Gadar 2 vs OMG 2 Box Office Collection : ಸನ್ನಿ ಡಿಯೋಲ್ ಅವರ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅವರ 'OMG 2' ಚಿತ್ರಗಳ ನಡುವಿನ ಘರ್ಷಣೆ ಬಾಕ್ಸ್ ಆಫೀಸ್‌ನಲ್ಲಿ ಮುಂದುವರೆದಿದೆ. ಕಳೆದ ಮೂರು ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದಿರುವ 'ಗದರ್ 2' ಚಿತ್ರದ ನಾಲ್ಕನೇ ದಿನ ಕಲೆಕ್ಷನ್ ನಲ್ಲಿ ಕೊಂಚ ಇಳಿಕೆಯಾಗಿದ್ದು, ಅದರ ಎಫೆಕ್ಟ್ 'OMG 2' ಮೇಲೂ ಕಂಡುಬಂದಿದೆ. ವೀಕೆಂಡ್‌ನಲ್ಲಿ 'ಗದರ್ 2' ಭರ್ಜರಿ ಕಲೆಕ್ಷನ್ ಮಾಡಿದೆ. 'OMG 2' ನಾಲ್ಕನೇ ದಿನವೂ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿದೆ. 


COMMERCIAL BREAK
SCROLL TO CONTINUE READING

ವರದಿ ಪ್ರಕಾರ, ಸನ್ನಿ ಡಿಯೋಲ್ ಅಭಿನಯದ 'ಗದರ್ 2' ಚಿತ್ರದ ನಾಲ್ಕನೇ ದಿನ ಕಲೆಕ್ಷನ್ ನಲ್ಲಿ ಕೊಂಚ ಇಳಿಕೆಯಾಗಿದೆ. ಇದರ ಹೊರತಾಗಿಯೂ, ಚಿತ್ರವು ವೀಕೆಂಡ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಈ ವರದಿಗಳ ಪ್ರಕಾರ, ಚಿತ್ರವು ಸೋಮವಾರ ಸುಮಾರು 38 ರಿಂದ 40 ಕೋಟಿ ಕಲೆಕ್ಷನ್ ಮಾಡಿದೆ. ಇನ್ನುಳಿದ ಮೂರು ದಿನಗಳ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಮೊದಲ ದಿನ 40.10 ಕೋಟಿ ಕಲೆಕ್ಷನ್, ಎರಡನೇ ದಿನ 43.08 ಕೋಟಿ ಕಲೆಕ್ಷನ್, ಮೂರನೇ ದಿನ 51.70 ಕೋಟಿ ಕಲೆಕ್ಷನ್ ಮಾಡಿದೆ. ಅಂದರೆ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ 172.88 ರಿಂದ 174.88 ಕೋಟಿ ಕಲೆಕ್ಷನ್ ಮಾಡಿದೆ.


ಇದನ್ನೂ ಓದಿ: ಸೂಪರ್ ಹಿಟ್ ಜೋಡಿ ಎನ್‌ಟಿಆರ್ ಮತ್ತು ಶ್ರೀದೇವಿ ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾಗಳಿವು..!


ಅಕ್ಷಯ್ ಕುಮಾರ್ ಅಭಿನಯದ 'OMG 2' ಚಿತ್ರದ ಕಲೆಕ್ಷನ್ ಕೂಡ ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡಿದೆ. ವರದಿಗಳ ಪ್ರಕಾರ, 'OMG 2' ಸೋಮವಾರ 11 ರಿಂದ 13 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ಮೂರು ದಿನಗಳ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರವು ಮೊದಲ ದಿನ 10.26 ಕೋಟಿ, ಎರಡನೇ ದಿನ 15.30 ಮತ್ತು ಮೂರನೇ ದಿನ 17.55 ಕೋಟಿ ಕಲೆಕ್ಷನ್ ಮಾಡಿದೆ. ಅದೇ ಹೊತ್ತಿಗೆ ನಾಲ್ಕನೇ ದಿನದ ಕಲೆಕ್ಷನ್ ಸೇರಿದಂತೆ ಸುಮಾರು 54.11 ರಿಂದ 56.11 ಕೋಟಿ ಕಲೆಕ್ಷನ್ ಮಾಡಿದೆ.


ಗದರ್ 2 ಚಿತ್ರದ ಯಶಸ್ಸಿನ ನಂತರ ಸನ್ನಿ ಡಿಯೋಲ್ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ, ನಟ ಪ್ರೇಕ್ಷಕರಿಗೆ ಧನ್ಯವಾದ ಹೇಳಿದರು. ವಿಶೇಷವೆಂದರೆ ಈ ಪ್ರೆಸ್ ಮೀಟ್‌ನಲ್ಲಿ ಅಮೀಶಾ ಪಟೇಲ್ ಅಥವಾ ಸಿಮ್ರತ್ ಕೌರ್ ಕಾಣಿಸಿಕೊಂಡಿಲ್ಲ, ಇದು ಹಲವು ಚರ್ಚೆಗಳಿಗೆ ಕಾರಣವಾಗಿದೆ. 


ಇದನ್ನೂ ಓದಿ: ಸೀರೆಯಲ್ಲಿ ಅಪ್ಸರೆಯಂತೆ ಕಂಗೋಳಿಸಿದ ʼಕಬ್ಜʼ ಸುಂದರಿ..ಪೋಟೋಸ್‌ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.