Harshika poonacha Bhuvan marriage : ಸ್ಯಾಂಡಲ್​ವುಡ್​ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಪೊನ್ನಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಆಗಸ್ಟ್​ 24ರಂದು ಈ ಜೋಡಿ ಕೊಡವ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಜಪೇಟೆಯ ಅಮ್ಮತ್ತಿಯಲ್ಲಿ ಈ ಭುವನ್‌ ಹರ್ಷಿಕಾ ಹಸೆಮಣೆ ಏರಲಿದ್ದಾರೆ.​ ಈಗಾಗಲೆ ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರಿಗೂ ಫ್ಯಾನ್ಸ್‌ಗಳು ಶುಭ ಕೋರಿದ್ದಾರೆ. ಕೊಡವ ಭಾಷೆಯಲ್ಲಿ ಲಗ್ನ ಪತ್ರಿಕೆ ಮುದ್ರಿಸಲಾಗಿದೆ.


ಇದನ್ನೂ ಓದಿ: ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ರವರ ಹುಟ್ಟುಹಬ್ಬಕ್ಕೆ ಕಾದಿದೆ ಬಿಗ್‌ ಸರ್ಪ್ರೈಸ್..


ಹಲವು ವರ್ಷಗಳಿಂದ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಆಪ್ತವಾಗಿದ್ದರು. ಇದೀಗ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಕೊಡವ ಸಂಪ್ರದಾಯದ ಪ್ರಕಾರ ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿಯ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಮತ್ತು ಆಪ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.


ಈಗಾಗಲೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಆಗಸ್ಟ್ 24 ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ವಿವಾಹ ನಡೆಯಲಿದೆ. ಕೋವಿಡ್‌ ಸಮಯ ಸೇರಿದಂತೆ ಹಲವಾರು ಸಾಮಾಜಮುಖಿ ಕೆಲಸಗಳಲ್ಲಿ ಈ ಜೋಡಿ ನಿರತವಾಗಿತ್ತು.  ಇದೀಗ ಸಪ್ತಪದಿ ತುಳಿಯುವ ಮೂಲಕ ಜೀವನದುದ್ದಕ್ಕೂ ಒಂದಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.