Rocking Star Yash : ಕೊರೋನ ಭೀತಿ: `ಸೆಲ್ಫ್ ಕ್ವಾರಂಟೈನ್` ಆದ ರಾಕಿಂಗ್ ಸ್ಟಾರ್ ಯಶ್..!
ಎರಡು ವಾರಗಳ ಕಾಲ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರಿಂದ ದೂರದಲ್ಲಿ ಇರಲಿದ್ದಾರೆ ಎನ್ನಲಾಗಿದೆ
ಬೆಂಗಳೂರು: ನಿರ್ದೇಶಕ ಪ್ರಶಾಂತ್ ನೀಲ್ ಅಭಿನಯದ 'ಕೆ.ಜಿ.ಎಫ್: ಚಾಪ್ಟರ್ 2' ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿದ್ದರು ಈಗ ವಾಪಸ್ ಬೆಂಗಳೂರಿಗೆ ವಾಪಸ್ ಆದ ನಂತರ ಕನ್ನಡ ನಟ ಯಶ್ ಅವರು ಕೊರೋನ ಸೋಂಕಿನ ಭೀತಿಯಲ್ಲಿ 'ಸೆಲ್ಫ್ ಕ್ವಾರಂಟೈನ್' ಆಗಿದ್ದಾರೆ ಎನ್ನಲಾಗಿದೆ.
ಖಾಸಗಿ ಮಾಧ್ಯಮವೊಂದರ ಪ್ರಕಾರ ಯಶ್(Rocking Star Yash) ಅವರು ತಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎರಡು ವಾರಗಳ ಕಾಲ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರಿಂದ ದೂರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.
ಬಿಡುಗಡೆಗೂ ಮುನ್ನ ವಿವಾದದಲ್ಲಿ ಸಿಲುಕಿದ Coolie No 1
ಹೈದರಾಬಾದ್ ನಲ್ಲಿ ಕಳೆದ ಎರಡು ವಾರಗಳಿಂದ ಯಶ್ ಅವರು ಕೆ.ಜಿ.ಎಫ್: ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ಸು ಬಂದಿದ್ದಾರೆ. ಹೀಗಾಗಿ ಯಶ್ ಅವರು ಮುಂಜಾಗ್ರತಾ ಕ್ರಮವಾಗಿ ತಮ್ಮನ್ನು ತಾವು 'ಸೆಲ್ಫ್ ಕ್ವಾರಂಟೈನ್' ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. 'ದಿ ಟೈಮ್ಸ್ ಆಫ್ ಇಂಡಿಯಾ'ದ ವರದಿಪ್ರಕಾರ, ಸದ್ಯ ಯಶ್ ಅವರು ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದಾರೆ. ಎನ್ನಲಾಗಿದೆ.
9 ವರ್ಷ ಪೂರೈಸಿದ ಡಾನ್ 2 : ಡಾನ್ 3 ಚಿತ್ರ ನಿರ್ಮಾಣಕ್ಕೆ ಅಭಿಮಾನಿಗಳ ಒತ್ತಾಯ