ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಸಿಗುತ್ತಿಲ್ಲ ಮದುವೆ ಹೆಣ್ಣು; ಕಂಕಣ ಭಾಗ್ಯಕ್ಕಾಗಿ ʼರಾಗಿಣಿʼಯ ಪರದಾಟ!
Kannada reality shows: ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಈ ರಿಯಾಲಿಟಿ ಶೋ ನಟ ಕಂಕಣ ಭಾಗ್ಯಕ್ಕಾಗಿ ಪರದಾಟ ನಡೆಸುತ್ತಿದ್ದಾರಂತೆ. ʼನೀನು ಹೀಗೆ ಹೆಣ್ಣಿನ ಪಾತ್ರಗಳನ್ನ ಮಾಡುತ್ತಿದ್ದರೆ ಯಾರೂ ನಿನಗೆ ಹೆಣ್ಣು ಕೊಡುವುದಿಲ್ಲ. ಹೀಗಾಗಿ ಕೂಡಲೇ ಹೆಣ್ಣಿನ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸುʼ ಅಂತಾ ನೆಟಿಜನ್ಗಳು ಸಲಹೆ ನೀಡುತ್ತಿದ್ದಾರೆ.
Raghavendra RK @ Ragini: ರಾಘವೇಂದ್ರ ಅಂದರೆ ಬಹುತೇಕ ಜನರಿಗೆ ಯಾರು ಅಂತಾ ಗೊತ್ತಾಗುವುದು ಕಷ್ಟ, ಅದೇ ʼರಾಗಿಣಿʼ ಅಂದ್ರೆ ಸಾಕು ವೀಕ್ಷಕರಿಗೆ ಬಹಳ ಬೇಗನೇ ಅವರ ಪಾತ್ರ ಕಣ್ಮುಂದೆ ಬರುತ್ತದೆ. ಸಾಗರ ಮೂಲದ ನಟ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ಲಕ್ಷಾಂತರ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ಹೆಣ್ಣಿನ ಪಾತ್ರಗಳ ಮೂಲಕವೇ ಪ್ರಸಿದ್ಧಿಯಾಗಿದ್ದಾರೆ. ಸಾಕಷ್ಟು ಪ್ರಶಸ್ತಿ ಸಮಾರಂಭಗಳಲ್ಲಿಯೂ ರಾಘವೇಂದ್ರ ಅವರು ಹೆಣ್ಣಿನ ಪಾತ್ರ ಹಾಕಿಯೇ ಸೆಲೆಬ್ರಿಟಿಗಳ ಜೊತೆ ಒಂದಷ್ಟು ತರಲೆ-ತಮಾಷೆ ಸಹ ಮಾಡಿದ್ದರು.
ಸದಾ ಹುಡುಗಿ ಪಾತ್ರಗಳನ್ನೇ ಹಾಕುತ್ತಿರುವ ರಾಘವೇಂದ್ರ ಅವರಿಗೆ ಯಾವ ರೀತಿಯ ಕಷ್ಟ ಅನುಭವಿಸಿದರು? ಹುಡುಗಿ ಪಾತ್ರವನ್ನೇ ಪದೇ ಪದೇ ಏಕೆ ಹಾಕುತ್ತಿದ್ದಾರೆ? ಎಂದು ಕೆಲವರಿಗೆ ಮಾಹಿತಿ ಇಲ್ಲದಿರಬಹುದು. ಸದ್ಯ ಅವರು ರಾಘವೇಂದ್ರ ಆಗಿ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಸದಾ ಸ್ತ್ರೀ ವೇಷವನ್ನೇ ಹಾಕುತ್ತಿದ್ದ ಅವರಿಗ ರಾಘವೇಂದ್ರನಾಗಿ ಜನರ ಮುಂದೆ ಬರುತ್ತಿರುವುದು ಹೊಸದು.
ಇದನ್ನೂ ಓದಿ: ಇದೇ ನೋಡಿ ವಿಧಿ ಅಂದ್ರೆ.. ಅಣ್ಣ ತಂಗಿಯಾಗಿ ನಟಿಸಿದ ಒಂದೇ ವರ್ಷದಲ್ಲಿ ಗಂಡ-ಹೆಂಡತಿಯಾದ ಖ್ಯಾತ ಜೋಡಿ ಇದು!!
ತಮಗೆ ಎದುರಾಗಿದ್ದ ಹಲವಾರು ಸಂಕಷ್ಟಗಳ ಬಗ್ಗೆ ಮಾತನಾಡಿದ ಅವರು, ʼನಾನು ಊರಿಗೆ ಹೋದರೆ ಯಾರೂ ಸಹ ಅಲ್ಲಿ ರಾಘವೇಂದ್ರ ಅಂತಾ ಈಗ ನನ್ನ ನಂಬಲು ರೆಡಿಯಿಲ್ಲ. ಅನುಬಂಧ ಅವಾರ್ಡ್ಸ್ ಶೋನಲ್ಲಿ ಸಹ ಕಲಾವಿದರಿಗೆ ಊಟ ಹಾಕುವ ವೇಳೆ ನನ್ನನ್ನು ಕಲಾವಿದ ಅಲ್ಲವೆಂದು ಊಟ ಹಾಕಲು ರೆಡಿ ಇರಲಿಲ್ಲ. ಆಮೇಲೆ ನಿರ್ಮಾಪಕರನ್ನು ಕರೆಸಿ ನಾನೇ ರಾಘವೇಂದ್ರ ಅಂತಾ ಹೇಳಿಸಲಾಯಿತು, ಆಮೇಲೆ ಊಟ ಹಾಕಿದರುʼ ಅಂತಾ ಹೇಳಿಕೊಂಡಿದ್ದರು.
ʼಮಜಾ ಭಾರತʼ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆವರೆಗೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ? ಅನ್ನೋ ಯೋಚನೆಯಾಗಿತ್ತು. ಇನ್ನು ನನಗೆ 25 ವರ್ಷವಾದರೂ ಮನೆಯ ಸಮಸ್ಯೆಯಿಂದ ಯಾರನ್ನೂ ಪ್ರೀತಿಸುವ ಮನಸ್ಸು ಬರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?
ಅಂದಹಾಗೆ ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಈ ರಿಯಾಲಿಟಿ ಶೋ ನಟ ಕಂಕಣ ಭಾಗ್ಯಕ್ಕಾಗಿ ಪರದಾಟ ನಡೆಸುತ್ತಿದ್ದಾರಂತೆ. ʼನೀನು ಹೀಗೆ ಹೆಣ್ಣಿನ ಪಾತ್ರಗಳನ್ನ ಮಾಡುತ್ತಿದ್ದರೆ ಯಾರೂ ನಿನಗೆ ಹೆಣ್ಣು ಕೊಡುವುದಿಲ್ಲ. ಹೀಗಾಗಿ ಕೂಡಲೇ ಹೆಣ್ಣಿನ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸುʼ ಅಂತಾ ನೆಟಿಜನ್ಗಳು ಸಲಹೆ ನೀಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ