ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕಾಲೇಜು ಸ್ಟೋರಿಗಳು ಬಂದಿವೆ. ಈ ಪೈಕಿ ಹಲವು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ ಕೂಡ. ಅದೇ ರೀತಿಯಾಗಿ ಇದೀಗ 'ಗಜಾನನ & ಗ್ಯಾಂಗ್' ರಿಲೀಸ್‌ಗೆ ರೆಡಿಯಾಗಿದ್ದು, ಹೊಸ ಟೀಂ ಜೊತೆಗೆ ಕೆಲವು ಅನುಭವಿ ಸ್ಟಾರ್‌ಗಳು ಸಾಥ್‌ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಮನರಂಜನೆ ರಸದೌತಣ ಬಡಿಸಲು 'ಗಜಾನನ & ಗ್ಯಾಂಗ್' ಟೀಂ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ನಟ ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ 'ಗಜಾನನ & ಗ್ಯಾಂಗ್' ಜೂನ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್ ಮತ್ತು ಹಾಡುಗಳಿಂದ ಒಂದಷ್ಟು ಗಮನ ಸೆಳೆದಿರುವ 'ಗಜಾನನ & ಗ್ಯಾಂಗ್' ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡಲು ಸಜ್ಜಾಗಿದೆ. ಪ್ರೀ-ರಿಲೀಸ್ ಇವೆಂಟ್ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದೆ.


ಇದನ್ನೂ ಓದಿ : Singer KK Death: ಜನಪ್ರಿಯ ಗಾಯಕ ಕೆಕೆ ಇನ್ನಿಲ್ಲ


ಹೊಸಬರ ಅಳಲು


ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ನಿರ್ದೇಶಕ ಅಭಿಷೇಕ್ ಶೆಟ್ಟಿ, ಹೊಸಬರ ಸಿನಿಮಾಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದು ಎರಡು ವರ್ಷದ ಜರ್ನಿಯಾಗಿದು, 'ಗಜಾನನ & ಗ್ಯಾಂಗ್' ಸಿನಿಮಾದಲ್ಲಿ ಹೊಸತನದ ಹಂಬಲವಿದೆ. 80% ಸಿನಿಮಾಗಳನ್ನು ಮಾಡುತ್ತಿರುವವರು ನಮ್ಮಂತವರು. 20% ಸ್ಟಾರ್ ಸಿನಿಮಾಗಳು ಆಗ್ತಿವೆ. 80% ಪ್ರೋತ್ಸಾಹ ಕೊಟ್ರೆ 20 ಮುಂದೆ 40 ಆಗುತ್ತೆ ಎಂದರು.


ಇದೇ ವೇದಿಕೆ ಮೇಲೆ ಮಾತನಾಡಿದ ನಟಿ ಆದಿತಿ ಪ್ರಭುದೇವ್, 'ಗಜಾನನ & ಗ್ಯಾಂಗ್' ಸಿನಿಮಾ ಬ್ಯೂಟಿಫುಲ್ ಜರ್ನಿ ಎಂದರು. ಕನ್ನಡದಲ್ಲಿ ಕಾಲೇಜ್ ಗ್ಯಾಂಗ್ ಸ್ಟೋರಿ ಬಂದು ಸುಮಾರು ವರ್ಷ ಕಳೆದು ಹೋಗಿವೆ. ಇದೀಗ ಆ ಕೊರತೆಯನ್ನು 'ಗಜಾನನ & ಗ್ಯಾಂಗ್' ನೀಗಿಸುತ್ತದೆ ಎಂದರು. ಒಟ್ಟಾರೆ 'ಗಜಾನನ & ಗ್ಯಾಂಗ್' ಸಿನಿಮಾ ವಿಭಿನ್ನ ಟೈಟಲ್‌ ಜೊತೆಗೆ ವಿಭಿನ್ನವಾದ ಕಥೆಯನ್ನು ಹೊತ್ತು ಬರುತ್ತಿದ್ದು, ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡೋದು ಪಕ್ಕಾ ಅಂತಿದ್ದಾರೆ ಸಿನಿಮಾ ತಂಡದವರು. ಆದರೆ ಇದಕ್ಕೆಲ್ಲಾ ಉತ್ತರ ಜೂನ್‌ 3ರ ನಂತರ ಪಕ್ಕಾ ಆಗಲಿದೆ. 


ಇದನ್ನೂ ಓದಿ : ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ