Haripriya: ಫಸ್ಟ್ ಕಿಸ್ ಬಗ್ಗೆ ಹೇಳುತ್ತಾ ನಾಚಿ ನೀರಾದ ಹರಿಪ್ರಿಯಾ! ತಮ್ಮ 12 ಸೀಕ್ರೆಟ್ ನಿಮ್ಮ ಮುಂದಿಡಲಿದ್ದಾರೆ ʻಸಿಂಹʼಪ್ರಿಯೆ!

Haripriya New Youtube Channel : ಚಂದನವನದ ಕ್ಯೂಟ್ ಜೋಡಿಗಳಲ್ಲಿ ಸಿಂಹಪ್ರಿಯ ಜೋಡಿಯೂ ಒಂದು. ಫ್ಯಾನ್ಸ್ಗೆ ಸರ್‌ಪ್ರೈಸ್ ಕೊಡೋದ್ರಲ್ಲಿ ಈ ಲವ್ ಬರ್ಡ್ಸ್ ಎತ್ತಿದ ಕೈ. ಕೆಲದಿನಗಳ ಹಿಂದೆ ಹರಿಪ್ರಿಯಾ ಹೊಸ ಯೂಟೂಬ್ ಚಾನೆಲ್ ತೆಗೆಯುವ ಬಗ್ಗೆ ಹೇಳಿದ್ದರು.
Haripriya New Youtube Channel : ಸ್ಯಾಂಡಲ್‌ವುಡ್‌ನ ಸಿಂಹಪ್ರಿಯ ಜೋಡಿ ಕೆಲ ತಿಂಗಳ ಹಿಂದೆ ಎಲ್ಲರಿಗೂ ಬಿಗ್ ಸರ್‌ಪ್ರೈಸ್ ಕೊಟ್ಟು ಮದುವೆಯಾಗಿದ್ದರು. ಇದೀಗ ಮತ್ತೊಮ್ಮೆ ಎಲ್ಲರಲ್ಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದ್ದಾರೆ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟಿ ಹರಿಪ್ರಿಯಾ 12 ಸೀಕ್ರೆಟ್‌ಗಳನ್ನು ಹೇಳಲು ನಿಮ್ಮ ಮುಂದೆ ಬರಲಿದ್ದಾರೆ.
ಇತ್ತೀಚಿನ ದಿನಗಳಲ್ಲಿಅನೇಕ ನಟ - ನಟಿಯರು ತಮ್ಮ ಯೂಟೂಬ್ ಚಾನೆಲ್ ಹೊಂದಿದ್ದಾರೆ. ಇದೀಗ ಈ ಹೊಸ ಪ್ರಯತ್ನಕ್ಕೆ ನಟಿ ಹರಿಪ್ರಿಯಾ ಕೂಡ ಕೈ ಹಾಕಿದ್ದಾರೆ. ಹರಿಪ್ರಿಯಾ ಯೂಟೂಬ್ ಚಾನೆಲ್ ಶುರು ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುವ ಪ್ರಯತ್ನ ಅವರದ್ದು. ಸಿನಿಮಾ ಕೆಲಸದ ನಡುವೆ ಈ ಹೊಸ ಯೋಜನೆ ರೂಪಿಸಿದ್ದಾರೆ. ಇತ್ತೀಚಿಗಷ್ಟೇ ವಿಡಿಯೋ ಪ್ರೋಮೋ ಕೂಡ ರಿಲೀಸ್ ಮಾಡಿ, ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Salman Khan: ಸಲ್ಲು ಮನಸ್ಸಲ್ಲಿ ಮತ್ತೆ ಚಿಗುರೊಡೆದ ಪ್ರೀತಿ! ಶೀಘ್ರದಲ್ಲೇ ಮದುವೆಯಾಗ್ತಾರಾ ಸಲ್ಮಾನ್ ಖಾನ್?
ಫ್ಯಾನ್ಸ್ ಯಾವಾಗಲೂ ಯೂಟೂಬ್ ಚಾನಲ್ ಯಾವಾಗ ಶುರು ಮಾಡ್ತೀರಾ ಎಂದು ಕೇಳುತ್ತಿದ್ದರು. ಇದೀಗ ಆ ಸಮಯ ಬಂದಿದೆ, ಫ್ಯಾನ್ಸ್‌ಗಾಗಿ ಯೂಟೂಬ್ ಚಾನೆಲ್ ಶುರು ಮಾಡಿದ್ದಾರೆ ನಟಿ ಹರಿಪ್ರಿಯಾ. ತಮ್ಮ ಯೂಟೂಬ್ ಚಾನೆಲ್‌ನಲ್ಲಿ ಉತ್ತಮ ಮಾಹಿತಿ ಜೊತೆಗೆ ಜನರಿಗೆ ಮನರಂಜನೆ ನೀಡುವುದಾಗಿ ಹರಿಪ್ರಿಯಾ ಹೇಳಿದ್ದಾರೆ. ಇದು ಇನ್ಫೋಟೈನ್ಮೆಂಟ್ ಚಾನೆಲ್ ಎಂದು ತಿಳಿಸಿದ್ದಾರೆ. ಮೊದಲ ವಿಡಿಯೋ ಜೊತೆಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದು, ತನ್ನ ಯೂಟೂಬ್ ಚಾನೆಲ್ ಮೊದಲ ವಿಡಿಯೋದಲ್ಲಿ ನಟಿ ಹರಿಪ್ರಿಯಾ ತಮ್ಮದೇ ಜೀವನದ ಬಗ್ಗೆ ಹೇಳಿಕೊಳ್ಳಲಿದ್ದಾರೆ. ತಮ್ಮ ಲೈಫ್‌ನ ಯಾರಿಗೂ ತಿಳಿಯದ ಟಾಪ್ 12 ಸೀಕ್ರೇಟ್‌ಗಳ ಬಗ್ಗೆ ಮಾತನಾಡಲಿದ್ದಾರೆ.
ಮೊದಲ ಯೂಟೂಬ್ ವಿಡಿಯೋ ಪ್ರೋಮೋವನ್ನು ಹಂಚಿಕೊಂಡಿದ್ದು, ಈ ವೇಳೆ ಹರಿಪ್ರಿಯಾ ಸಿನಿಮಾ ಇಂಡಸ್ಟ್ರಿಗೆ 16ನೇ ವಯಸ್ಸಿನಲ್ಲೇ ಕಾಲಿಟ್ಟ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಫಸ್ಟ್ ಕಿಸ್ ಬಗ್ಗೆ ಮಾತಾಡಿದ್ದು, ನನ್ನ ಫಸ್ಟ್ ಕಿಸ್ ಬಗ್ಗೆ ತಿಳಿಯಲು ಇಷ್ಟೊಂದು ಕುತೂಹಲನಾ ಎಂದು ಕೇಳುತ್ತಾ ನಾಚಿ ನೀರಾಗಿದ್ದಾರೆ ಈ ಬೆಡಗಿ.
ಇದನ್ನೂ ಓದಿ: Unmarried Actresses: ವಯಸ್ಸು 40 ದಾಟಿದ್ರೂ ಈ 5 ನಟಿಯರು ಮದುವೆಯಾಗಿಲ್ಲ, ಒಂಟಿಯಾಗಿಯೇ ಜೀವನ ಕಳೆಯುತ್ತಿದ್ದಾರೆ!
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇದೇ ವರ್ಷ ಜನವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಷ್ಟು ದಿನ ಮದುವೆ, ಹನಿಮೂನ್ ಅನ್ನುತ್ತ ಫುಲ್ ಬ್ಯುಸಿಯಾಗಿದ್ದ ಈ ಕ್ಯೂಟ್ ಕಪಲ್ ಈಗ ಮತ್ತೆ ವೃತ್ತಿಜೀವನಕ್ಕೆ ಮರಳಿದ್ದಾರೆ. ಇದೀಗ ಹರಿಪ್ರಿಯಾ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.