ ಮೂಲಕ ಜೇಮ್ಸ್‌ ಚಿತ್ರ ಬರಮಾಡಿಕೊಳ್ಳಲು ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿದೆ.


COMMERCIAL BREAK
SCROLL TO CONTINUE READING

ಅಪ್ಪು ಯಾವ ಸಿನಿಮಾ ಮಾಡಿದ್ರೂ ಭಾರಿ ನಿರೀಕ್ಷೆ ಇದ್ದೇ ಇರುತ್ತಿತ್ತು. ಅಪ್ಪು ಮಾಡುವ‌ ಪ್ರತಿ ಸಿನಿಮಾಗಳು ಕುಟುಂಬ ಸಮೇತ ಕೂತು ನೋಡಬಹುದಾದ ಸಿನಿಮಾಗಳೇ ಆಗಿರುತ್ತಿದ್ದವು.ಆದರೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಇಂದು ನಮ್ಮೊಂದಿಗಿಲ್ಲ.ಈ ನೋವಲ್ಲೇ ಅವರ ಕೊನೆ ಸಿನಿಮಾಗೆ ಕಾಯುವ ಪರಿಸ್ಥಿತಿ ಎದುರಾಗಿದೆ.


ಇದನ್ನೂ ಓದಿ: Puneet Rajkumar : ಪುನೀತ್ ರಾಜಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ!


ಕಟೌಟ್‌ ಹಬ್ಬ..!


ಈಗಾಗಲೇ ಸಾವಿರಾರು ಥಿಯೇಟರ್‌ಗಳಲ್ಲಿ ಅಪ್ಪು ಸಿನಿಮಾ 'ಜೇಮ್ಸ್‌' ರಿಲೀಸ್‌ ಆಗೋದು ಗ್ಯಾರಂಟಿ. ಅದರಲ್ಲೂ ಕರ್ನಾಟಕದಲ್ಲೇ ನೂರಾರು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಈಗಾಗಲೇ ಬುಕ್‌ ಆಗಿದ್ದು, ಮತ್ತಷ್ಟು ಥಿಯೇಟರ್‌ ಗಳು ಈ ಪಟ್ಟಿಗೆ ಬಂದು ಸೇರಲಿವೆ. ಹೀಗೆ ಕರುನಾಡಿನ ಮಂದಿಗೆ 'ಜೇಮ್ಸ್‌' ಒಂದು ಹಬ್ಬವೇ ಸರಿ ಎನ್ನುವಂತಾಗಿದೆ.


ಇದನ್ನೂ ಓದಿ: Puneeth Rajkumar : ಪುನೀತ್ ರಾಜ್‍ಕುಮಾರ್ ನಿಧನ: ರಾಜ್ಯದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳ!


ಪ್ರಮುಖವಾಗಿ ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ಎದುರು ದೊಡ್ಡ ಕಟೌಟ್‌ ಹಾಕಲಾಗಿದೆ.ಪವರ್‌ ಸ್ಟಾರ್‌ ಪುನೀತ್‌ ಕಟೌಟ್‌ ಜೊತೆಗೆ ವರನಟ ಹಾಗೂ ಕನ್ನಡಿಗರ ಪಾಲಿನ ನೆಚ್ಚಿನ 'ಅಣ್ಣಾವ್ರು' ಡಾ. ರಾಜ್‌ ಕುಮಾರ್‌ ಅವರ ಕಟೌಟ್‌ ಸಹ ಹಾಕಲಾಗಿದೆ. ಈ ಮೂಲಕ 'ಜೇಮ್ಸ್‌' ಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾದು ಕುಳಿತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.