Jr. NTR is new CM : ನಂದಮೂರಿ ತಾರಕ ರಾಮರಾವ್ ಅವರು ತೆಲುಗು ಚಿತ್ರರಂಗದ ಬೆಳವಣಿಗೆಯ ಮೂಲಾಧಾರಗಳಲ್ಲಿ ಒಬ್ಬರು. ಅಲ್ಲದೆ, ತೆಲುಗು ಜನರ ಅಭಿವೃದ್ಧಿಗಾಗಿ ʼತೆಲುಗು ದೇಶಂ ಪಕ್ಷ ಸ್ಥಾಪಿಸಿದ ಒಂಬತ್ತು ತಿಂಗಳಲ್ಲೇ ಮುಖ್ಯಮಂತ್ರಿ ಗಾದಿ ಏರುವ ಮೂಲಕ ಇತಿಹಾಸ ಸೃಷ್ಟಿಸಿದವರು. ಇನ್ನು ಕಳೆದ ಭಾನುವಾರ (ಮೇ 28) ಎನ್‌ಟಿಆರ್ ಅವರ ಶತಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಹೈದರಾಬಾದ್‌ನ ಟ್ಯಾಂಕ್ ಬಂಡ್‌ನಲ್ಲಿರುವ ಎನ್‌ಟಿಆರ್ ಘಾಟ್‌ಗೆ ತೆರಳಿ ನಮನ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ನಂದಮೂರಿ ತಾರಕ ರಾಮರಾವ್‌ ಅವರ ಪುತ್ರ, ಹಿಂದೂಪುರ ಶಾಸಕ, ನಟ ನಂದಮೂರಿ ಬಾಲಕೃಷ್ಣ ಮತ್ತು ಅವರ ಮೊಮ್ಮಕ್ಕಳಾದ ಜೂನಿಯರ್ ಎನ್‌ಟಿಆರ್‌, ನಂದಮೂರಿ ರಾಮಕೃಷ್ಣ ಅವರು ಘಾಟ್‌ಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಅದರಲ್ಲೂ ಜೂನಿಯರ್ ಎನ್‌ಟಿಆರ್ ಘಾಟ್ ತಲುಪುವ ಮುನ್ನವೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ತಾತನ ಸಮಾಧಿಗೆ ನಮನ ಸಲ್ಲಿಸಿ ಎನ್‌ಟಿಆರ್ ಏನೂ ಮಾತನಾಡದೆ ಅಲ್ಲಿಂದ ತೆರಳಿದರು. ಈ ವೇಳೆ ಅಲ್ಲಿ ನೆರದಿದ್ದ ಅವರ ಅಭಿಮಾನಿಗಳು ಮುಂದಿನ ಸಿಎಂ ಎನ್‌ಟಿಆರ್‌, ಸಿಎಂ... ಸಿಎಂ... ಎಂಬ ಘೋಷಣೆ ಕೂಗಿದರು.


Hatya Movie: ಸಸ್ಪೆನ್ಸ್ ಥ್ರಿಲ್ಲರ್ "ಹತ್ಯ" ತೆರೆಗೆ ಬರಲು ಸಿದ್ದ


ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಎನ್‌ಟಿಆರ್‌ ಶತಮಾನೋತ್ಸವ ಸಮಾರಂಭದಲ್ಲಿ ತಾರಕ್‌ ಭಾಗವಹಿಸಿರಲಿಲ್ಲ. ತೆಲುಗು, ಕನ್ನಡ ಸೇರಿದಂತೆ ಬೇರೆ ಚಿತ್ರರಂಗದ ನಟ, ನಟಿಯರು ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದ್ರೆ, ತಾರಕ್ ಬರದಿರುವುದು ಟಾಕ್ ಆಫ್ ದಿ ಇಂಡಸ್ಟ್ರಿಯಾಗಿತ್ತು. ಅಲ್ಲದೆ, ಅವರ ಅಭಿಮಾನಿಗಳ ನಡುವೆ ಈ ಕುರಿತಾಗಿ ವಾರ್‌ ನಡೆದಿತ್ತು. ಆದ್ರೆ, ಆ ದಿನ ತಾರಕ್ ಬರ್ತ್ ಡೇ ಇದ್ದ ಕಾರಣ ಮೊದಲೇ ಫಾರಿನ್ ಟೂರ್ ಪ್ಲಾನ್ ಮಾಡಿದ್ದರು. ಹಾಗಾಗಿ ಅವರು ಹಾಜರಾಗಿರಲಿಲ್ಲ ಎಂದು ಹೇಳಲಾಗಿತ್ತು.


ಇನ್ನು ಜೂ. ಎನ್‌ಟಿಆರ್‌ ತಮ್ಮ ಕಲ್ಯಾಣ್ ರಾಮ್ ಸಹ ಕಂಡು ಬರಲಿಲ್ಲ. ಸಾಮಾನ್ಯವಾಗಿ ಪ್ರತಿ ವರ್ಷ ಇಬ್ಬರು ತಾತನ ಸಮಾಧಿಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಸದ್ಯ ಎನ್.ಟಿ.ಆರ್ ಶತದಿನೋತ್ಸವಕ್ಕೆ ಜೂನಿಯರ್ ಎನ್.ಟಿ.ಆರ್ ಬಾರದಿರುವುದಕ್ಕೆ ನಂದಮೂರಿ ಅಭಿಮಾನಿಗಳಿಗೆ ಬೇಸರವಾಗಿದೆ. ಅಜ್ಜನ ಸಂಭ್ರಮಕ್ಕಿಂತ ವಿದೇಶಿ ಪ್ರವಾಸಗಳೇ ಹೆಚ್ಚಾಯಿತಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಎನ್‌ಟಿಆರ್‌ ಎಂದು ಘೋಷಣೆ ಕೂಗಿದ್ದು ತಾರಕ್‌ ರಾಜಕೀಯಕ್ಕೆ ಬರ್ತಾರಾ ಎನ್ನುವ ಅನುಮಾನ ಮೂಡುವಂತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ