ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಎ.ಆರ್.ಬಾಬು ಅವರು ಮಂಗಳವಾರ ಮುಂಜಾನೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 56 ವರ್ಷ ವಯಸ್ಸಾಗಿತ್ತು. 


COMMERCIAL BREAK
SCROLL TO CONTINUE READING

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. 


ಚರಣ್ ರಾಜ್, ಚಾರುಲತಾ ಹಾಗೂ ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ 1998ರಲ್ಲಿ ತೆರೆ ಕಂಡಿದ್ದ ಚೋರ್ ಗುರು ಚಾಂಡಾಲ್ ಶಿಷ್ಯ ಬಾಬು ಅವರ ಮೊದಲ ಚಿತ್ರ. ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರಿಗೆ ಗುರುವಾಗಿದ್ದ ಬಾಬು ಅವರು, 'ಹಲೋ ಯಮ', 'ಚಮ್ಕಾಯಿಸಿ ಚಿಂದಿ ಉಡಾಯ್ಸಿ', 'ಸಪ್ನೋಂಕಿ ರಾಣಿ', ಕೂಲಿ ರಾಜ, ಖಳನಾಯಕ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.