ಡಿ ಬಾಸ್ ಅಭಿಮಾನಿಗಳಿಗೆ ಗುಡ್ನ್ಯೂಸ್.. ಈ ಸೂಪರ್ ಹಿಟ್ ಕಾಂಬಿನೇಷನ್ನಲ್ಲಿ ದರ್ಶನ್ ಮುಂದಿನ ಸಿನಿಮಾ!
Darshan Upcoming Movie Updates : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಟೇರ್ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಜೊತೆಜೊತೆಗೆ `ಗರಡಿ` ಚಿತ್ರದಲ್ಲಿ ಅಥಿತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇದೀಗ ದರ್ಶನ ಮುಂದಿನ ಸಿನಿಮಾ ಯಾವುದು ಎನ್ನುವುದರ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.
D Boss : ಪ್ರತಿಯೊಬ್ಬ ಸ್ಟಾರ್ ನಟರು ಒಂದಾದ ಮೇಲೊಂದು ಸಿನಿಮಾಗಳನ್ನು ಲೈನಪ್ ಮಾಡಿಕೊಂಡಿರುತ್ತಾರೆ. ಅದೇ ರೀತಿ ದರ್ಶನ್ ಸಹ 'ಕಾಟೇರ' ಸಿನಿಮಾ ನಂತರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಹೌದು ಕೆಲವು ದಿನಗಳ ಹಿಂದೆ ಡಿ ಬಾಸ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅವರ ಕೆಲವು ಸಿನಿಮಾಗಳು ಘೋಷಣೆಯಾಗಿದ್ದವು. ತೆಲುಗು ನಿರ್ಮಾಪಕರೊಂದಿಗೆ ಸಿನಿಮಾ ಮಾಡಲೂ ಸಹ ದರ್ಶನ್ ಒಪ್ಪಿಕೊಂಡಿದ್ದರು.
ಸದ್ಯ ಅವರ ಯಾವ ಸಿನಿಮಾ ಮೊದಲು ತೆರೆಗೆ ಬರಲಿದೆ..? ನಂತರ ಯಾವುದು..? ಎನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ. ಎಷ್ಟೋ ದಿನಗಳ ಹಿಂದೆಯೇ ಮುಗಿಯಬೇಕಾಗಿದ್ದ ಸಿನಿಮಾ ಕೊರೋನಾ ಕಾರಣದಿಂದ ಮುಂದೂಡಲಾಗಿತ್ತು. ಯಾವುದು ಆ ಸಿನಿಮಾ ಅಂತೀರಾ..? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್...
ಇದನ್ನೂ ಓದಿ-ಸೂಪರ್‌ಸ್ಟಾರ್ ಶ್ರೀದೇವಿ 60ನೇ ಹುಟ್ಟು ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ..!
'ತಾರಕ್' ಸಿನಿಮಾದಿಂದ ಗೆಲುವು ಕಂಡಿದ್ದ ಪ್ರಕಾಶ್ ಮತ್ತು ಡಿ ಬಾಸ್ ಮತ್ತೇ ತಮ್ಮದೇ ಕಾಂಬೀನೇಷನ್‌ನಲ್ಲಿ ಒಂದು ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ಶೂಟಿಂಗ್ ನಿಂತು ಹೋಗಿತ್ತು. ಇದೀಗ ನಟ ದರ್ಶನ್ 'ಕಾಟೇರ' ಬಳಿಕ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಸ್ವತಃ ತಾವೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ದರ್ಶನ್- ಪ್ರಕಾಶ್ ಜೋಡಿಯ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯ D57 ಟೈಟಲ್‌ನಲ್ಲಿಯೇ ಚಿತ್ರದ ಕೆಲಸಗಳು ನಡೆಯುತ್ತಿವೆ. ಮತ್ತೇ ಈ ಜೋಡಿ ಒಳ್ಳೆ ಫ್ಯಾಮಿಲಿ ಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ. ಸಿನಿಮಾ ಯಾವಾಗ ಸೆಟ್ಟೆರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಇದನ್ನೂ ಓದಿ-ಅಪರೂಪದ ದಾಖಲೆ ಬರೆದ ಪುಷ್ಪ 2..! ಇನ್‌ಸ್ಟಾಗ್ರಾಮ್ ಇತಿಹಾಸದಲ್ಲಿ ಇದೇ ಮೊದಲು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ