ನವದೆಹಲಿ: ಅಕ್ಷಯ ಕುಮಾರ್ ಹಾಗೂ ಕರೀನಾ ಕಪೂರ್ ಖಾನ್ ಅಭಿನಯದ ಬಹುನಿರೀಕ್ಷಿತ ಕಾಮೀಡಿ ಚಿತ್ರ 'ಗುಡ್ ನ್ಯೂಸ್'
ನ ಎರಡನೇ ಟ್ರೈಲರ್ ಕೆಲವೇ ಕ್ಷಣಗಳ ಹಿಂದೆ ತೆರೆಕಂಡಿದೆ. ಈ ಟ್ರೈಲರ್ ಬಿಡುಗಡೆಗೊಳಿಸಿರುವ ಚಿತ್ರ ನಿರ್ಮಾಪಕರು, ಈ ಚಿತ್ರ
ಬಿಡುಗಡೆಯ ಕುರಿತು ಅಭಿಮಾನಿಗಳಲ್ಲಿರುವ ಉತ್ಸುಕತೆಯನ್ನು ದುಪ್ಪಟ್ಟು ಮಾಡಿದ್ದಾರೆ. ಏಕೆಂದರೆ ಈ ಟ್ರೈಲರ್ ಮೊದಲಿನ
ಟ್ರೈಲರ್ ಗಿಂತಲೂ ಸ್ವಾರಸ್ಯಕರವಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಈ ಚಿತ್ರದ ಹಲವು ಹಾಡುಗಳು ಬಿಡುಗಡೆಗೊಂಡಿವೆ ಹಾಗೂ ಇದಕ್ಕೂ ಮೊದಲು ಬಿಡುಗಡೆಗೋಳಿಸಲಾಗಿರುವ
ಟ್ರೈಲರ್ ಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ಪಾರ್ಟಿಗಳಲ್ಲಿ ಈ ಚಿತ್ರದ ಹಾಡುಗಳು
ಮೊಳಗಲಾರಂಭಿಸಿವೆ. ಸದ್ಯ ಬಿಡುಗಡೆಗೊಂಡಿರುವ ಬಂಬಾಟ್ ಟ್ರೈಲರ್, ಜನರನ್ನು ಬಿದ್ದು, ಬಿದ್ದು ನಗುವಂತೆ ಮಾಡುತ್ತಿದೆ.


ಟ್ರೈಲರ್ ವಿಕ್ಷೀಸಿ..



ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಖಾನ್ ಅವರ ಈ ಚಿತ್ರದ ಟ್ರೈಲರ್ ಗಳಿಗೆ ಭಾರಿ ಮೆಚ್ಚುಗೆ ಸಿಗಲು ಕಿಯಾರಾ
ಅಡ್ವಾಣಿ ಹಾಗೂ ದಿಲ್ಜಿತ್ ದೊಸಾಂಝ ಅವರ ಕಾಮಿಕ್ ಕೆಮಿಸ್ಟ್ರಿ ಕೂಡ ಕಾರಣ ಎನ್ನಲಾಗಿದೆ. ಈ ಚಿತ್ರದ ಮೊದಲ ಟ್ರೈಲರ್
ನಲ್ಲಿ IBF ಸೆಂಟರ್ ನಿಂದಾದ ತಪ್ಪಿನ ಕಾರಣ ಎದುರಾಗುವ ಸಮಸ್ಯೆಗಳನ್ನು ಬಿಂಬಿಸಲಾಗಿದ್ದರೆ, ಈ ಟ್ರೈಲರ್ ನಲ್ಲಿ
ಸಮಸ್ಯೆಗಳಿಂದ ಉಂಟಾಗುವ ಕನ್ಫ್ಯೂಶನ್ ಗಳನ್ನು ಬಿಂಬಿಸಲಾಗಿದೆ. ಆದರೆ, ಮೊದಲನೇ ಟ್ರೈಲರ್ ಗಿಂತ ಎರಡನೇ ಟ್ರೈಲರ್
ನಿಜಾರ್ಥದಲ್ಲಿ ಭಾರಿ ಬಂಬಾಟ್ ಆಗಿ ಮೂಡಿ ಬಂದಿರುವುದು ಮಾತ್ರ ನಿಜ.



ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ ಹಾಗೂ ಝೀ ಸ್ಟುಡಿಯೊಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ ಈ ಚಿತ್ರದ
ಮೂಲಕ ರಾಜಾ ಮೆಹ್ತಾ ಓರ್ವ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೀರು ಜೋಹರ್, ಅರುಣಾ ಭಾಟಿಯಾ, ಕರಣ್
ಜೋಹರ್, ಅಪೂರ್ವಾ ಮೆಹ್ತಾ ಹಾಗೂ ಶಶಾಂಕ್ ಖೇತಾನ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಡಿಸೆಂಬರ್ 27ಕ್ಕೆ ಈ ಚಿತ್ರ
ಬಿಡುಗಡೆಯಾಗುತ್ತಿದೆ.