ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‌ಕುಮಾರ್ ಅವರ ಐವರು ಮೊಮ್ಮಕ್ಕಳಿವರು
ಸ್ಯಾಂಡಲ್‌ವುಡ್‌ಗೆ ಅಣ್ಣಾವ್ರ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ `ಸಿದ್ದಾರ್ಥ್` ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ವಿನಯ್ ರಾಜ್ ಕುಮಾರ್
ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ 2015ರಲ್ಲಿ 'ಸಿದ್ದಾರ್ಥ್' ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು. ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದರು. ವಿನಯ್ ಅವರು ಸಿದ್ದಾರ್ಥ್, ರನ್ ಆಂಟನಿ, ಆರ್ ದಿ ಕಿಂಗ್ ಹಾಗೂ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಡಾ.ರಾಜ್ ಕುಮಾರ್ ಮೊಮ್ಮಕ್ಕಳ ಪೈಕಿ ವಿನಯ್ ಮೊದಲನೆಯವರು.
ಧನ್ಯಾ ರಾಮಕುಮಾರ್
ಧನ್ಯಾ ರಾಮ್‌ಕುಮಾರ್ 'ನಿನ್ನ ಸನಿಹಕೆ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. 2021ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸ್ವಲ್ಪಮಟ್ಟಿಗೆ ಯಶಸ್ಸನ್ನು ಗಳಿಸಿತು. ಧನ್ಯಾ ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಪುತ್ರಿ. ಸದ್ಯ ಕಾಲಾ ಪತ್ಥರ್ ಸಿನಿಮಾದಲ್ಲಿ ಧನ್ಯಾ ನಟಿಸುತ್ತಿದ್ದಾರೆ.
ಇದನ್ನೂ ಓದಿ-Sandalwood : ಕನ್ನಡದ ಚಿತ್ರರಂಗದ ಯಾವ್ಯಾವ ಕಲಾವಿದರ ಹೆಸರಿನಲ್ಲಿ ರಸ್ತೆಗಳಿವೆ ಗೊತ್ತಾ?
ಧೀರೇನ್ ರಾಮ್ ಕುಮಾರ್
ಡಾ.ರಾಜ್‌ಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾರವರ ಪುತ್ರನಾದ ಧೀರೇನ್ ರಾಮ್‌ಕುಮಾರ್ 2022ರಲ್ಲಿ 'ಶಿವ 143' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾ ಅಷ್ಟೇನು ಯಶಸ್ಸು ಗಳಿಸಲಿಲ್ಲ.
ಯುವ ರಾಜಕುಮಾರ್
ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಕೂಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಸಿನಿಮಾ ಕಥೆಯನ್ನು ಅಪ್ಪು ಅವರಿಗಾಗಿ ರೆಡಿ ಮಾಡಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಈ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ನಟಿಸುತ್ತಿದ್ದು, ಭಾರೀ ನಿರೀಕ್ಷೆಯಿದೆ. ಯುವ ರಾಜ್‌ಕುಮಾರ್ ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಾಗರಿಕಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ಮುನ್ನೆಡುಸುತ್ತಿದ್ದಾರೆ. 2016ರಲ್ಲಿ ತೆರೆಕಂಡ ವಿನಯ್
ರಾಜ್‌ಕುಮಾರ್ ಅಭಿನಯದ `ರನ್ ಆಂಟನಿ' ಚಿತ್ರವನ್ನು ನಿರ್ಮಿಸಿದ್ದಾರೆ.
ಷಣ್ಮುಖ ಗೋವಿಂದರಾಜ್
ಈ ನಾಲ್ವರ ಜೊತೆಗೆ ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಮೊದಲ ಸಿನಿಮಾ ಸೆಟ್ಟೇರಿದೆ. ಈಗಾಗಲೇ ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಸದ್ದಿಲ್ಲದೆ ಷಣ್ಮುಖ ಗೋವಿಂದರಾಜು ಸಿನಿಮಾದ ಕಥೆಯನ್ನು ಕೇಳಿ, ಮನೆಯವರಿಗೂ ಒಪ್ಪಿಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಎ2 ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಷಣ್ಮುಖ ಗೋವಿಂದರಾಜ್ ಸಿನಿಮಾಗೆ 'ನಿಂಬಿಯಾ ಬನಾದ ಮ್ಯಾಗ' ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ-ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರದ ಟೀಸರ್ ಗೆ ಪ್ರಶಂಸೆಯ ಸುರಿಮಳೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.