Bigg Boss News: ಬಿಗ್ ಬಾಸ್ ತೆಲುಗು 8 ಬರಲಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸ್ಪರ್ಧಿಗಳು ಯಾರು? ನಾಗಾರ್ಜುನ್ ಹೋಸ್ಟಿಂಗ್ ಮಾಡುತ್ತಾರಾ? ಅಥವಾ ಬೇರೆ ಯಾರಾದರೂ ಬರುತ್ತಾರೆಯೇ? ಶೋ ಹೇಗಿರುತ್ತೆ?... ಬಿಗ್ ಬಾಸ್ ಪ್ರೇಮಿಗಳ ಮನದಲ್ಲಿ ಹಲವು ಅನುಮಾನಗಳು ಓಡಾಡುತ್ತಿವೆ. ನಾಗಾರ್ಜುನ ಅವರು ಜುಲೈ 21 ರಂದು ಬಿಗ್ ಬಾಸ್ ಸೀಸನ್ 8 ರ ಪ್ರೋಮೋವನ್ನು ಹಂಚಿಕೊಂಡಿದ್ದರು..


COMMERCIAL BREAK
SCROLL TO CONTINUE READING

ಈ ಬಾರಿಯೂ ಅವರು ಬಿಗ್ ಬಾಸ್ ಹೋಸ್ಟ್ ಮಾಡುವ ಜವಾಬ್ದಾರಿಯನ್ನು ಹೊರುತ್ತಿದ್ದಾರೆ ಎನ್ನುವುದು ಈ ಪೋಸ್ಟ್‌ನಿಂದ ಸ್ಪಷ್ಟವಾಗಿದೆ.. ನಾಗಾರ್ಜುನ ಅವರ ನಾಯಕತ್ವದಲ್ಲಿ ಸತತ ಆರನೇ ಸೀಸನ್ ಅನ್ನು ಮುನ್ನಡೆಸಲಿದ್ದಾರೆ.  


ಇದನ್ನೂ ಓದಿ-ʼಆಹಾರ ವಿಲ್ಲದೇ ಬದುಕಬಲ್ಲೆ ಆದರೆ ಅದನ್ನು ಮಾಡದೇ ಇರಲು ಸಾಧ್ಯವಿಲ್ಲʼ.. ಸಮಂತಾ ಬೋಲ್ಡ್‌ ಕಾಮೆಂಟ್!


ಈ ಹಿನ್ನಲೆಯಲ್ಲಿ ಸೀಸನ್ 7ಕ್ಕಿಂತ ವಿಭಿನ್ನವಾಗಿ ಸೀಸನ್ 8 ಮಾಡಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ವಿಶೇಷವೆಂದರೆ, ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಎರಡು ಮನೆಗಳು ಇರುತ್ತವೆ. ಒಂದು ಮುಖ್ಯ ಮನೆ ಮತ್ತು ಇನ್ನೊಂದು ಸಣ್ಣ ಮನೆ. ಮುಖ್ಯ ಮನೆಯನ್ನು ಪ್ರವೇಶಿಸಲು... ಸ್ಪರ್ಧಿಗಳು ಕಷ್ಟಪಡಬೇಕಾಗುತ್ತದೆ. ಆಟ ಮತ್ತು ಟಾಸ್ಕ್ ಗಳಲ್ಲಿ ಮಿಂಚುವವರು ಮುಖ್ಯ ಮನೆಗೆ ಬಂದು ಬಿಗ್ ಬಾಸ್ ಶೋನಲ್ಲಿ ತಮ್ಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳುತ್ತಾರೆ. 


ಇದನ್ನೂ ಓದಿ-'ನೆವರ್ ಮ್ಯಾರಿ', ಐಶ್ವರ್ಯಾ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್‌ ವಿಡಿಯೋ ವೈರಲ್!


ಯೂಟ್ಯೂಬರ್ ಬುಂ ಚಿಕ್ ಬಬ್ಲು, ಕುಮಾರಿ ಆಂಟಿ, ರಿತು ಚೌಧರಿ, ಅಮೃತಾ ಪ್ರಣೈ, ಯಾದಮ್ಮ ರಾಜು, ಸೋನಿಯಾ ಸಿಂಗ್, ಮೈ ವಿಲೇಜ್ ಶೋ ಅನಿಲ್, ಶ್ವೇತಾ ನಾಯ್ಡು, ವಿನೋದ್ ಕುಮಾರ್ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ತಾರೆಯ ಹೆಸರು ಕೇಳಿ ಬರುತ್ತಿದೆ. ಹೀರೋ ಅಬ್ಬಾಸ್ ಬಿಗ್ ಬಾಸ್ 8 ರ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.. 


ಅಬ್ಬಾಸ್ ಒಮ್ಮೆ ಲವರ್ ಬಾಯ್ ಇಮೇಜ್‌ನೊಂದಿಗೆ ಸ್ಟಾರ್ ಹೀರೋ ಸ್ಥಾನಮಾನವನ್ನು ಅನುಭವಿಸಿದರು. ಅಬ್ಬಾಸ್ ಪ್ರೇಮದೇಶಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆದರೆ ಅಬ್ಬಾಸ್ ಅವರ ವೃತ್ತಿಜೀವನದ ಅತೀ ಬೇಗ ಕುಸಿಯಿತು. ನಾಯಕನಾಗಿದ್ದವರು ಪೋಷಕ ಪಾತ್ರಗಳನ್ನು ಮಾಡತೊಡಗಿದರು. ನಟನೆ ಬಿಟ್ಟು ವಿದೇಶದಲ್ಲಿ ನೆಲೆಯೂರಿದರು. ಅವರು ಇತ್ತೀಚೆಗೆ ಭಾರತಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ. ಬಿಗ್ ಬಾಸ್ ತಯಾರಕರು ಅಬ್ಬಾಸ್ ಅವರನ್ನು ಸಂಪರ್ಕಿಸಿದ್ದು, ನಟ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.