Hampi Utsav 2024: ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್!
Hampi Utsav 2024: ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಇಂತಹದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ!
ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದೆ. ಇದೇ ತಿಂಗಳ ಫೆಬ್ರವರಿ 4ರಂದು ಮೂರು ದಿನಗಳ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನಾನಾ ಪ್ರಕಾರಗಳ ಕಲಾ ಪ್ರದರ್ಶನ, ಥರ ಥರದ ಕಾರ್ಯಕ್ರಮಗಳು ಈ ಉತ್ಸವದ ಪ್ರಧಾನ ಆಕರ್ಷಣೆ. ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಇಂತಹದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ವಿಶೇಷವೆಂದರೆ ಈ ಹಾಡೇ ಅವರನ್ನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುವ ನಿಮಿಕಾ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: Poonam Pandey: ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆಯ ಟಾಪ್ 5 ವಿವಾದಗಳು..!
ಹಂಪಿ ಎಂದರೇನೇ ಅದೇನೋ ಆಕರ್ಷಣೆ. ನಿಮಿಕಾ ರತ್ನಾಕರ್ ಪಾಲಿಗೂ ಅಂತಹದೊಂದು ಸೆಳೆತವಿದೆಯಂತೆ. ಆದರೆ ಈವರೆಗೂ ಅಲ್ಲಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿರಲಿಲ್ಲ. ಕೆಲ ಹಾಡುಗಳ ಮೂಲಕವಷ್ಟೇ ಹಂಪಿಯನ್ನು ಕಣ್ತುಂಬಿಕೊಂಡಿದ್ದ ಅವರು, ತಮ್ಮ ಪಾಲಿಗೆ ಆ ಪರಿಸರದಲ್ಲಿ ಬೆರೆಯುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂಬುದು ನಿಮಿಕಾ ಮನದ ಮಾತು.
ಈ ಹಿಂದೆ ನಿಮಿಕಾ ದಸರಾ ಉತ್ಸವದಲ್ಲಿಯೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಪೋಷಕರು ಹಾಜರಿದ್ದು ಖುಷಿಗೊಂಡಿದ್ದರು. ಈ ಬಾರಿಯೂ ಪೋಷಕರೊಂದಿಗೆ ಹಂಪಿ ಉತ್ಸವದಲ್ಲಿ ಭಾಗಿಯಾಗೋ ಇಂಗಿತ ನಿಮಿಕಾರದ್ದು.
ಇದನ್ನೂ ಓದಿ: ಸಹಾಯಕನಿಗೆ ಚಪ್ಪಲಿಯಿಂದ ಹೊಡೆದಿದ್ದಕ್ಕಾಗಿ ಕ್ಷಮೆಯಾಚಿಸಿದ ಖ್ಯಾತ ಗಾಯಕ..!
ಅಷ್ಟಕ್ಕೂ ಶೇಕ್ ಇಟ್ ಪುಷ್ಪವತಿ ಎಂಬ ಹಾಡು ನಿಮಿಕಾಗೆ ಒಂದಿಡೀ ಕರ್ನಾಟಕಕ್ಕೆ ಪ್ರದಕ್ಷಿಣೆ ಹಾಕುವ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ಅವರು ರಾಜ್ಯದ ನಾನಾ ಪ್ರದೇಶಗಳಲ್ಲಿ ಈ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೀಗ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಪಾಲಿಗೆ ವಿಶೇಷ ಘಳಿಗೆ. ಯಾಕೆಂದರೆ ಉತ್ತರ ಕರ್ನಾಟಕ ಮಂದಿಯ ಪ್ರೀತಿ, ಅಭಿಮಾನ ಪಡೆದುಕೊಂಡಿರುವ ಅವರಿಗೆ ಅಭಿಮಾನಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಸುಯೋಗ ಕೂಡಿ ಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.