Thyagaraja Bhagavathar: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪದ ಮೇರೆಗ ದರ್ಶನ್‌ ಜೈಲು ಸೇರಿರೋದು ಗೊತ್ತೇ ಇದೆ. ಗೊತ್ತಿದೋ ಗೊತ್ತಿಲದೆಯೋ ಮಾಡಿರುವ ತಪ್ಪಿಗೆ ದರ್ಶನ್‌ ಇದೀಗ ಪರಪ್ಪನ ಅಗ್ರಹಾರ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ತಮ್ಮ ಗೆಳತಿ ಪವಿತ್ರಾ ಗೌಡಾಗೆ ಅಸಭ್ಯವಾದ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಕಿಡ್ನಾಪ್‌ ಮಾಡಿ ಡಿ ಗ್ಯಾಂಗ್‌ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದ ಕುರಿತ ಡಿಟೇಲ್ಸ್‌ ಪೋಲಿಸರ ಬಳಿ ಚಾರ್ಚ್‌ ಶೀಟ್‌ನಲ್ಲಿ ದಾಖಲಾಗಿದೆ. ದರ್ಶನ್‌ ಅವರ ಅಪರಾಧಿಯೋ ಅಥವಾ ನಿರಪರಾಧಿಯೋ ಎನ್ನುವ ವಿಷಯ ಚಾರ್ಚ್‌ ಶೀಟ್‌ನಲ್ಲಿರುವ ವಿಷಯಗಳು ತೀರ್ಮಾನ ಮಾಡಲಿದೆ.


ಈಗಿರುವಾಗ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ನಟ ಹೀಗೆ ಮಾಡಿರುವುದಕ್ಕೆ ಇಂಡಸ್ಟ್ರಿಗೆ ಕಳಂಕ ಬಂದಿದೆ, ದರ್ಶನ್‌ ಅವರನ್ನು ಸ್ಯಾಂಡಲ್‌ವಡ್‌ನಿಂದ ಬ್ಯಾನ್‌ ಮಾಡಬೇಕು ಎನ್ನು ಚರ್ಚೆಗಳು ಕೂಡ ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಫಿಲಿಂ ಇಂಡಸ್ಟ್ರಿಯಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲ ಭಾರಿ ಅಂದುಕೊಂಡ್ರೆ ಅದು ನಿಮ್ಮ ತಪ್ಪು ಊಹೆ. 


ಇದನ್ನೂ ಓದಿ: ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?


ಹೌದು, ಸ್ಟಾರ್‌ ನಟ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿರುವ ಘಟನೆ ಇದೇ ಮೊದಲೇನಲ್ಲ. ಈ ಮುಂಚೆಯೂ ಭಾರತದ ಸೂಪರ್‌ ಸ್ಟಾರ್‌ ಒಬ್ಬರು ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದರು. ಹಾಗಾದರೆ ಅವರು ಯಾರು ಎನ್ನುವ ಕುತೂಹಲ ನಿಮಗೂ ಇದೆಯಾ..? ಯಾರು ಎಂದು ತಿಳಿಯಲು ಮುಂದೆ ಓದಿ..


ಮಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಸೌತ್‌ ಫಿಲಿಂ ಇಂಡಸ್ಟ್ರಿಯ ಮೊದಲ ಸೂಪರ್‌ ಸ್ಟಾರ್‌. ಈತ ತಮಿಳು ಸಿನಿಮಾಗಳಲ್ಲಿ ಸ್ಟಾರ್‌ ಹೀರೋ ಆಗಿ ಪಾತ್ರ ಹಚ್ಚಿತ್ತಿದ್ದ ವ್ಯಕ್ತಿ. ದರ್ಶನ್‌ರಂತೆಯೇ ಈತ ಕೂಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದ ನಂತರ ಸಿನಿಮಾದಿಂದ ದೂರ ಉಳಿದು ತನ್ನ ಬದುಕು ಕಟ್ಟಿಕೊಂಡಿದ್ದ. ಸ್ಟಾರ್‌ ಪಟ್ಟದಲ್ಲಿ ಕೂತು ಮೆರೆದಿದ್ದ ಈತನ ಬಾಳನ್ನು ಅದೊಂದು ಘಟನೆ ದುರಂತ ಅಂತ್ಯ ಕಾಣುವಂತೆ ಮಾಡಿಬಿಟ್ಟಿತು. ಅಷ್ಟಕ್ಕೂ ಈತ ಬದುಕ್ಕಿದ್ದು ಕೇವಲ 48 ವರ್ಷ.


1934ರಲ್ಲಿ 'ಪಾವಲ್ಲಕ್ಕೊಡಿ' ಎನ್ನುವ ಸಿನಿಮಾದ ಮೂಲಕ ಮಾವರಂ ಕೃಷ್ಣಸ್ವಾಮಿ ತ್ಯಾಗರಾಜ ಸಿನಿಮಾಗೆ ಎಂಟ್ರಿ ಕೊಡ್ತಾರೆ. ಮೊದಲಿಗೆ ಕ್ಲಾಸಿಕಲ್‌ ಸಿಂಗರ್‌ ಆಗಿದ್ದ ಈತ ನಟಿಸಿದ್ದ ಮೊದಲ ಚಿತ್ರವೇ ಹಿಟ್‌ ಆಗುತ್ತೆ. ಇವರ ಸಿನಿಮಾ ವೃತ್ತಿ ಜೀವನದಲ್ಲಿ ಒಟ್ಟು 14 ಸಿನಿಮಾಗಳಲ್ಲಿ ಈತ ನಟಿಸುತ್ತಾರೆ ಅದರಲ್ಲಿ ಹತ್ತು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗುತ್ತವೆ. ಅದರಲ್ಲೂʻಹರಿದಾಸ್‌ʼ ಎನ್ನುವ ಚಿತ್ರ ಮೂರು ವರ್ಷಗಳ ಕಾಲ ಓಡಿ ದಾಖಲೆಯನ್ನು ಬರೆಯುತ್ತದೆ.


1944ರಲ್ಲಿ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಅವರ ಹೆಸರು ಕೇಳಿಬರುತ್ತದೆ. ಗುರುತು ಇಲ್ಲದ ದುಷ್ಕರ್ಮಿಗಳು ಪತ್ರಕರ್ತನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿ ಓಡಿಹೋಗಿರುತ್ತಾರೆ. ನಂತರ ಪೋಲಿಸರು ಪರಿಶೀಲನೆಗೆ ಇಳಿದಾಗ ಅದರಲ್ಲಿ ತ್ಯಾಗರಾಜನ್‌ ಅವರ ಹೆಸರು ಮೆಲುಕು ಹಾಕಿಕೊಳ್ಳುತ್ತದೆ. ತಕ್ಷಣವೇ ಪೋಲಿಸರು ಆತನನ್ನು ಬಂಧಿಸುತ್ತಾರೆ. 


ಇದನ್ನೂ ಓದಿ: ಮಹೇಂದ್ರ ಮುನ್ನೋತ್‌ರಿಂದ ಗೋಶಾಲೆಗಳ ಉಳಿವಿಗಾಗಿ ಇಂತಹದ್ದೊಂದು ಯಾನ..!


ನಟಿಯನ್ನು ಬೆದರಿಸಿದ್ದ ಕಾರಣಕ್ಕಾಗಿ ಪತ್ರಕರ್ತ ಲಕ್ಮಿಕಾಂತ್‌ರನ್ನು ಕೊಂದ ಪ್ರಕರಣದಲ್ಲಿ ತ್ಯಾಗರಾಜನ್‌ ಸೇರಿದಂತೆ ಮತ್ತಿಬ್ಬರು ನಟರಾದ ಎನ್‌ ಎಸ್‌ ಕೃಷ್ಣನ್‌ ಹಾಗೂ ಎಸ್‌ ಎಂ ಶ್ರೀರಾಮುಲು ಅವರನ್ನು ಪ್ರಕರಣದಲ್ಲಿ ಬಂಧಿಸಲಾಗುತ್ತದೆ. 1944 ರಲ್ಲಿ ಜೈಲು ಸೇರಿದ್ದ ತ್ಯಾಗರಾಜನ್‌ 1947 ರಲ್ಲಿ ರಿಲೀಸ್‌ ಆಗಿ ಜೈಲಿನಿಂದ ಹೊರಬರುತ್ತಾರೆ. ಅಷ್ಟಕ್ಕೆ ತ್ಯಾಗರಾಜನ್‌ಗಿ ಇಂಡಸ್ಟ್ರಿಯಲ್ಲಿರುವ ಗೌರನ ಡಿಮ್ಯಾಂಡ್‌ ಎಲ್ಲವೂ ಕಮ್ಮಿಯಾಗಿರುತ್ತೆ. ಸಿನಿಮಾ ತೊರೆದು ಸಾಮಾನ್ಯನಂತೆ ಬದುಕು ಕಟ್ಟಿಕೊಳ್ಳಯವ ತ್ಯಾಗರಾಜನ್‌ ತಮ್ಮ ಹಾಡಿನ ಪಯಣವನ್ನು ಶುರು ಮಾಡುತ್ತಾರೆ. ಎಲ್ಲ ಕಷ್ಟಗಳು ತಮ್ಮಿಂದ ದೂರವಾಯ್ತು ಎಂದುಕೊಳ್ಳುವಷ್ಟರಲ್ಲಿ ವಿಧಿ ಅವರ ಜೀವನದಲ್ಲಿ ಆಟವಾಡಿಬಿಡುತ್ತೆ. ಮಧುಮೇಹ ತ್ಯಾಗರಾಜ್‌ ಅವರನ್ನು ಆವರಿಸಿಕೊಳ್ಳುತ್ತೆ ಇದೇ ಕಾಯಿಲೆಗೆ ನಟ 48 ವರ್ಷಕ್ಕೆ ತುತ್ತಾಗಗಿ ಸಾವನಪ್ಪುತ್ತಾರೆ. 


ಅಚ್ಚರಿ ಎನಿಸಿದರೂ ಈ ಸ್ಟೋರಿ ಥೇಟ್‌ ದರ್ಶನ್‌ ಪ್ರಕರಣದಂತೆಯೇ ಇರುವುದು ಖಂಡಿತವಾಗಿಯೂ ಅಚ್ಚರಿಯೇ ಸರಿ. ಈ ಕೊಲೆಗಳು ನಡೆದಿರುವುದು ಕೇವಲ ಒಂದು ಕಾರಣಕ್ಕೆ ಅದು ಹೆಣ್ಣಿನ ಕಾರಣಕ್ಕೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ