ಮಾಜಿ ವಿಶ್ವ ಸುಂದರಿ.. ಬಾಲಿವುಡ್ ನಾಯಕಿ.. ಐಶ್ವರ್ಯಾ ರೈ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?
Aishwarya Rai: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಚಿತ್ರರಂಗವನ್ನು ಹೊರತುಪಡಿಸಿ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಹಾಗಾದರೆ ಇವರ ಆದಾಯದ ಮೂಲಗಳು ಯಾವುವು? ಎಷ್ಟು ಕೋಟಿ ಆಸ್ತಿಯ ಒಡತಿ ಈ ನಟಿ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Aishwarya Rai Net Worth: 1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದ ನಂತರ, ಐಶ್ವರ್ಯಾ ರೈ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಟಿಯಾದರು ಎಂದರೆ ಅದು ಅತಿಶಯೋಕ್ತಿಯಲ್ಲ. ಅನೇಕ ಸೂಪರ್ ಹಿಟ್ ಬಾಲಿವುಡ್ ನಟಿಯರಂತೆ, ಅವರು ತಮಿಳು ಭಾಷೆಯಿಂದ ತಮ್ಮ ಕಲಾತ್ಮಕ ಪ್ರಯಾಣವನ್ನು ಪ್ರಾರಂಭಿಸಿದರು.
1997 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಮಣಿರತ್ನಂ ಅವರ "ಇರುವರ್" ಚಿತ್ರದ ಮೂಲಕ ಐಶ್ವರ್ಯಾ ರೈ ತಮ್ಮ ಸಿನಿ ಪ್ರಯಾಣವನ್ನು ಪ್ರಾರಂಭಿಸಿದರು. ಸದ್ಯ ನಟಿ ಐಶ್ವರ್ಯ ರೈ ನಟನೆಯ ಜೊತೆಗೆ ಕೈಗೊಂಡಿರುವ ಉದ್ಯಮಗಳು ಯಾವುವು ಎನ್ನುವುದನ್ನು ತಿಳಿಯೋಣ...
ಇದನ್ನೂ ಓದಿ-BBK10: ತನಿಷಾ ಹಾಗೂ ವರ್ತೂರ್ ಸಂತೋಷ್‌ಗೆ ಹಸಿ ಮೆಣಸಿನಕಾಯಿ ತಿನ್ನಿಸಿದ ಸಂಗೀತಾ ಶೃಂಗೇರಿ!
ಕ್ಯಾಡ್‌ಬರಿಸ್, ಲಾಕ್‌ಮೆ, ಟೈಟಾನ್ ವಾಚಸ್, ಲೋರಿಯಲ್ ಪ್ಯಾರಿಸ್, ಕೋಕಾ ಕೋಲಾ, ಲಕ್ಸ್, ಕಲ್ಯಾಣ್ ಜ್ಯುವೆಲರಿ ಮತ್ತು ಫಿಲಿಪ್ಸ್‌ನಂತಹ ಹಲವು ಪ್ರಮುಖ ಕಂಪನಿಗಳಿಗೆ ಅವರು ಬ್ರಾಂಡ್ ಮಾಡೆಲ್ ಆಗಿದ್ದಾರೆ. ಈ ಜಾಹೀರಾತು ಚಿತ್ರಗಳಲ್ಲಿ ನಟಿಸಲು ಐಶ್ವರ್ಯಾ ರೈ ದಿನಕ್ಕೆ ಸುಮಾರು 6 ರಿಂದ 7 ಕೋಟಿ ಚಾರ್ಜ್ ಮಾಡುತ್ತಾರೆ ಎಂಬ ವರದಿಗಳಿವೆ.
ಇದನ್ನೂ ಓದಿ-Ekta Kapoor: ಎಮ್ಮಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ನಿರ್ಮಾಪಕಿ
ಅಮಿತಾಬ್ ಬಚ್ಚನ್ 1994 ರಲ್ಲಿ ಎಬಿಸಿಎಲ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು. ಸದ್ಯ ಕಂಪನಿಯ ಕೆಲಸವನ್ನು ಐಶ್ವರ್ಯಾ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಐಶ್ವರ್ಯಾ ರೈ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ನವೆಂಬರ್ 1 ರಂದು 50 ನೇ ವರ್ಷಕ್ಕೆ ಕಾಲಿಟ್ಟ ಐಶ್ವರ್ಯಾ ರೈ, ಇದುವರೆಗೂ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿಯೂ ಪ್ರಮುಖ ನಟಿಯಾಗಿದ್ದಾರೆ. ಒಂದು ಚಿತ್ರಕ್ಕೆ 10ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬ ವರದಿಗಳಿದ್ದು.. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 776 ಕೋಟಿ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.