ಈ ಪುಟ್ಟ ಹುಡುಗಿ ಯಾರೆಂದು ಊಹಿಸಬಲ್ಲಿರಾ?! ಸ್ಟಾರ್ ಹೀರೋಯಿನ್ ಕಮ್ ಸೂಪರ್ಬ್ ಸಿಂಗರ್.. ಈಗ ಇಡೀ ಚಿತ್ರರಂಗವೇ ಈಕೆಗೆ ಸೆಲ್ಯೂಟ್ ಹೊಡೆಯುತ್ತೆ!!
Guess the actress: ಮೇಲಿನ ಫೋಟೋದಲ್ಲಿರುವ ಮುದ್ದಾದ ಹುಡುಗಿ ಯಾರು ಗೊತ್ತೆ? ಈಗ ಚೆಲುವೆ ಇಂದು ದೇಶದ ಹೆಮ್ಮೆಯ ನಟಿ. ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ನಂತರ ನಟನೆ ತೊರೆದರು.
nithya menen: ಪತ್ರಕರ್ತೆಯಾಗುವ ಕನಸು ಹೊಂದಿದ್ದ ಈ ಬೆಡಗಿ ಆಕಸ್ಮಿಕವಾಗಿ ನಟನೆಗೆ ಬಂದು ಅಲ್ಲೂ ಅಳಿಸಲಾಗದ ಹೆಸರು ಮಾಡಿದ ನಟಿ ಈಕೆ... ನಾಯಕಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟು.. ಇತರ ನಟಿಯರಿಗಿಂತ ಭಿನ್ನವಾಗಿ ಸಿನಿಮಾ ಮಾಡುವ ಮೂಲಕ ಕ್ರೇಜಿ ಹೀರೋಯಿನ್ ಅಂತಲೇ ವಿಶೇಷವಾದ ಗುರುತನ್ನು ಮಾಡಿಕೊಂಡಿದ್ದಾರೆ.
ಕೆರಿಯರ್ ನಲ್ಲಿ ಹೆಚ್ಚಾಗಿ ಹೋಮ್ಲಿ ಪಾತ್ರಗಳಲ್ಲಿ ಮಿಂಚಿದ್ದ ಈ ಮಲಯಾಳಂ ಕ್ಯೂಟಿಗೆ ತೆಲುಗು ಹಾಗೂ ಕನ್ನಡದಲ್ಲೂ ಸೂಪರ್ ಕ್ರೇಜ್ ಇದೆ. ಕರ್ಲಿ ಹೇರ್‌ನಿಂದ ನ್ಯಾಚುರಲ್‌ಆಗಿ ಕಾಣೋ ಈ ಚೆಲುವೆ ರಾಷ್ಟ್ರೀಯ ಶ್ರೇಷ್ಠ ನಟಿ ಎನಿಸಿಕೊಂಡಿದ್ದಾರೆ. ಅನೇಕರಿಗೆ ಈಗಾಗಲೇ ಅರ್ಥವಾಗಿದೆ.. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ? ಹೌದು. ಈ ಮೋಹನಾಂಗಿ ಬೇರೆ ಯಾರೂ ಅಲ್ಲ ನಟಿ ನಿತ್ಯಾ ಮೆನನ್.
ಇದನ್ನೂ ಓದಿ-ಈ ರೀತಿ ಅರಿಶಿನವನ್ನು ತಲೆಗೆ ಹಚ್ಚಿದ್ರೆ ಕೇವಲ 1 ವಾರದಲ್ಲಿ ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತವೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ (ಆಗಸ್ಟ್ 16) 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ನಿತ್ಯಾ ಮೆನನ್ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇವರೊಂದಿಗೆ ಮತ್ತೋರ್ವ ನಟಿ ಮಾನಸಿ ಪಾರೇಖ್ ಕೂಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧನುಷ್ ಅಭಿನಯದ ತಿರುಚಿತಾಂಬಲಂ (ತೆಲುಗಿನಲ್ಲಿ ತಿರು) ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಿತ್ಯಾ ಮೆನನ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂಲಕ ನಿತ್ಯಾಗೆ ಹಲವು ಸಿನಿ ಗಣ್ಯರು, ಅಭಿಮಾನಿಗಳು, ನೆಟಿಜನ್‌ಗಳು ಶುಭಾಶಯ ಕೋರುತ್ತಿದ್ದಾರೆ.
ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನದ ಚಿತ್ರದ ಮೂಲಕ ನಿತ್ಯಾ ಮೆನನ್ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅದಕ್ಕೂ ಮುನ್ನ ಮಲಯಾಳಂನಲ್ಲಿ ಬಾಲ ಕಲಾವಿದೆಯಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇವರು ತೆಲುಗು, ಮಲಯಾಳಿ, ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್, ಕಿಚ್ಚ ಸುದೀಪ್, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಮತ್ತು ನಾನಿ ಅವರಂತಹ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸೌತ್ ಸಿನಿಮಾಗಳ ಜೊತೆಗೆ ಮಿಷನ್ ಮಂಗಲ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಒಟ್ಟಿನಲ್ಲಿ ನಿತ್ಯಾ ಬಹುಮುಖ ಪ್ರತಿಭೆ. ಅವರು ನಟಿ ಮಾತ್ರವಲ್ಲದೆ ಅದ್ಭುತ ಗಾಯಕಿ ಕೂಡ. ಇಷ್ಟೆಲ್ಲಾ ಟ್ಯಾಲೆಂಟ್ ಇರುವ ನಿತ್ಯಾಗೆ ರಾಷ್ಟ್ರಪ್ರಶಸ್ತಿ ಸಿಕಿದ್ದು ಆಶ್ಚರ್ಯವಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು.
ಇದನ್ನೂ ಓದಿ-ವಿಚ್ಛೇದನಕ್ಕೂ ಮುನ್ನ ಗರ್ಭಿಣಿಯಾಗಿದ್ರಾ ನಾಗಚೈತನ್ಯ ಮಾಜಿ ಪತ್ನಿ ಸಮಂತಾ?! ಗರ್ಭಪಾತಕ್ಕೆ ಶೋಭಿತಾ ಕಾರಣ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.