Rajinikanth Birthday: ಅದು ಸಾಮಾನ್ಯ ಬಡ ಕುಟುಂಬ. ಬಡಸ್ತನದ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಸರಿಯಾದ ವಿದ್ಯಾಭ್ಯಾಸ ಸಿಗಲಿಲ್ಲ. ಯವ್ವನಕ್ಕೆ ಕಾಲಿಡುವಂತೆ ದುಡಿಯುವ ಅನಿವಾರ್ಯತೆ ಸೃಷ್ಟಿಯಾಯಿತು. ವಿದ್ಯಾಭ್ಯಾಸ ಇಲ್ಲದ ಕಾರಣಕ್ಕೆ ಒಳ್ಳೆಯ ಕೆಲಸ ಸಿಗಲಿಲ್ಲ. ಸಿಕ್ಕ ಕೆಲಸ ಕೂಲಿ. ಹೀಗೆ ಕಷ್ಟದ ಮೇಲೆ ಕಷ್ಟಗಳು ಬಂದರೂ ಅವರು ಕಾಣುತ್ತಿದ್ದ ಕನಸು ಮಾತ್ರ ನಟ ಆಗಬೇಕು-ಸೂಪರ್ ಸ್ಟಾರ್ ಆಗಬೇಕು ಎನ್ನುವುದು. 


COMMERCIAL BREAK
SCROLL TO CONTINUE READING

ಕನಸು ಕಾಣಲು ಸಾಧ್ಯ, ಅದನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯ. ಇವರ ಕತೆಯೂ ಹಾಗೆಯೇ. ಸಿನಿಮಾ ನಟನಾಗಬೇಕು ಎಂಬ ಕನಸು ಒಂದುಕಡೆ. ಬಿಡಿಗಾಸು ತಂದುಕೊಡುವ ಕೂಲಿ ಕೆಲಸ ಇನ್ನೊಂದೆಡೆ. ಇದರ ನಡುವೆಯೇ ಹೇಗೋ ಮಾಡಿ ಕೂಲಿ ಕೆಲಸದಿಂದ ಬಸ್ ಕಂಡೆಕ್ಟರ್ ಆದರು. ಜೊತೆಗೆ ಫಿಲಂ ಇನ್ಸ್ಟಿಟ್ಯೂಟ್ ಗೆ ಸೇರಿ ಕೊಂಡರು. ಅದೇ ಜೀವನದ ನಿರ್ಣಾಯಕ ಘಟ್ಟವಾಯಿತು. ತಮಿಳು ಚಿತ್ರರಂಗದಿಂದ ಕರೆ ಬಂತು. ಇಷ್ಟು ಹೇಳಿದರೆ ನಿಮಗೆ ಆ ನಟ ಯಾರು ಎನ್ನುವುದು ಗೊತ್ತಾಗಿರುತ್ತದೆ. ಅವರೇ ಸೂಪರ್ ಸ್ಟಾರ್ ರಜನಿಕಾಂತ್!


ಇದನ್ನೂ ಓದಿ- ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?


ಯಾಕಿವತ್ತು ಈ ಕತೆ ಹೇಳಬೇಕಾಯಿತು ಎಂದರೆ ಇಂದು ರಜನಿಕಾಂತ್ ಅವರ 74ನೇ ಹುಟ್ಟುಹಬ್ಬ. ಇರಲಿ, ಇಂದು ರಜನಿಕಾಂತ್ ಅವರು ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ? ಬರೋಬ್ಬರಿ 280 ಕೋಟಿ ರೂಪಾಯಿ. ಬಾಲಿವುಡ್ ನ ಚಾಕಲೇಟ್ ಹೀರೋ, ಇತ್ತೀಚಿನ ವರ್ಷಗಳಲ್ಲಿ ಬಹಳ ಭಿನ್ನವಾದ ಚಿತ್ರಗಳಿಂದ ಮನಸೆಳೆದಿರುವ ಅಮಿರ್ ಖಾನ್ ಅವರ ಮುಂಬರುವ  ‘ಕೂಲಿ’ ಚಿತ್ರಕ್ಕೆ ಒಂದು ಕಾಲದ ‘ಕೂಲಿ’ ರಜನಿಕಾಂತ್ ಪಡೆಯುತ್ತಿರುವ ಸಂಭಾವನೆ 280 ಕೋಟಿ ರೂಪಾಯಿ. ಅದೂ ಕೇವಲ 10 ದಿನದ ಕಾಲ್ ಶಿಟ್ ಗಾಗಿ. 


ಇದನ್ನೂ ಓದಿ- ಇಡೀ ಕುಟುಂಬದ ಬಗ್ಗೆ ಮಾತನಾಡಿ ಸೊಸೆ, ಮೊಮ್ಮಗಳ ಬಗ್ಗೆ ಒಂದಕ್ಷರ ಎತ್ತದ ಅಮಿತಾಬ್: ಹಾಗಿದ್ರೆ ಡಿವೋರ್ಸ್ ನಿಜವೇ..?


2025ರ ಮೇ 1ರಂದು ಕಾರ್ಮಿಕ ದಿನಾಚರಣೆಯ ದಿನ ‘ಕೂಲಿ’ ಸಿನಿಮಾ ಬಿಡುಗಡೆಯಾಗಲಿದೆ. ‘ಕೂಲಿ’ ನಂತರ ರಜನಿಕಾಂತ್ ‘ಜೈಲರ್ -2’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ‘ಜೈಲರ್ -1’ನಲ್ಲಿ ಪ್ರಮುಖ ಪಾತ್ರ ಮಾಡಿದ್ದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ‘ಜೈಲರ್ -2’ ಸಿನಿಮಾದಲ್ಲೂ ಇರುತ್ತಾರಾ ಎಂಬ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇರಲಿ, ಇನ್ನೂ ಒಂದು ಇಂಟೆರೆಸ್ಟಿಂಗ್ ವಿಷಯ ಏನೆಂದರೆ ಈಗ ನೂರಾರು ಕೋಟಿ ಸಂಭಾವನೆ ಪಡೆಯುವ ರಜನಿಕಾಂತ್ ಆರಂಭದ ದಿನಗಳಲ್ಲಿ ಕೇವಲ 50,000 ರೂಪಾಯಿಗಾಗಿ ಒಂದು ಚಿತ್ರ ಮಾಡುತ್ತಿದ್ದರಂತೆ.


ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡಿದರಷ್ಟೇ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂಬುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಉತ್ತಮ ನಿದರ್ಶನ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.