ʼಘೋಸ್ಟ್ʼ ಸಿನಿಮಾದ ಮೊದಲ ಸಾಂಗ್ ರಿಲೀಸ್..! ಒಂದೇ ಹಾಡಿನಲ್ಲಿ 4 ಭಾಷೆಗಳ ಸಂಗಮ
Ghost Song Release: ಕರುನಾಡ ಚಕ್ರವತಿ ಶಿವರಾಜ್ಕುಮಾರ್ ಅಭಿನಯದ ʼಘೋಸ್ಟ್ʼ ಸಿನಿಮಾದ ಮೊದಲ ಹಾಡು (OGM) ಒರಿಜಿನಲ್ ಗ್ಯಾಂಗ್ಸ್ಟರ್ ಮ್ಯೂಸಿಕ್ ಟ್ರ್ಯಾಕ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದೆ.
Ghost Movie Updates: ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಘೋಸ್ಟ್. ಸದ್ಯ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಒಂದೇ ಹಾಡಿನಲ್ಲಿ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ತೆಲುಗು ಭಾಷೆಯನ್ನು ಮಿಕ್ಸ್ ಮಾಡಲಾಗಿದ್ದು, ಟಿ ಸಿರೀಸ್‌ನಲ್ಲಿ ಈ ಹಾಡು ರಿಲೀಸ್ ಆಗಿದೆ. ಒಎಂಜಿ ಹಾಡು ಬಿಡುಗಡೆಯಾಗುತ್ತಿದ್ದಂತೆ ಫುಲ್ ಟ್ರೆಂಡ್ ಕ್ರಿಯೆಟ್ ಮಾಡಿದೆ.
ಈ ಹಾಡು ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇನ್ನು ಅಕ್ಟೋಬರ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಸದ್ಯ ಸಿನಿಮಾ ಪ್ರಚಾರ ಕೂಡ ಜೋರಾಗಿದೆ. ಇನ್ನು ಈ ಈ ಘೋಸ್ಟ್ ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದ್ದು, ಅದರಲ್ಲಿ ನಾಲ್ಕು ಬಾಷೆಗಳ ಸಂಗಮವಾದ ಹಾಡು ಸಹ ಒಂದು.
ಇದನ್ನೂ ಓದಿ-‘ಕಾಂತಾರ 2’ ಶೂಟಿಂಗ್ ಡೇಟ್ ಫಿಕ್ಸ್..! ಸಿನಿಮಾ ಬಜೆಟ್ ಬಗ್ಗೆ ರಿಷಬ್ ಶೆಟ್ಟಿ ಏನಂದ್ರು ಗೊತ್ತಾ?
ಒರಿಜಿನಲ್ ಗ್ಯಾಂಗ್ ಸ್ಟರ್ (OGM) ಸಾಂಗ್ ರಿಲೀಸ್ ಆಗುತ್ತಿದ್ದಂತೆ ಫುಲ್ ಟ್ರೆಂಡ್ ಆಗಿದ್ದು, ಈ ಬಗ್ಗೆ ಶಿವಣ್ಣ "ಒಜಿಎಂ ಟ್ರೆಂಡ್ @ 1 ಎಂದು" ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಜಸ್ಟ್ ಸಾಂಗ್ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ ಸಿನಿಮಾದಲ್ಲಿ ಶಿವಣ್ಣ ಹೇಗೆ ಅಬ್ಬರಿಸಲಿದ್ದಾರೆ ಅನ್ನೋದು ಕುತೂಹಲಕಾರಿ ವಿಷಯ..
ಸದ್ಯ ಅಭಿಮಾನಿಗಳಲ್ಲಿ ಭಾರೀ ಹೈಪ್ ಕ್ರಿಯೇಟ್ ಮಾಡಿರುವ ಈ ಘೋಸ್ಟ್ ಸಿನಿಮಾ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಶ್ರೀನಿ ನಿರ್ದೇಶಿಸಿದ್ದಾರೆ. ಆದರೆ ಇಲ್ಲಿ ಇನ್ನೊಂದು ಗಮನಾರ್ಹವಾದ ವಿಷಯವೆಂದರೇ ಶಿವಣ್ಣ ಅವರ ಘೋಸ್ಟ್ ಸಿನಿಮಾ ರಿಲೀಸ್ ಆಗೋ ದಿನವೇ ಇಳಯದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಹ ದೊಡ್ಡ ಮಟ್ಟದಲ್ಲಿಯೇ ಚಿತ್ರ ಎಲ್ಲ ಭಾಷೆಯಲ್ಲೂ ಬಿಡುಗಡೆಯಾಗಲಿದೆ. ಹೀಗಾಗಿ ಯಾವ ಸಿನಿಮಾ ಘರ್ಜಿಸುತ್ತೇ ಅನ್ನೋದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ-ʼಆ ಕರಾಳ ರಾತ್ರಿʼಯ ಹುಡುಗಿ ಬೆಳದಿಂಗಳ ಬಾಲೆಯಾಗಿ ಮಿಂಚಿಂಗ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.