ಬೆಂಗಳೂರು : ರಂಗುರಂಗಿನ ಭಟ್ಟರ "ಗಾಳಿಪಟ 2" ಸಿನಿಮಾ ಗಗನದೆತ್ತರಕ್ಕೆ ಹಾರಲು ಕೆಲವೇ ಗಂಟೆಗಳು ಬಾಕಿ ಇದೆ. ಆಗಸ್ಟ್ 12 ರಂದು ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ.ರಿಲೀಸ್ ಗೂ ಮುನ್ನ ಬೇಜಾನ್ ಸೌಂಡ್ ಮಾಡಿರೋ ಸಿನಿಮಾವಿದು.


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ನಲ್ಲಿ ಇದೀಗ ಯಾವ ಸಿನಿಮಾ ಮಾಡಿದ್ರು ಸಕ್ಕತ್ ಆಗೇ ಸೌಂಡ್ ಮಾಡುತ್ತೆ.  ಅಂತೆಯೇ 'ಗಾಳಿಪಟ 2 ' ಬಗ್ಗೆ ಬೇರೇ ಇಂಡಸ್ಟ್ರಿಗಳಲ್ಲೂ  ಟಾಕ್ ಜೋರಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ಇದೀಗ ಸಿನಿಮಾವನ್ನ ಹಾಯಾಗಿ ಬೆಳ್ಳಿತೆರೆ ಮೇಲೆ ನೋಡೋ ಶುಭ ಘಳಿಗೆ ಕೂಡಿ ಬಂದಿದ್ದು ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. 


ಇದನ್ನೂ  ಓದಿ : Shilpa Shetty: ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ
 ಜನರು ಮೊದಲ ದಿನವೇ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಯಾಕಂದ್ರೆ ಈಗಾಗಲೇ  ಅಭಿಮಾನಿಗಳು ಭರ್ಜರಿಯಾಗೇ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಅನ್ನೋ ಕನ್ಫರ್ಮ್ ಮಾಹಿತಿ ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ. 


ಯೋಗರಾಜ್​ ಭಟ್​ ನಿರ್ದೇಶನದ ಈ ಚಿತ್ರದಲ್ಲಿ ‘ಗೋಲ್ಡನ್​ ಸ್ಟಾರ್​’ ಗಣೇಶ್​, ಪವನ್​ ಕುಮಾರ್​, ದಿಗಂತ್​ ನಟಿಸಿದ್ದಾರೆ. ಅಚ್ಚರಿ ಎಂದರೆ ಬುಕ್​ ಮೈ ಶೋನಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ‘ರಕ್ಷಾ ಬಂಧನ್​’ ಚಿತ್ರಕ್ಕಿಂತಲೂ ಹೆಚ್ಚಿನ ವೋಟ್ಸ್​ ಪಡೆಯುವ ಮೂಲಕ ‘ಗಾಳಿಪಟ 2’ ಸಿನಿಮಾ ರಂಗೇರಿದೆ. ಈಗಾಗಲೇ ರಿಲೀಸ್ ಆಗಿರೋ ಅಷ್ಟೂ ಹಾಡುಗಳನ್ನು ಜನರು ಇಷ್ಟಪಟ್ಟಿದ್ದಾರೆ. ಗಣೇಶ್​, ದಿಗಂತ್​, ಪವನ್​ ಕಾಂಬಿನೇಷನ್​ ನೋಡೋದೇ ಮಜಾ. ಅದರಲ್ಲೂ ಪವನ್ ಕೂಲ್ ಲುಕ್ ನೋಡ್ತಾನೆ ಇರೋಣ ಅನ್ನೋ ಲೆವೆಲ್ಲಿಗೆ ಕಿಕ್ಕೇರಿಸಿದೆ.


ಇದನ್ನೂ  ಓದಿ : ಪರಂವಃ ಸ್ಟುಡಿಯೋಸ್​ ನಿಂದ 11ರ ಹರೆಯದ ಬಾಲಕನ ಕಥೆ 'ಮಿಥ್ಯ'


ಭಟ್ರ ಸಿನಿಮಾ ಅಂದ್ರೆ ಅಲ್ಲಿ ಮ್ಯಾಜಿಕ್ ಗೇ ಮ್ಯಾಜಿಕ್ ಮಾಡಿರುತ್ತಾರೆ. ಫ್ಯಾಮಿಲಿ ಎಲ್ಲಾ ಹಾಯಾಗಿ ಕುಳಿತು ನೋಡೋ ಸಿನಿಮಾ. ಹೊಟ್ಟೆ ಹುಣ್ಣಾಗುವಷ್ಟು ನಗಬಹುದು, ಕಣ್ಣು ಕೆಂಪಾಗುವಷ್ಟು ಆಳಬಹುದು. ಲವ್, ರೋಮ್ಯಾನ್ಸ್, ಕಾಲೇಜು ಲೈಫ್, ಎಕ್ಸಾಮ್,  ಹೀಗೆ ಎಲ್ಲವನ್ನೂ ಮಜವಾಗಿ ತೋರಿಸೋ ಪ್ರಯತ್ನವನ್ನ 'ಗಾಳಿಪಟ 2' ನಲ್ಲಿ ಭಟ್ರು ಮಾಡಿದ್ದಾರೆ. ಸೋ ಇನ್ಯಾಕೆ ತಡ ಬೇಗ ಟಿಕೆಟ್ ಬುಕ್ ಮಾಡಿಕೊಂಡು ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡಿ. ಎಂಜಾಯ್ ಮಾಡಿ..


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.