ನವದೆಹಲಿ:  ಜೋಯಾ ಅಖ್ತರ್ ಅವರ ಗಲ್ಲಿ ಬಾಯ್ 92 ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿದೆ. ಈಗ ಈ ವಿಷಯವನ್ನು ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿರುವ ಗಲ್ಲಿ ಬಾಯ್ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದದ್ದಲದೆ ಚಿತ್ರ ವಿಮರ್ಶಕರ ಮೆಚ್ಚುಗೆ ಪಾತ್ರವಾಗಿತ್ತು. ಈ ಚಿತ್ರದಲ್ಲಿ ಕಲ್ಹಿ ಕೋಚ್ಲಿನ್, ಸಿದ್ಧಾಂತ್ ಚತುರ್ವೇದಿ ಮತ್ತು ವಿಜಯ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


ಈ ಚಿತ್ರದಲ್ಲಿ ಮುವಾರ್ಡ್ ಎನ್ನುವ ರಾಪರ್ ಭಾರತದ ಸಂಗೀತದಲ್ಲಿ ಖ್ಯಾತಿಗಳಿಸುವ ಕನಸನ್ನು ಕಾಣುವ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ಧರವಿಯ ಕೊಳೆಗೇರಿಯ ಗಲ್ಲಿ ಬಾಯ್ ಮುರಾದ್ ರಾಪ್ ಮ್ಯೂಸಿಕ್ ನತ್ತ ಸಾಗಿದ ಯಶಸ್ವಿ ಪಯಣವನ್ನು ಮನೋಜ್ಞವಾಗಿ ಚಿತ್ರಿಸಿದೆ.



ಈ ವರ್ಷ ಆಸ್ಕರ್ ಪಟ್ಟಿಗೆ ಕಳಿಸಲು ಭಾರತದಿಂದ 27 ಸಿನಿಮಾಗಳಿದ್ದವು,ಆದರೆ ಕೊನೆಯದಾಗಿ ಗಲ್ಲಿಬಾಯ್ ಚಿತ್ರವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಎಫ್ಎಫ್ಐ ಪ್ರಧಾನ ಕಾರ್ಯದರ್ಶಿ ಸುಪ್ರಾನ್ ಸೇನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಈ ವರ್ಷ ಆಯ್ಕೆ ಸಮಿತಿ ನಟ-ಚಲನಚಿತ್ರ ನಿರ್ಮಾಪಕ ಅಪರ್ಣಾ ಸೇನ್ ನೇತೃತ್ವವಹಿಸಿದ್ದರು.


ಈ ಚಿತ್ರವನ್ನು ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ನಿರ್ಮಿಸಿದ್ದಾರೆ. ಈ ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿತು. ಈ ಚಿತ್ರವು ದಕ್ಷಿಣ ಕೊರಿಯಾದಲ್ಲಿ ನಡೆದ 23 ನೇ ಬುಚಿಯಾನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್ (ಬಿಫಾನ್) ನಲ್ಲಿ ಏಷ್ಯನ್ ಸಿನೆಮಾ (ನೆಟ್ಪಾಕ್) ಪ್ರಶಸ್ತಿಯನ್ನು ಪಡೆದುಕೊಂಡಿದೆ.