ಬೆಂಗಳೂರು : ಈಗಾಗಲೇ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದು, ಸಂಗೀತ ರಚಿಸಿರುವ ಗೀತೆ ರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಅಭಿನಯದ ಚಿತ್ರ 'ಗೂಗಲ್' ಇದೆ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ತಮ್ಮ ನಿರ್ಮಾಣ ಸಂಸ್ಥೆ ಉತ್ಸವ ಮೂವೀಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಿರುವ ನಾಗೇಂದ್ರ ಪ್ರಸಾದ್ ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ  ಮತ್ತು ಛಾಯಾಗ್ರಹಣ ಎಲ್ಲವನ್ನು ತಾವೇ ನಿರ್ವಹಿಸಿದ್ದಾರೆ. 


ಮನುಷ್ಯನ ಅಂತರಂಗದ ಹುಡುಕಾಟವನ್ನು ಆಧರಿಸಿರುವುದರಿಂದಲೇ ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ 'ಗೂಗಲ್' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಕಥೆ, ಕ್ಲೈಮ್ಯಾಕ್ಸ್ ಹಾಗೂ ಶುಭಾ ಪೂಂಜಾ ಅಭಿನಯ ಬಹಳ ಮುಖ್ಯವಾಗಿದೆ ಎಂದಿರುವ ನಾಗೇಂದ್ರ ಪ್ರಸಾದ್, ಇದುವರೆಗೂ ಶುಭಾ ಪೂಂಜಾ ಅವರನ್ನು ಗ್ಲಾಮರ್ ಪಾತ್ರಗಳಲ್ಲಿ ನೋಡಿದ್ದ ಸಿನಿಪ್ರಿಯರಿಗೆ, ಈ ಚಿತ್ರದಲ್ಲಿ ಶುಭಾ ಪೂಂಜಾ ಒಂದು ಮಗುವಿನ ತಾಯಿಯ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.


Search engine ಗೂಗಲ್ ನಲ್ಲಿ ಹೇಗೆ ಇಡೀ ಬ್ರಹ್ಮಾಂಡವೇ ಅಡಗಿದೆಯೋ, ಹಾಗೇ ಮನುಷ್ಯನ ಅಂತರಂಗದಲ್ಲಿನ ಹುಡುಕಾಟ ನಡೆಸುವ ಪ್ರಯತ್ನ ಇದಾಗಿದೆ ಎಂದಿದ್ದಾರೆ. ಇದು ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತು ಪ್ರೇಕ್ಷಕರಿಗೆ ಈ 'ಗೂಗಲ್' ನಲ್ಲಿ ಏನಿದೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದ್ದು, ಫೆ.16ರಂದು ಚಿತ್ರ ಬಿಡುಗಡೆ ಮೂಲಕ ಈ ಕುತೂಹಲಕ್ಕೆ ಬ್ರೇಕ್ ಬೀಳಲಿದೆ. 


ನಾಗೇಂದ್ರ ಪ್ರಸಾದ್ ಜೋಡಿಯಾಗಿ ನಟಿ ಶುಭ ಪೂಂಜಾ ಅಭಿನಯಿಸಿದ್ದು, ಬೇಬಿ ವೈಷ್ಣವಿ, ದೀಪಕ್, ಅಮೃತ ರಾವ್, ಶೋಭರಾಜ್, ಸಂಪತ್, ಜೈ ದೇವ್, ಕೃಷ್ಣಮೂರ್ತಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. 


ಈ ಚಿತ್ರದ ಸಹ ನಿರ್ಮಾಪಕರಾಗಿ ಎಲ್.ಅಶ್ವಥ್ ನಾರಾಯಣ್ ಹಾಗೂ ಎನ್. ಶ್ರೀಧರ್ ಬಂಡವಾಳ ಕಾರ್ಯನಿರ್ವಹಿಸಿದ್ದು, ಕೆ.ಎಂ.ಪ್ರಕಾಶ್ ಸಂಕಲನ, ನಾಗರ್ಜುನ ಅವರ ಛಾಯಾಗ್ರಹಣ ಜೊತೆಗೆ ಇನ್ನಿತರ ತಂತ್ರಜ್ಞಾರಾಗಿ ರಘುವರ್ಧನ, ಉಪ್ಪಿ, ಕೋಟ ವೆಂಕಟೇಶ್, ಸತೀಶ್ ಬಾಬು, ಇಮ್ರಾನ್ ಸರ್ದಾರಿಯ, ಕಲೈ, ಹರಿಕೃಷ್ಣ, ಕಂಬಿ ರಾಜು, ಸಿ.ಜೆ.ಅನಿಲ್ ಹಾಗೂ ಇತರರು ಕಾರ್ಯ ನಿರ್ವಹಿಸಿದ್ದಾರೆ.


ರಾಜ್ಯದ 70 ರಿಂದ 80 ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಜೋ ಲಾಲಿ ಹಾಡು ಸಾಕಷ್ಟು ಮನ್ನಣೆಗಳಿಸಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಸಿನಿಮಾ ಇದಾಗಿದ್ದು, ಫೆ.16 ಕ್ಕೆ ಬಿಡುಗಡೆಯಾಗಲಿದೆ.


ನಾಗೇಂದ್ರ ಪ್ರಸಾದ್ ಅವರ ಅಭಿನಯದ 'ಗೂಗಲ್' ಚಿತ್ರಕ್ಕೆ ಈಗಾಗಲೇ ಚಂದನವನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್,ಕಿಚ್ಚ ಸುದೀಪ್ ಸೇರಿದಂತೆ ಇತರ ನಾಯಕರು ಶುಭಾಶಯ ಕೋರಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ...