ಮುಂಬೈ: ಭಾರತದ ಕ್ರಿಕೆಟ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಸರ್ಬಿಯಾದ ನಟಿ-ನರ್ತಕಿ ನಟಾಸಾ ಸ್ಟಾಂಕೋವಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. 


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಬುಧವಾರದಿಂದ, ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಸಾಕಷ್ಟು ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಆದರೆ  ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ಕಾಮೆಂಟ್ ಮಾತ್ರ ಈಗ ಎಲ್ಲರ ಗಮನ ಸೆಳೆದಿದೆ. "ನಿಮ್ಮ ನಿಶ್ಚಿತಾರ್ಥಕ್ಕೆ ಶುಭಾಶಯಗಳು. ನಿಮ್ಮ ಸಂಬಂಧವು ಯಾವಾಗಲೂ ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ. ನಿಮ್ಮ ನಿಶ್ಚಿತಾರ್ಥದಂದು, ನಿಮ್ಮ ಅದ್ಭುತ ಜೀವನ ಮತ್ತು ಶಾಶ್ವತವಾದ ಪ್ರೀತಿಯನ್ನು ಹೊಂದಲಿ ಎಂದು" ಎಂದು ಹಾರ್ದಿಕ್ ಅವರ ಪೋಸ್ಟ್‌ನಲ್ಲಿ ಊರ್ವಶಿ ಪ್ರತಿಕ್ರಿಯಿಸಿದ್ದಾರೆ.



ಈ ಹಿಂದೆ ಊರ್ವಶಿ ಮತ್ತು ಹಾರ್ದಿಕ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಅವರ ಪ್ರತಿಕ್ರಿಯೆ ಸಾಕಷ್ಟು ಗಮನ ಸೆಳೆದಿದೆ. ಹಾರ್ದಿಕ್  ಪಾಂಡ್ಯ ಅವರು ನಟಾಸಾಜೊತೆಗಿನ ತಮ್ಮ ನಿಶ್ಚಿತಾರ್ಥವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಘೋಷಿಸಿಕೊಂಡರು.



"ಮೈ ತೇರಾ, ತು ಮೇರಿ ಜಾನೆ, ಸಾರಾ ಹಿಂದೂಸ್ತಾನ್ (ನಾನು ನಿಮ್ಮವನು, ನೀನು ನನ್ನವಳು ಎನ್ನುವುದು ಇಡೀ ರಾಷ್ಟ್ರಕ್ಕೆ ತಿಳಿದಿದೆ) ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಬರೆದಿದ್ದಾರೆ, ಅಲ್ಲಿ ದಂಪತಿಗಳು ತಮ್ಮ ನಿಶ್ಚಿತಾರ್ಥವನ್ನು ಆಚರಿಸುತ್ತಿದ್ದಾರೆ. ನಟಾಸಾ ಕೂಡ ಒಂದೆರಡು ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು, ಆ ಮೂಲಕ  ಹಾರ್ದಿಕ್ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ