Haripriya Vasista simha : ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಸಿಂಹಪ್ರಿಯ ಜೋಡಿಯೂ ಒಂದು. ಫ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟು ಮದುವೆಯಾದ ಲವ್‌ ಬರ್ಡ್‌ ಇದೀಗ ಮತ್ತೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಹೇಳಲು ರೆಡಿಯಾಗಿದ್ದಾರೆ. ಈ ಕುರಿತು ನಟಿ ಹರಿಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಕಳೆದ ಜನವರಿ 26 ರಂದು ಹಸೆಮಣೆ ಏರಿದ್ದರು. ಇಷ್ಟು ದಿನ ಮದುವೆ, ಹನಿಮೂನ್ ಎಂದು ಬ್ಯುಸಿಯಾಗಿದ್ದ ಜೋಡಿ, ಸಿನಿಮಾದತ್ತ ಮುಖ ಮಾಡಿದ್ದರು. ಇದೀಗ ಹರಿಪ್ರಿಯಾ ಗುಡ್ ನ್ಯೂಸ್ ಹೇಳುವುದಾಗಿ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟರ್‌ ಒಂದನ್ನು ಹಂಚಿಕೊಂಡಿರುವ ಪ್ರಿಯಾ, ನಂಗೆ ಗೊತ್ತು ನೀವೆಲ್ಲಾ.. ಸರ್ಪ್ರೈಸ್‌ ಒಂದನ್ನು ತಿಳಿದುಕೊಳ್ಳಲು ಕುತೂಹಲರಾಗಿದ್ದೀರಿ ಅಂತ.. ಗೆಸ್‌ ಮಾಡಿ ಏನಿರಬಹುದು..! ಅಂತ ಬರೆದುಕೊಂಡು ಪ್ಯಾನ್ಸ್‌ ತೆಲೆಗೆ ಹುಳ ಬಿಟ್ಟಿದ್ದಾರೆ.


weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5'


ಇನ್ನು ಪೋಸ್ಟರ್‌ನಲ್ಲಿ ಹೆಸರೇನು ಮೇಡಂ..? ಯಾವಾಗ ಅನೌನ್ಸ್‌ ಮಾಡ್ತೀರಾ..? ಕೇಳಿದ್ದು, ನಿಜಾನಾ..? ಗುಡ್‌ ನ್ಯೂಸ್‌..? ಸೇರಿದಂತೆ ಯೂಟ್ಯೂಬ್‌ ಮತ್ತು ಗೂಗಲ್‌ ಮೇಲ್‌ನಲ್ಲಿ ಬಂದಿರುವ ನೋಟಿಫಿಕೇಶನ್ ಚಿತ್ರಗಳು ಹರಿಪ್ರಿಯಾ ಹಂಚಿಕೊಂಡಿರುವ ಫೋಸ್ಟರ್‌ನಲ್ಲಿದೆ. ಹರಿಪ್ರಿಯಾ ಸರ್ಪ್ರೈಸ್‌ ಅಂದ ತಕ್ಷಣ ಅವರ ಅಭಿಮಾನಿಗಳು ಕಂಗ್ರಾಜುಲೇಷನ್ ಹೇಳುತ್ತಿದ್ದಾರೆ. ಕಾಮೆಂಟ್‌ ಮಾಡುವ ಮೂಲಕ ತಾಯಾಗಲಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲವೊಂದಿಷ್ಟು ಜನ ನೆಕ್ಸ್‌ ಮೂವಿ ಅಪ್‌ಡೆಟ್‌ ಇರ್ಬೇಕು ಅಂತ ಹೇಳುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.