Hatya Movie: ದೆಹಲಿ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ ಘಟನೆಗಳು ಸೇರಿದಂತೆ ಇಂತಹ ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವೆ "ಹತ್ಯ". 


COMMERCIAL BREAK
SCROLL TO CONTINUE READING

ಈ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ನೋವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ನೋವು ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ ಇದೇ ಚಿತ್ರದ ಕಥಾಹಂದರ. ಇದೊಂದು ಮಹಿಳಾ ಪ್ರಧಾನ ಚಿತ್ರ  ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಗಂಗಾಧರ್(ಗಂಗು).


ಇದನ್ನೂ ಓದಿ: ಪವಿತ್ರಾ - ನರೇಶ್‌ ಇಬ್ಬರಲ್ಲಿ ಮೊದಲು ಪ್ರಪೋಸ್‌ ಮಾಡಿದ್ಯಾರು? ತುಂಬಾ ಸ್ಪೆಷಲ್‌ ಆಗಿತ್ತಂತೆ ಆ ಮೊಮೆಂಟ್‌!


ವರುಣ್ ‌.ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಸಾಗರಂ ವಲ್ಡ್ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.


ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.\


ಇದನ್ನೂ ಓದಿ: ರಾಮ್ ಚರಣ್ ನಿರ್ಮಾಣದ ʼದಿ ಇಂಡಿಯನ್ ಹೌಸ್’ ಪವರ್ ಪ್ಯಾಕ್ಡ್ ಮೋಷನ್ ವಿಡಿಯೋ ರಿಲೀಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.