ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್  (Sushant Singh Rajput) ಸಾವಿನ ಬಗ್ಗೆ ಮಾಡಲಾಗುತ್ತಿರುವ ಸುಳ್ಳು ಹೇಳಿಕೆಗಳಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರೊಬ್ಬರು ಈ ಪ್ರಕರಣದಲ್ಲಿ ಖುದ್ದು ನಿಗಾವಹಿಸಿದ್ದಾರೆ ಎಂದು ಮಾದ್ಯಮದ ಒಂದು ಗುಂಪು ವರದಿ ಮಾಡುತ್ತಿದೆ. ಆದರೆ ಈ ಕುರಿತು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಮೇಲೆ ಬರೆದುಕೊಂಡಿರುವ ಹರ್ಷವರ್ಧನ್, "ಅಸ್ಪಷ್ಟ ಹೇಳಿಕೆಗಳ ಆಧಾರದ ಮೇಲೆ ಮಾಡಲಾಗಿರುವ ಒಂದು ಸುಳ್ಳು ವರದಿ ಇದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಹೇಳಿಕೆ ಬೇರೆಯಾವುದೇ ಅಧಿಕಾರಿ ಅಥವಾ ಮುಖಂಡ ತೆಗೆದುಕೊಂಡದ್ದು ತಮಗೆ ಅರಿವಿಲ್ಲ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Sushant Singh Rajput ಸಾವು ಹತ್ಯೆಯೋ ಅಥವಾ ಆತ್ಮಹತ್ಯೆಯೋ? CBIಗೆ ವರದಿ ಸಲ್ಲಿಸಿದ AIIMS


ಏತನ್ಮಧ್ಯೆ, ಇದೊಂದು ಆತ್ಮಹತ್ಯೆ ಪ್ರಕರಣವೋ ಅಥವಾ ಕೊಲೆಯೋ ಎಂಬ ವಿಷಯದ ಬಗ್ಗೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರುವುದು ತುಂಬಾ ಕಷ್ಟ ಎಂದು ಏಮ್ಸ್ (ಎಐಐಎಂಎಸ್) ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಹೇಳಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂಡ ಲಭ್ಯವಿರುವ ಸಾಕ್ಷಾಧಾರಗಳ ಆದಾರದ ಮೇಲೆ ತಯಾರಿಸಲಾಗಿರುವ ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ-Drugs Case: ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು, ಸಂಜೆಯೊಳಗೆ ಬಿಡುಗಡೆ ಸಾಧ್ಯತೆ


ಹೊಸ ತನಿಖೆಯ ಆವಶ್ಯಕತೆ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಮತ್ತೊಂದು ವಿಧಿವಿಜ್ಞಾನ ತನಿಖೆ ನಡೆಯಬೇಕು ಎಂಬುದು ತಮ್ಮ ಅಭಿಪ್ರಾಯ  ಎಂದು ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥರು ಈ ಬಗ್ಗೆ ಮತ್ತೊಂದು ಇಲಾಖಾ ತನಿಖೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.


ಇದನ್ನು ಓದಿ- ಮಾಧ್ಯಮದವರ ಮೇಲೆ ಗಂಬೀರ ಆರೋಪ ಮಾಡಿದ Rhea Chakraborty ಪರ ವಕೀಲ


ವೈದ್ಯಕೀಯ ಮಂಡಳಿ ಹೇಳಿದ್ದೇನು?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ಕೋರಿಕೆಯ ಮೇರೆಗೆ Forensic Medicine and Toxicology ವಿಭಾಗ  ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅವರು ಸ್ಥಾಪಿಸಿದ ವೈದ್ಯಕೀಯ ಮಂಡಳಿ ಕಾರ್ಯನಿರ್ವಹಿಸಿದೆ ಎಂದು ಏಮ್ಸ್ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಏಜೆನ್ಸಿಯ ಪರವಾಗಿ ತಂಡದ ಅಭಿಪ್ರಾಯವನ್ನು ಕೋರಲಾಯಿತು ಮತ್ತು ನಾವು ನಮ್ಮ ಕೆಲಸವನ್ನು ಚೆನ್ನಾಗಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದೆ.