ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ವರ್ಷದ ಹೈ ವೋಲ್ಟೇಜ್ ಚಿತ್ರ ವೇದಾ. ಭಜರಂಗಿ 2 ಸಿನಿಮಾ ನಂತರ ಪ್ರೇಕ್ಷಕರ ಮುಂದೆ ಬರ್ತಾ ಇರೋ ವಿಭಿನ್ನ ಕಥೆಯ ವೇದಾ ಸಿನಿಮಾದ ಕ್ರೇಜ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜೋರಾಗಿದೆ. ಈಗಾಗಲೇ ಗಿಲ್ಲಕ್ಕೋ ಶಿವ ಗಿಲ್ಲಕ್ಕೊ ಹಾಡು ಬಿಡುಗಡೆ ಆಗಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಲ್ಲಕ್ಕೊ ಶಿವನಾಗಿ ಕಾಣಿಸಿಕೊಂಡಿರೋದು ಸಹಜವಾಗಿ ದೊಡ್ಮನೆಯ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ‌. ಈ ಮಧ್ಯೆ ಕರುನಾಡ ಚಕ್ರವರ್ತಿ ಗೆಳೆಯ ಅಭಿನಯ ಚಕ್ರವರ್ತಿಯನ್ನ ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಯೆಸ್ .. ಶಿವಣ್ಣ ದಂಪತಿಗಳು ಕಿಚ್ಚ ಸುದೀಪ್ ಅವರನ್ನ ಭೇಟಿಯಾಗೊಕೆ ಒಂದು ಕಾರಣ ಇದೆ, ಅದೇ‌ನಪ್ಪ ಅಂದ್ರೆ ಸೆಂಚುರಿ ಸ್ಟಾರ್ ತಮ್ಮ ಸ್ವತಃ ಬ್ಯಾನರ್ ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವ ವೇದಾ ಸಿನಿಮಾಕ್ಕಾಗಿ. ಹೌದು, ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಲ್ಲಿ ಸಖತ್ ಚರ್ಚೆ ಆಗುತ್ತಿರುವ ವೇದಾ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರನ್ನ ಆಹ್ವಾನಿಸಲು  ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸುದೀಪ್ ಅವರನ್ನ ಅವರ ಮನೆಗೆ ಹೋಗಿ  ಆಹ್ವಾನಿಸಿದ್ದಾರೆ‌.  


ಇದನ್ನೂ ಓದಿ- ʼಲಿಪ್‌ಸ್ಟಿಕ್ ಮರ್ಡರ್ʼ ಇನ್ವೆಸ್ಟಿಗೇಷನ್ ಥ್ರಿಲ್ಲರ್‌ ಚಿತ್ರ ಈವಾರ ತೆರೆಗೆ


ಶಿವಣ್ಣ ದಂಪತಿಗಳು  ಜೆ.ಪಿ ನಗರದ ಕಿಚ್ಚನ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಪ್ರೀತಿಯ ಆಹ್ವಾನ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಇದೇ 14ರಂದು ವೇದ ಸಿನಿಮಾದ ಅದ್ದೂರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವೇದ ಶಿವಣ್ಣನ 125 ನೇ ಚಿತ್ರವಾಗಿದೆ.. ಅಲ್ಲದೆ ಗೀತಾ ಪಿಕ್ಚರ್ಸ್ ನಲ್ನಿ ನಿರ್ಮಾಣವಾಗಿರುವ ಮೊದಲ ಚಿತ್ರ ವೇದ. ಹೀಗಾಗಿ ಶಿವಣ್ಣ ದಂಪತಿ ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡ್ತಿದ್ದಾರೆ.. 


ಈಗಾಗಲೇ ಮಂಡ್ಯ, ಚಾಮರಾಜನಗರ, ರಾಯಚೂರು ಮಂಗಳೂರಿನಲ್ಲಿ ವೇದಾ ಸಿನಿಮಾದ ಬಗ್ಗೆ ಅದ್ದೂರಿ ಇವೆಂಟ್ ಗಳನ್ನ ಮಾಡಲಾಗಿದ್ದು ಈಗ, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕರುನಾಡ ಚಕ್ರವರ್ತಿ ಹಾಗೂ ಅಭಿನಯ ಚಕ್ರವರ್ತಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ವೇದಾ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸಪ್ತಮಿ ಗೌಡ ಕೂಡ ವೇದಿಕೆಯಲ್ಲಿ ಕಾಣಿಸಲಿದ್ದಾರೆ.


ಇದನ್ನೂ ಓದಿ- ಭಾರತ ವಿರೋಧಿ ವೆಬ್ ಸೀರಿಸ್, ಪಾಕ್‌ ಮೂಲದ OTT ಪ್ಲಾಟ್‌ಫಾರ್ಮ್‌ ಮೇಲೆ ನಿರ್ಬಂಧ


ಇನ್ನು ವೇದ  ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಜೋಡಿಯ 4ನೇ ಚಿತ್ರ ಅನ್ನೋದು ವಿಶೇಷ. 
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಸಿನಿಮಾ 1960ರ ದಶಕದಲ್ಲಿ ನಡೆಯುವ ಕಥೆ, ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಹಾಗೂ ಅನುಪಮ, ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು‌ ನಿರೀಕ್ಷೆ ಮೂಡಿಸಿರೋ ವೇದಾ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೂ ಮುನ್ನ ಅಂದರೆ ಡಿಸೆಂಬರ್ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.