ಬೆಂಗಳೂರು: ಮುಂಗಾರು ಮಳೆಯ ಚೆಲ್ಲಾಟದ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು 38ನೇ ಜನ್ಮದಿನದ ಸಂಭ್ರಮ. ರಾಜರಾಜೇಶ್ವರಿನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಕೇಕ್​ ಕಟ್​ ಮಾಡುವ ಮೂಲಕ ರಾತ್ರಿಯೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.


COMMERCIAL BREAK
SCROLL TO CONTINUE READING

ಗಣೇಶ್ ಹುಟ್ಟು ಹಬ್ಬದ ಉಡುಗೊರೆಯಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಗೋಲ್ಡನ್ ಸ್ಟಾರ್ ನ 'ಆರೆಂಜ್' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. 



ಇನ್ನು ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವನ್ನೇ ಈ ಬಾರಿ ಗಣೇಶ್ ಗೆ ಗಿಫ್ಟ್ ಆಗಿ ನೀಡುವುದಾಗಿ ಹೇಳಿದರು.