Raghuthatha : ತೆಲುಗಿನಲ್ಲಿ ಸಲಾರ್‌ ಮಲಯಾಳಂನಲ್ಲಿ ಟೈನಸ್‌ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಕೈಗೆತ್ತಿಕೊಂಡ ಹೊಂಬಾಳೆ ಸಿನಿಮಾ ಕನ್ನಡದಲ್ಲಿ ಕಾಂತಾರ-2, ರಿಚರ್ಡ್‌ ಆಂಟನಿ, ಯುವ, ಧೂಮಂ, ಬಘೀರ, ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣ ಆರಂಭವಾಗಿದ್ದು, ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಮುಂದೆ ಕನ್ನಡದ ಸ್ಟಾರ್‌ ನಟರಾದ ಶಿವರಾಜ್‌ ಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಕಾಂಬಿನೇಷನ್‌ನಲ್ಲಿಯೂ ಸಿನಿಮಾಗಳು ಮೂಡಿಬರಲಲಿವೆ. 


COMMERCIAL BREAK
SCROLL TO CONTINUE READING

ಭಾರತೀಯ ಚಿತ್ರರಂಗದಲ್ಲಿಯೆ ಬಹಳ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಸಂಸ್ಥೆ, ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಕೆಲ ದಿನಗಳ ಹಿಂದೆ ಒಂದು ಮಹಿಳಾ ಪ್ರಧಾನ ಸಿನಿಮಾವೊಂದನ್ನು ಕೈಗೆತ್ತಿಕೊಂಡಿತ್ತು. ತಮಿಳಿನ ʼರಘುತಾತʼ ಎನ್ನುವ ಸಿನಿಮಾವನ್ನು ತನ್ನ ನಿರ್ದೇಶನದಡಿಯಲ್ಲಿ ಶೂಟಿಂಗ್‌ನ್ನು ಆರಂಭಮಾಡಿತ್ತು.  


ಇದನ್ನೂ ಓದಿ-ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?


ಈ ʼರಘುತಾತʼ ಸಿನಿಮಾದಲ್ಲಿ ಸೌತ್‌ ಹಿರೋಯಿನ್‌ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ನಾಯಕಿಯಾಗಿ ನಟಿಸಿದ್ದಾರೆ. ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್‌ ಕೊನೆಯದಿನ ಸೆಟ್‌ನಲ್ಲಿ ಕೇಕ್‌ ಕತ್ತರಿಸಿ ಚಿತ್ರತಂಡ ಸಂಭ್ರಮ ಆಚರಿಸಿದೆ. ಅದೇ ಪೋಟೋಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದ್ದು, ಸಿನಿಮಾ ಯಾವಾಗ ತೆರೆ ಮೇಲೆ ಬರಲಿದೆ ಎನ್ನುವುದೇ ಎಲ್ಲರ ಕುತೂಹಲ. 


Shubman Gill - Sara Ali Khan: ಸಾರಾ ಅಲಿ ಖಾನ್​ ​- ಶುಭ್​ಮನ್ ಗಿಲ್​ ಬ್ರೇಕಪ್‌? ಸಂಬಂಧ ಮುರಿದುಬಿದ್ದಿರುವುದಕ್ಕೆ ಇಲ್ಲಿದೆ ಸಾಕ್ಷಿ!!