ಮುಂಬೈ: ಮಹಾರಾಷ್ಟ್ರ ಪೊಲೀಸರು ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ವಿರುದ್ಧ ತಮ್ಮ ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು FIR ದಾಖಲಿಸಿದ್ದಾರೆ. ಸಂತ್ರಸ್ತೆ ತಮ್ಮನ್ನು ಅಶ್ಲೀಲ ವಿಡಿಯೋ ನೋಡಲು ಒತ್ತಾಯಿಸಲಾಗುತ್ತಿತ್ತು ಎಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಗಣೇಶ್ ಆಚಾರ್ಯ ಭಾರತೀಯ ಚಲನಚಿತ್ರ ಹಾಗೂ ಟೆಲಿವಿಶನ್ ನ ಕೊರಿಯೋಗ್ರಾಫರ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿಯಾದ ಬಳಿಕ ನಿರಂತರವಾಗಿ ಈ ಮಹಿಳೆಯನ್ನು ಅಂಧೇರಿ(ಪಶ್ಚಿಮ)ನಲ್ಲಿರುವ ವೀರಾ ದೇಸಾಯಿಯಲ್ಲಿರುವ IEFTCA ಕಚೇರಿ ಹಾಗೂ ಮುಕ್ತಿ ರಿಹರ್ಸಲ್ ಹಾಲ್ ಗೆ ಬರಲು ಹೇಳುತ್ತಿದ್ದರು ಎನ್ನಲಾಗಿದೆ.


ಕಮಿಷನ್ ಬೇಡಿಕೆ ಇಡುತ್ತಿದ್ದರಂತೆ!
ಈ ಕುರಿತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಸಂತ್ರಸ್ತೆ, ಗಣೇಶ್ ಆಚಾರ್ಯ ಚಲನಚಿತ್ರಗಳಲ್ಲಿ ಕೆಲಸ ಮಾಡುವುದರಿಂದ ತಮ್ಮನ್ನು ತಡೆಯುತ್ತಿದ್ದರು ಹಾಗೂ ಆದಾಯದಲ್ಲಿ ಕಮಿಷನ್ ಕೇಳುತ್ತಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲ ಅವರು ನೀಡಿದ ದೂರಿನಲ್ಲಿ ಮಹಿಳೆ ಆಚಾರ್ಯ ಕಚೇರಿಗೆ ಭೇಟಿ ನೀಡಿದ ಸಂದರ್ಭದಲೆಲ್ಲಾ ಅವರು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿರುವುದು ಗಮನಿಸಿರುವದಾಗಿ ಹೇಳಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಸಂತ್ರಸ್ತೆ, "ಕೆಲಸಕ್ಕಾಗಿ ನಾನು ಗಣೇಶ್ ಆಚಾರ್ಯ ಅವರ ಕಚೇರಿಗೆ ಭೇಟಿ ನೀಡಿದ ಎಲ್ಲಾ ಸಂದರ್ಭಗಳಲ್ಲಿ ಅವರು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವಲ್ಲಿ ನಿರತರಾಗಿರುವುದನ್ನು ಗಮನಿಸಿದ್ದೇನೆ. ಅಷ್ಟೇ ಅಲ್ಲ, ಅವರು ನನ್ನನ್ನೂ ಕೂಡ ಅಶ್ಲೀಲ ವಿಡಿಯೋ ವೀಕ್ಷಿಸುವಂತೆ ಬಲವಂತ ಮಾಡುತ್ತಿದ್ದರು. ಜೊತೆಗೆ ತಮಗೆ ಈ ರೀತಿಯ ವಿಡಿಯೋ ವೀಕ್ಷಣೆಯಲ್ಲಿ ತುಂಬಾ ಮಜಾ ಬರುತ್ತದೆ ಎಂದು ಹೇಳುತ್ತಿದ್ದರು" ಎಂದಿದ್ದಾರೆ.



ಕ್ರಿಕೆಟ್ ಬೆಟ್ಟಿಂಗ್ ನಲ್ಲಿಯೂ ಶಾಮೀಲಾಗಿದ್ದಾರಂತೆ!
ಮಹಿಳೆ ತಾವು ದಾಖಲಿಸಿರುವ FIR ನಲ್ಲಿ "ಇದನ್ನು ಕೇಳಿದ ಬಳಿಕ ನಾನು ನನ್ನ ಮೇಲಿನ ನಿಯಂತ್ರಣ ಕಳೆದುಕೊಂಡೆ. ಬಳಿಕ ಅವರೊಬ್ಬ ವ್ಯಭಿಚಾರಿಯಾಗಿದ್ದು ಜೂಜೂ ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಲ್ಲಿಯೂ ಕೂಡ ಶಾಮೀಲಾಗಿದ್ದಾರೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ಹಾಗೂ ಅಸೋಸಿಯೇಶನ್ ಗೆ ಅವರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದೆ" ಎನ್ನಲಾಗಿದೆ.


ತನುಶ್ರಿ ದತ್ತಾ ಕೂಡ ಗಣೇಶ್ ವಿರುದ್ಧ ಆರೋಪ ಮಾಡಿದ್ದರು
ಆದರೆ, ಗಣೇಶ ಆಚಾರ್ಯ ಅವರ ಮೇಲೆ ಈ ರೀತಿಯ ಆರೋಪ ಕೇಳಿ ಬರುವುದು ಇದೆ ಮೊದಲ ಬಾರಿಗೆ ಅಲ್ಲ. ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ನಟಿ ತನುಶ್ರಿ ದತ್ತಾ ಕೂಡ ಗಣೇಶ್ ಆಚಾರ್ಯ ಅವರ ವಿರುದ್ಧ ಆರೋಪ ಮಾಡಿದ್ದರು.