Sankranthi Ghost Special: ಸ್ಯಾಂಡಲ್‌ವುಡ್‌ ಸಿನಿ ಅಂಗಳದಲ್ಲಿ ಕಳೆದ ವರ್ಷ ಘೋಸ್ಟ್ ಸಿನಿಮಾ ತೆರೆಕಂಡು, ಅತಿ ಹೆಚ್ಚು ಗಮನ ಸೆಳೆದ ಚಿತ್ರವೂ ಇದಾಗಿತ್ತು. ಈ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು,ಇದು ಅತಿ ಹೆಚ್ಚುಗಳಿಕೆ ಮಾಡಿದ ಚಿತ್ರವೂ ಇದಾಗಿತ್ತು.  ಕ್ರೇಜ್ ಹುಟ್ಟುಹಾಕಿದ್ದ ಈ ಸಿನಿಮಾ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ  ಆಗುತ್ತಿದೆ. ವಿಶೇಷವಾಗಿ ಅದು ಸಂಕ್ರಾಂತಿ ಹಬ್ಬಕ್ಕೇನೆ ಪ್ರಸಾರ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಸಂಕ್ರಾಂತಿ ಹಬ್ಬಕ್ಕೆ ಮೊದಲ ಬಾರಿಗೆ ಘೋಸ್ಟ್ ಚಿತ್ರ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದು, ಜೀ ಕನ್ನಡಲ್ಲಿಯೇ ಇದೀಗ ಘೋಸ್ಟ್ ಸಿನಿಮಾ ಪ್ರಸಾರದ ಪ್ಲಾನ್ ಆಗಿದೆ. ಅಧಿಕೃತವಾಗಿಯೇ ಈ ಒಂದು ಮಾಹಿತಿ ಕೂಡ ಹೊರ ಬಂದಿದ್ದು, ಈ ಮೂಲಕ ಶಿವಣ್ಣನ ಫ್ಯಾನ್ಸ್‌ಗೆ ಹಬ್ಬ ಸಂಭ್ರಮ ಮತ್ತು ಸಡಗರ ಎರಡೂ ಇರುತ್ತದೆ ಅಂತಲೇ ಹೇಳಬಹುದು.


 

 

 

 



 

 

 

 

 

 

 

 

 

 

 

A post shared by Zee Kannada (@zeekannada)


ಇದನ್ನೂ ಓದಿ: 'ಉಪಾಧ್ಯಕ್ಷ' ಟ್ರೇಲರ್‌ ರಿಲೀಸ್! ಅಧ್ಯಕ್ಷ ಮ್ಯಾಜಿಕ್‌ ಇದರಲ್ಲಿಯೂ ಇದೆಯಾ?


ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ನಟನೆಯ ಘೋಸ್ಟ್ ಸಿನಿಮಾ ಇದೇ ಜನವರಿ 15 ರಂದು ಹಬ್ಬಕ್ಕೆ ಟಿವಿಯಲ್ಲಿ ಪ್ರಸಾರವಾಗಲಿದ್ದು, ಸೋಮವಾರ ಸಂಜೆ-4 ಗಂಟೆಗೆ ಹಬ್ಬದ ಸಡಗರದಲ್ಲಿರೋರಿಗೆ ಈ ಚಿತ್ರ ಎಂಟರಟೈನ್ ಮಾಡಲಿದೆ. ಈ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಶಿವಣ್ಣ ಎಲ್ಲರ ಮನ-ಮನೆಯಲ್ಲೂ ಬರ್ತಿದ್ದು, ಹಬ್ಬದ ಖುಷಿಯನ್ನು ದುಪ್ಪಟ್ಟಯ ಮಾಡಲಿದೆ.


ಕಳೆದ ವರ್ಷ ಅಕ್ಟೋಬರ್-19 ರಂದು ಘೋಸ್ಟ್ ಸಿನಿಮಾ ಎಲ್ಲೆರೆ ರಿಲೀಸ್ ಆಗಿದ್ದು, ಮತ್ತೆ ಹಿಂದಿ ಭಾಷೆಯಲ್ಲೂ ಈ ಚಿತ್ರ ರಿಲೀಸ್ ಆಗಿತ್ತು. ಬಹು ಭಾಷೆಯಲ್ಲಿ ತೆರೆಗೆ ಅಪ್ಪಳಿಸಿದ ಈ  ಚಿತ್ರವನ್ನ ಜನ ತುಂಬಾನೆ ಮೆಚ್ಚಿಕೊಂಡು, ಹಾಗೆಯೇ  ಒಳ್ಳೆ ಕಲೆಕ್ಷನ್ ಕೂಡ ಮಾಡಿ, ಗೆಲುವಿನ ನಗೆಯನ್ನೂ ಬೀರಿತ್ತು. ಇದೀಗ ಘೋಸ್ಟ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಧಮಾಕಾ ಮಾಡಲು ಬರ್ತಿದೆ ಅಂತಲೇ ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.