Full meals Movie : ನಟ ಪುನೀತ್ ರಾಜಕುಮಾರ್ ನಿರ್ಮಿಸಿದ್ದ ʻಫ್ಯಾಮಿಲಿ ಪ್ಯಾಕ್‌ʼ ಚಿತ್ರದಲ್ಲಿ ನಟಿಸಿದ ಲಿಖಿತ್ ಶೆಟ್ಟಿ ಹೊಸ ಸಿನಿಮಾ ಮೂಲಕ ಮತ್ತೆ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ. ಆ ಚಿತ್ರಕ್ಕೆ ʻಫುಲ್‌ ಮೀಲ್ಸ್‌ʼ ಎಂಬ ಶೀರ್ಷಿಕೆ ನೀಡಿದ್ದಾರೆ. ʻಸಂಕಷ್ಟಕರ ಗಣಪತಿʼ ಹಾಗೂ ʻಫ್ಯಾಮಿಲಿ ಪ್ಯಾಕ್ʼ ಚಿತ್ರಗಳ ಮೂಲಕ ಜನಮನ ಗೆದ್ದಿರುವ ಲಿಖಿತ್ ಶೆಟ್ಟಿ, ನಿರ್ಮಿಸಿ ಜೊತೆಗೆ ನಟಿಸುತ್ತಿರುವ ಚಿತ್ರ ʻಫುಲ್ ಮೀಲ್ಸ್ʼ. ಸದ್ಯ ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.  


[[{"fid":"294741","view_mode":"default","fields":{"format":"default","field_file_image_alt_text[und][0][value]":"Full meals Movie","field_file_image_title_text[und][0][value]":"ಫುಲ್ ಮೀಲ್ಸ್"},"type":"media","field_deltas":{"1":{"format":"default","field_file_image_alt_text[und][0][value]":"Full meals Movie","field_file_image_title_text[und][0][value]":"ಫುಲ್ ಮೀಲ್ಸ್"}},"link_text":false,"attributes":{"alt":"Full meals Movie","title":"ಫುಲ್ ಮೀಲ್ಸ್","class":"media-element file-default","data-delta":"1"}}]]


ಇದನ್ನೂ ಓದಿ :  ನಟಿಯ ಆತ್ಮಹತ್ಯೆಯ ಹಿಂದಿನ ರಾತ್ರಿ ಆ 17 ನಿಮಿಷದಲ್ಲಿ ಏನಾಯ್ತು! ಹೋಟೆಲ್‌ಗೆ ಬಂದ ಹುಡುಗ ಯಾರು?


ಸಂಪೂರ್ಣ ಮನರಂಜಾನತ್ಮಕ ಸಿನಿಮಾ ಇದಾಗಿದೆ. ಲಿಖಿತ್‌ ಶೆಟ್ಟಿ ನಾಯಕರಾಗಿ, ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಅನುಭವಿ ಕಲಾವಿದರ ತಾರಾಗಣವಿದೆ. ಬೆಂಗಳೂರು, ರಾಮನಗರ ಹಾಗೂ ಮಂಗಳೂರಿನಲ್ಲಿ ಶೂಟಿಂಗ್‌ ಮಾಡುತ್ತಿದ್ದಾರೆ.


ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಇದನ್ನೂ ಓದಿ :  "ಬ್ಯಾರೇನೇ ಐತಿ" ಎನ್ನುತ್ತಿದ್ದಾನೆ ಗುರುದೇವ್ ಹೊಯ್ಸಳ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.