ಬೆಂಗಳೂರು: ಮೈಸೂರಿನಲ್ಲಿ ಫಿಲಂ ಸಿಟಿ ಮತ್ತು ರಾಮನಗರದಲ್ಲಿ ಫಿಲಂ ಯುನಿವರ್ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ನಗರದ ಅಂಬೇಡ್ಕರ್ ಭವನದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಿತ್ರೋದ್ಯಮ ಏರ್ಪಡಿಸಿದ್ದ 'ಅಂಬಿ ನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಕನ್ನಡ ಚಿತ್ರರಂಗದ ದಿಗ್ಗಜರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ನೆನಪಿನಾರ್ಥವಾಗಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲಾಗುವುದು ಎಂದು ಹೇಳಿದರು.


ಈ ವೇಳೆ ಅಂಬಿಯನ್ನು ನೆನೆದ ಸಿದ್ದರಾಮಯ್ಯ, ‘ಅಂಬರೀಶ್ ಅವರು ನನಗೆ ಬಹಳ ದೀರ್ಘ ಕಾಲದಿಂದ ಗೊತ್ತು. 1973ರಲ್ಲಿ ಒಂದು ಹೊಟೇಲ್​ನಲ್ಲಿ ನನ್ನ ಗೆಳೆಯಿಂದ ಅಂಬಿ ಭೇಟಿ ಆಗಿತ್ತು. ಅಂಬಿ ಮಾತು ಕೊಂಚ ಒರಟು. ಆದರೆ ಅವರೊಂದಿಗೆ ಸಮಯ ಕಳೆದವರಿಗೆ ಅವರ ಹೃದಯ ಎಷ್ಟು ವಿಶಾಲವಾಗಿತ್ತು ಎಂಬುದು ಗೊತ್ತಿದೆ. ಅವರು ಸ್ನೇಹ ಜೀವಿ. ಅದು ಅಂಬಿಗಿದ್ದ ವಿಶೇಷ ಗುಣ’ ಎಂದು ಕೊಂಡಾಡಿದರು.


[[{"fid":"172795","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇನ್ನು ಅಂಬಿ ಸಿನಿಮಾ ಕ್ಷೇತ್ರಕ್ಕೆ ಬಯಸಿ ಬಂದಿರಲಿಲ್ಲ. ರಾಜೇಂದ್ರ ಸಿಂಗ್ ಬಾಬು ಅಣ್ಣರಿಂದ ಸಿನಿಮಾ ಪರಿಚಯವಾಗಿತ್ತು. ಸಿನಿಮಾದಲ್ಲಿ ಗೆದ್ದಷ್ಟೇ, ರಾಜಕಾರಣದಲ್ಲೂ ಯಶಸ್ಸು ಕಂಡಿದ್ದರು. ನಾನು, ದೇವೇಗೌಡರ ಒತ್ತಾಯದಿಂದ ಅಂಬಿಯನ್ನು ರಾಮನಗರ ಬೈ ಎಲೆಕ್ಷನ್​​ಗೆ ಕರೆತಂದಿದ್ದೆವು. ಎರಡೂ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟಿದ್ದರು. ಅವರು ಯಾರನ್ನೂ ದ್ವೇಷಿಸಿರಲಿಲ್ಲ. ಅದೆಷ್ಟೋ ಚಲನಚಿತ್ರದ ಸಮಸ್ಯೆಗಳನ್ನು ಬಗೆ ಹರಿಸಿದ್ದರು. ಅಂಬಿ ನನ್ನನ್ನು ಬಾಸ್ ಅಂತಾ ಕರೆಯುತ್ತಿದ್ದರು. ಕಲಾವಿದರ ಸಂಘದ ಉದ್ಘಾಟನೆಗೆ ನನ್ನನ್ನು ಕರೆಸಿದ್ದರು. ಅಂಬಿ ಬದುಕು ಸಾರ್ಥಕವಾಗಿದೆ. ಮೈಸೂರಿನಲ್ಲಿ ಫಿಲಂ ಸಿಟಿಗೆ ಅಂಬಿ ಹೆಸರನ್ನೇ ಇಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.


ಅಂಬರೀಶ್ ಪುತ್ರ ಅಭಿಷೇಕ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ವಿ ಸೋಮಣ್ಣ ಸೇರಿದಂತೆ ಬೆಂಗಳೂರು ನಗರ ಶಾಸಕರು ಭಾಗಿಯಾಗಿದ್ದಾರೆ. ಶಿವರಾಜ್ ಕುಮಾರ್, ಪುನೀತ್  ರಾಜ್​ಕುಮಾರ್​, ದರ್ಶನ್ , ಸುದೀಪ್​, ಯಶ್​, ಹಿರಿಯ ನಟ ದೊಡ್ಡಣ್ಣ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್, ನಿರ್ಮಲಾನಂದ ಸ್ವಾಮೀಜಿ, ವಿಜಯಲಕ್ಷ್ಮೀ ಸಿಂಗ್, ಶ್ರೀಮುರುಳಿ, ಸುಂದರ್ ರಾಜ್, ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.