ಬೆಂಗಳೂರು: ಬೆಂಗಳೂರು ಮತ್ತು ಕೊಪ್ಪಳ ಜನತೆಗೆ ಒಂದು ಗುಡ್ ನ್ಯೂಸ್ ಇದೆ. ಏನು ಅಂತಿರಾ? ಜೀ ವಾಹಿನಿಯಲ್ಲಿ ಪ್ರಸಾರವಾಗುವ ಮರಿ ಕೋಗಿಲೆಗಳ 'ಸರಿಗಮಪ ಲಿಟಲ್ ಚಾಂಪ್ಸ್' ಹಾಗೂ ಎಲ್ಲರ ಹೊಟ್ಟೆ ಹುಣ್ಣಾಗಿಸುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕಾಗಿ ನಡೆಸುತ್ತಿರುವ ಮಹಾ ಆಡಿಶನ್ ನಿಮ್ಮ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ಪ್ರಾರಂಭವಾಗಿದೆ. 


COMMERCIAL BREAK
SCROLL TO CONTINUE READING

ಜೀ ಕನ್ನಡ ವಾಹಿನಿಯಲ್ಲಿ ಬರಲು ಸಿದ್ದವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14 ಹಾಗೂ ಕಾಮಿಡಿ ಕಿಲಾಡಿಗಳು ಸೀಸನ್ 2ರ ಸ್ಪರ್ಧಿಗಳಿಗಾಗಿ ಆಡಿಶನ್ ನಡೆಸಲಾಗುತ್ತಿದ್ದು, ಆಸಕ್ತರು ಈಗಲೇ ಹೋಗಿ ಮಹಾ ಆಡಿಶನ್ ನಲ್ಲಿ ಪಾಲ್ಗೊಳ್ಳಿ.


ಸ್ಥಳ:
ಬೆಂಗಳೂರು- ಅಬ್ಬಯ್ಯ ನಾಯ್ಡು ಸ್ಟುಡಿಯೋ, ಚಿಕ್ಕಲ್ಲಸಂದ್ರ, ಬೆಂಗಳೂರು.
ಕೊಪ್ಪಳ- ಮಾಸ್ತಿ ಪಬ್ಲಿಕ್ ಸ್ಕೂಲ್, ಶ್ರೀ ಗವೀಮಠ ಕೆರೆ ಹತ್ತಿರ, ಕೊಪ್ಪಳ.