ಬೆಂಗಳೂರು : ಜೀ ಸ್ಟುಡಿಯೋಸ್‌ನ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಹರ ಹರ ಮಹಾದೇವ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಕಥೆಯನ್ನ ಬಿಗ್‌ಸ್ಕ್ರೀನ್‌ ಮೇಲೆ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ಕಾಯ್ದು ಕುಳಿತಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಪೋಸ್ಟರ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ಸದ್ಯ ಟ್ರೇಲರ್ ಬಿಡುಗಡೆಯಾಗಿದ್ದು, ಬಾಜಿ ಪ್ರಭು ದೇಶಪಾಂಡೆಯವರ ಅದ್ಭುತ ಜೀವನ ಪ್ರಯಾಣವನ್ನು ವೀಕ್ಷಿಸಲು ಜನರು ಉತ್ಸುಕರಾಗಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಸದ್ಯ ಟ್ರೈಲರ್‌ ಔಟ್‌ ಆಗಿದ್ದು, ಇಂಟರ್‌ನೆಟ್‌ನಲ್ಲಿ ಘರ್ಜಿಸುತ್ತಿದೆ. 


ಇದನ್ನೂ ಓದಿ: ಬದುಕುಳಿಯಲಿಲ್ಲ ಆಸ್ಕರ್‌ ಕನಸು ಕಂಡಿದ್ದ ಆ ಬಾಲನಟ.! ವಿಧಿ ನೀನೆಷ್ಟು ಕ್ರೂರಿ?


 


ಈ ಚಿತ್ರವು ಭಾರತೀಯ ಇತಿಹಾಸದಲ್ಲಿ ಬಾಜಿಪ್ರಭು ನೇತೃತ್ವದ ನಡೆದ ಘೋರ ಯುದ್ದ ನೈಜ ಕತೆಯಾಗಿದೆ. ಕೇವಲ 300 ಸೈನಿಕರು 12000 ಶತ್ರು ಸೈನ್ಯವನ್ನು ಹೊಡೆದುರುಳಿಸಿದ ಅಪ್ರತಿಮ ವೀರರ ಜೀವನ ಕಥೆ. ZEE ಸ್ಟುಡಿಯೋಸ್ ನಿರ್ಮಾಣದ ಈ ಹರ ಹರ ಮಹಾದೇವ ಸಿನಿಮಾವನ್ನು ಅಭಿಜಿತ್ ದೇಶಪಾಂಡೆ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಬೋಧ್ ಭಾವೆ, ಶರದ್ ಕೇಳ್ಕರ್, ಅಮೃತಾ ಖಾನ್ವಿಲ್ಕರ್ ಮತ್ತು ಸಾಯಿಲಿ ಸಂಜೀವ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರವು 25 ಅಕ್ಟೋಬರ್ 2022 ರಂದು ತೆರೆಗೆ ಬರಲು ಸಿದ್ಧವಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.