4 ವರ್ಷದ ಕೇಸ್ ರೀ ಓಪನ್ : ಪಾನಿಪುರಿ ಕಿಟ್ಟಿ ಮೇಲೆ FIR.. ದುನಿಯಾ ವಿಜಯ್...?
ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ಸೂಚನೆಗೆ ಮೇರೆಗೆ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ನಡೆದ ಘಟನೆಯಲ್ಲಿ ಕಿಟ್ಟಿ ಹಾಗೂ ಸಹಚರರು ಹಲ್ಲೆ ನಡೆಸಿದ್ದರು ಎಂದು ವಿಜಯ್ ದೂರು ನೀಡಿದ್ದರು.
ಬೆಂಗಳೂರು : ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ಸೂಚನೆಗೆ ಮೇರೆಗೆ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ನಡೆದ ಘಟನೆಯಲ್ಲಿ ಕಿಟ್ಟಿ ಹಾಗೂ ಸಹಚರರು ಹಲ್ಲೆ ನಡೆಸಿದ್ದರು ಎಂದು ವಿಜಯ್ ದೂರು ನೀಡಿದ್ದರು.
ಸ್ನೇಹಿತರಂತೆ ಇದ್ದ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಮತ್ತು ನಟ ದುನಿಯಾ ವಿಜಯ್ ದಾಯಾದಿಗಳಾಗಿ ಹೊಡೆದಾಡಿಕೊಂಡಿದ್ದರು. 23 ಸೆಪ್ಟೆಂಬರ್ 2018 ರಲ್ಲಿ ನಡೆದಿದ್ದ ಗಲಾಟೆ ಪ್ರಕರಣ ರೀ ಓಪನ್ ಆಗಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. 2018 ಸೆ,23 ರಂದು ವಸಂತ ನಗರ ಅಂಬೇಡ್ಕರ್ ಭವನದಲ್ಲಿ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಅಲ್ಲಿ ಪಾನಿಪುರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಟೀಂ ನಡುವೆ ಗಲಾಟೆಯಾಗಿತ್ತು.
ಇದನ್ನೂ ಓದಿ: ಆಸ್ಕರ್‌ನಷ್ಟೇ ಪ್ರತಿಷ್ಠಿತ ʼಗೋಲ್ಡನ್ ಗ್ಲೋಬ್ʼ ಪ್ರಶಸ್ತಿಗೆ RRR ನಾಮಿನೇಟ್..!
ಅಲ್ಲದೆ, ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಟ್ಟಿ ಸಹೋದರ ಮಾರುತಿ ಗೌಡನನ್ನು ವಿಜಯ್ ಕಾರಿನಲ್ಲಿ ಕರೆದೊಯ್ದಿದ್ದು ಹಿಗ್ಗಾಮುಗ್ಗ ಥಳಿಸಿದ್ದರು. ನಂತರ ಮಧ್ಯರಾತ್ರಿ ಪೊಲೀಸರ ಮಾತಿನ ಮೇರೆಗೆ ವಾಪಸ್ ಕರೆತಂದು ಬಿಟ್ಟಿದ್ದರು. ಇನ್ನು ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದಿದ್ದರು. ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ಅಲ್ಲದೆ, ನನ್ನ ಮಗ ಸಾಮ್ರಾಟ್‌ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ಪಾನಿಪುರಿ ಕಿಟ್ಟಿ ಟೀಂ ಮೇಲೆ ದೂರು ನೀಡಿದ್ದರು. ದುನಿಯಾ ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಸಹ 307 ಕೇಸ್ ದಾಖಲಿಸಿದ್ದರು.
ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ನಲ್ಲಿ ನಡೀತಾ ಇದೆ. ಈ ಹಿಂದೆ ಪಾನಿಪುರಿ ಕಿಟ್ಟಿಮೇಲೆ ದುನಿಯಾ ವಿಜಯ್ ಅವರು ನೀಡಿದ್ದ ದೂರನ್ನು ತೆರವುಗೊಳಿಸಲಾಗಿತ್ತು. ಸದ್ಯ ಇನ್ನೊಮ್ಮೆ ಕೇಸ್ ಮಾಡಿ, ತನಿಖೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದು, ನ್ಯಾಯಾಲಯದ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.