Flora Saini Abusive Relationship With A Producer : ರವಿಚಂದ್ರನ್ - ಶಿವರಾಜ್ ಕುಮಾರ್ ನಟನೆಯ ಕೋದಂಡರಾಮ, ಕಿಚ್ಚ ಸುದೀಪ್ ಅಭಿನಯದ ನಮ್ಮಣ್ಣ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ ಅವರ ವೈಯಕ್ತಿಕ ಜೀವನದ ದುರಂತ ಕಥೆಯಿದು. ಪ್ರಸಿದ್ಧ ನಿರ್ಮಾಪಕ ಗೌರಂಗ್ ದೋಷಿ ಜೊತೆ ಅನುಭವಿಸಿದ ನರಕಯಾತನೆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಅವರ ಬಾಯ್‌ಫ್ರೆಂಡ್‌ ಆಗಿದ್ದ ಪ್ರಸಿದ್ಧ ನಿರ್ಮಾಪಕ ಗೌರಂಗ್ ದೋಷಿ ಅವರ ಜೊತೆ ತಾವು ಅನುಭವಿಸಿದ ಚಿತ್ರಹಿಂಸೆಯನ್ನು ಫ್ಲೋರಾ ಸೈನಿ ಬಿಚ್ಚಿಟ್ಟಿದ್ದರು. "ನಾನು ಪ್ರೀತಿಸುತ್ತಿದ್ದೆ, ಅವರು ಪ್ರಸಿದ್ಧ ನಿರ್ಮಾಪಕರಾಗಿದ್ದರು. ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಯಿತು. ಅವರು ನಿಂದನೀಯವಾಗಿ ತಿರುಗಿದರು, ಅವರು ನನ್ನ ಮುಖಕ್ಕೆ ಪಂಚ್‌ ಮಾಡುತ್ತಿದ್ದರು. ನನ್ನ ಖಾಸಗಿ ಭಾಗಗಳಿಗೆ ಗುದ್ದಿದರು. ಅವರು ನನ್ನ ಫೋನ್ ತೆಗೆದುಕೊಂಡು ನನ್ನನ್ನು ಬಿಡುವಂತೆ ಒತ್ತಾಯಿಸಿದರು.14 ತಿಂಗಳು, ಅವನು ನನ್ನನ್ನು ಯಾರೊಂದಿಗೂ ಮಾತನಾಡಲು ಬಿಡಲಿಲ್ಲ. ಕೊನೆಗೆ ಒಂದು ದಿನ ನನ್ನ ಹೊಟ್ಟೆಗೆ ಒದ್ದ ಆ ದಿನ ನಾನು ಮನೆಯನ್ನೇ ಬಿಟ್ಟು ಓಡಿಹೋದೆ" ಎಂದು ತಾವು ಅನುಭವಿಸಿದ ಕಷ್ಟವನ್ನು ಹೇಳಿದ್ದರು.


ಇದನ್ನೂ ಓದಿ : daughters of star cricketers: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಪುತ್ರಿಯರನ್ನು ಕಂಡೀರಾ? ಅರೆರೇ..ಎಂಥಾ ಸೌಂದರ್ಯವಿದು…


ಫ್ಲೋರಾ ಹಲವಾರು ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ಧಾರೆ. ಪ್ರೇಮ ಕೋಶಂ (1999) ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಜನಿಕಾಂತ್, ಕಾರ್ತಿಕ್, ಜಗಪತಿ ಬಾಬು, ಬಾಲಕೃಷ್ಣ, ಸಿದ್ಧಾಂತ್, ಸುದೀಪ್, ಶಿವರಾಜಕುಮಾರ್, ವಿಜಯಕಾಂತ್, ಪ್ರಭು ಮತ್ತು ರಾಜಶೇಖರ್ ಅವರಂತಹ ಖ್ಯಾತ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by Flora Saini (@florasaini)


 


ಚಲನಚಿತ್ರ ನಿರ್ಮಾಪಕ ಗೌರಂಗ್ ದೋಷಿ ಹಿಂದಿ ಚಿತ್ರರಂಗದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಚಿತ್ರೀಕರಣ ಮತ್ತು ನಿರ್ಮಾಣ ಮಾಡುವ ದೋಷಿ ಕುಟುಂಬದ ಮೂರನೇ ತಲೆಮಾರಿನವರಾಗಿದ್ದಾರೆ. ಅವರ ತಂದೆಯ ಕಾಲದಿಂದಲೂ, ದೋಷಿ ಕುಟುಂಬವು ಗಮನಾರ್ಹ ವ್ಯಕ್ತಿಗಳನ್ನು ಉದ್ಯಮಕ್ಕೆ ಕರೆತಂದಿದೆ. ಇವರು 4 ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಮಾಡಿದ್ದಾರೆ.


ಇದನ್ನೂ ಓದಿ : Kareena to Raveena : ವಿಚ್ಛೇದಿತ ಪುರುಷರನ್ನು ಮದುವೆಯಾದ ಬಾಲಿವುಡ್ ಬೆಡಗಿಯರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.