Shivaraj Kumar : ಜೈಲರ್‌ನಲ್ಲಿ ತಮ್ಮ ಖಡಕ್‌ ಲುಕ್‌ನಿಂದಲೇ ಅಬ್ಬರಿಸಿದ ಶಿವಣ್ಣ ಅವರಿಗೆ ಸಾಲು ಸಾಲು ಸಿನಿಮಾದ ಆಫರ್‌ಗಳು ಸಿನಿರಂಗದಿಂದ ಒಲಿದು ಬರುತ್ತಿವೆ. ಇದೀಗ ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ ಅವರನ್ನು ಮಲಯಾಳಂ ಚಿತ್ರರಂಗ ತಮ್ಮ ಸಿನಿಮಾಗಳ ಭಾಗವಾಗಿಸಿಕೊಳ್ಳಲು ಕೈಬೀಸಿ ಕರೆಯುತ್ತಿದೆ. 


COMMERCIAL BREAK
SCROLL TO CONTINUE READING

ಹೌದು ಸದ್ಯ ಶಿವಣ್ಣ ಅವರು ಮಲಯಾಳಂ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಹಲವು ಭಾಷಿಗರ ಸಿನಿಮಾ ಜೈಲರ್‌ ಇದೀಗ ಯಶಸ್ಸಿನ ಉತ್ತುಂಗವನ್ನು ಏರಿದೆ. ನಟ ಶಿವರಾಜ್‌ಕುಮಾರ್‌ ಅವರ ಪಾತ್ರವನ್ನು ಪ್ರತಿಯೊಬ್ಬರು ಹಬ್ಬದಂತೆ ಎಂಜಾಯ್‌ ಮಾಡುತ್ತಿದ್ದಾರೆ. 


ತತ್ಸಮ ತದ್ಭವ ಚಿತ್ರದಿಂದ ʻದೂರಿ ಲಾಲಿʼ ಚಾಲೆಂಜ್, ಗೆದ್ದವರಿಗೆ ಸೂಪರ್‌ ಸರ್‌ಪ್ರೈಸ್‌


ಇದೀಗ ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಒಂದಿದೆ. ಮುಂಬರುವ ಮಲಯಾಳಂ ಚಿತ್ರದಲ್ಲಿ ಜೊತೆಯಾಗಿ ನಟಿಸುವಂತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶಿವಣ್ಣ ನಡುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. 


ಕೆಲವು ವದಂತಿಗಳ ಪ್ರಕಾರ ಶಿವರಾಜ್‌ಕುಮಾರ್‌  'ಎಲ್ 2: ಎಂಪುರಾನ್' ಚಿತ್ರದಲ್ಲಿ ಕಾಣಸಿಕೊಳ್ಳಬಹುದು ಎನ್ನಲಾಗುತ್ತಿದೆ. ಜೈಲರ್‌ನಂತೆಯೇ ಶಿವರಾಜಕುಮಾರ್, ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್ ಸೇರಿ ಒಂದು ಸೂಪರ್ ಹಿಟ್ ಚಿತ್ರ ನೀಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. 


ಇದನ್ನೂ ಓದಿ-Bollywood News : ವಿದೇಶಿ ಪೌರತ್ವ ಹೊಂದಿರುವ ಬಾಲಿವುಡ್‌ ನಟ ನಟಿಯರಿವರು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.