ಮುಂಬೈ: ಬಾಲಿವುಡ್‌ನ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ನಲ್ಲಿ ನಟಿಸುತ್ತಿದ್ದ ಜೆನ್ನಿಫರ್, ಇದೀಗ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ದ  ಲೈಂಗಿಕ ಕಿರುಕುಳ  ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ದೀರ್ಘಾವಧಿಯ ಸಬ್ ಟಿವಿ ಶೋನಲ್ಲಿ ರೋಷನ್ ಸೋಧಿ ಪಾತ್ರವನ್ನು ನಿರ್ವಹಿಸುತ್ತಿರುವ ಬನ್ಸಿವಾಲ್, ಕೆಲವು ದಿನಗಳ ಹಿಂದೆ ಲೈಂಗಿಕ ಕಿರುಕುಳ ಹಿನ್ನಲೆ ಮುಂಬೈ ಪೊಲೀಸರಿಗೆ ಔಪಚಾರಿಕ ಬರೆದಿದ್ದರು. ಪೊವೈ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಅವರು ಮೇ 8 ರಂದು ಬನ್ಸಿವಾಲ್ ಅವರ ಅರ್ಜಿಯನ್ನು ಸ್ವೀಕರಿಸಿದ್ದಾರೆ.


ಇದನ್ನೂ ಓದಿ: Sonam Bajwa: ಮೈ ಮೇಲೆ ಬಟ್ಟೆ ಇದೆ, ಒಳ ಉಡುಪು ಇಲ್ಲ ಎಂದ ನೆಟ್ಟಿಗರು .. ಇಲ್ಲಿವೆ ನೋಡಿ ಈ ನಟಿಯ ಹಾಟ್‌ ಫೋಟೋಸ್..


ಕಳೆದ ಕೆಲವು ವರ್ಷಗಳಿಂದ ಅಸಿತ್ ಕುಮಾರ್ ಮೋದಿ ಅನೇಕ ಸಂದರ್ಭಗಳಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬನ್ಸಿವಾಲ್ ಹೇಳಿದ್ದಾರೆ. ಇದು ಮೊದಲ ಬಾರಿಯಲ್ಲ. ಹೀಗೆಯೇ  2019 ರಲ್ಲಿ, ಸಿಂಗಾಪುರದಲ್ಲಿ, ಅವರು 'ನನ್ನ ಕೋಣೆಗೆ ಬನ್ನಿ, ಒಟ್ಟಿಗೆ  ವಿಸ್ಕಿ' ಕುಡಿಯೋಣ ಅದರ ಜೊತೆಯಲ್ಲಿ ಬೇಡದ ವಿಷಯಗಳ ಬಗ್ಗೆ ಪ್ರೇರೆಪಿಸುತ್ತಿದ್ದರು. ಎಂದು ನಟಿ ಆರೋಪಿಸಿದ್ದಾರೆ.


ನಾನು ಇಷ್ಟು ದಿವಸ ಸರಿ ಹೋಗಬಹುದೆಂದು ಸುಮ್ಮನಿದ್ದೆ ಆದರೆ ಈ ವಿಷಯಗಳನ್ನುನನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೆ.  ಅವರು ಆಗಾಗ ನನ್ನ ನೆರವಿಗೆ ನಿಲ್ಲುತ್ತಿದ್ದರು. ಅವರಿಗೂ ಬೇರೆ ಕೆಲಸಗಳು ಇರುತ್ತವೆ ಪ್ರತಿ ಬಾರಿ ರಕ್ಷಿಸಲು ಆಗುವುದಿಲ್ಲ. ಆದ್ದರಿಂದ ನನ್ನ ರಕ್ಷಣೆ ನಾನೇ ಮಾಡಿಕೊಳ್ಳಬೇಕು. ಹೀಗಾಗಿ ನಾನು ಪೋಲಿಸರ ಮೊರೆ ಹೋಗಿದ್ದೆನೆಂದು ನಟಿ ಹೇಳಿದ್ದಾರೆ. 


ಇದನ್ನೂ ಓದಿ: Vishnuvardhan With Rajinikanth: ವಿಷ್ಣುದಾದ ಜೊತೆ ತಲೈವಾ ರಜನಿಕಾಂತ್ ನಟನೆ ಸಿನಿಮಾ ಯಾವುದು ಗೊತ್ತಾ?


ನಟಿ ಆರೋಪಕ್ಕೆ ಇದೀಗ  ಪ್ರತಿಕ್ರಿಯಿಸಿರುವ ನಿರ್ಮಾಪಕ, “ನಾವು ಮಾರ್ಚ್ 7 ರಂದು ಹೋಳಿಯಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆ ವೇಳೆ  ಏನೋ ಸಂಭವಿಸಿತು ಮತ್ತು ಅವಳು ಎಲ್ಲರೊಡನೆ  ಅನುಚಿತವಾಗಿ ವರ್ತಿಸಿದಳು  ಆಕೆ ಅನುಚಿತವಾಗಿ ವರ್ತಿಸಿದ್ದರಿಂದ ನಿರ್ದೇಶಕರು ಮತ್ತು ನಿರ್ಮಾಣ ತಂಡವು ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಹೀಗಾಗಿ ಅವಳನ್ನು ಧಾರವಾಹಿ ಇಂದ ಕೈ ಬಿಟ್ಟಿದ್ದೇವು. ಹೀಗಾಗಿ ಆಕೆ ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ ಎಂದಿದ್ದಾರೆ. ತನಗೆ ಮತ್ತು ಶೋಗೆ ಮಾನಹಾನಿ ಮಾಡಲು ಯತ್ನಿಸಿದ ನಟನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೋದಿ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ