ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಮತ್ತೊಂದು ಹೆಸರು ಜೀ ಕನ್ನಡ ವಾಹಿನಿ. ಕಳೆದ 11 ವರ್ಷಗಳಿಂದ ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡ ವಾಹಿನಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರನ್ನು ಗೌರವಿಸುವ ಸಲುವಾಗಿ ಹೆಮ್ಮೆಯ ಕನ್ನಡಿಗ -2018ರ ಕಾರ್ಯಕ್ರಮವನ್ನು ಇದೇ ಮಾ.3 ರಂದು ಹಮ್ಮಿಕೊಂಡಿತ್ತು. ಇದೀಗ ಆ ಕಾರ್ಯಕ್ರಮವು ಮಾ.17 ಮತ್ತು 18 ರಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 


COMMERCIAL BREAK
SCROLL TO CONTINUE READING

ಈ ಬಾರಿಯ ಹೆಮ್ಮೆಯ ಕನ್ನಡಿಗ ಸಮಾರಂಭದಲ್ಲಿ ಕಲೆ, ಸಾಹಿತ್ಯ, ಪತ್ರಿಕೋದ್ಯಮ, ನೃತ್ಯ, ನಿರ್ದೇಶಕ, ಅತುತಮ ಸಂಗೀತ ಹೀಗೆ ಮೊದಲಾದ 22 ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು. ಅವರಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾದ ಶ್ರೀ ಸಿದ್ದಗಂಗಾ ಸ್ವಾಮೀಜಿ, ಕವಿ ನಿಸಾರ್‌ ಅಹಮದ್‌, ಪತ್ರಕರ್ತ ವಿಶ್ವೇಶ್ವರ ಭಟ್‌, ಸಾಲು ಮರದ ತಿಮ್ಮಕ್ಕ, ಕೋಲಾರದ ನಾರಾಯಣ ರೆಡ್ಡಿ, ಮಹಿಳಾ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ರಾಜೇಶ್ವರಿ ಗಾಯಕ್ವಾಡ್‌, ವೇದಾ ಕೃಷ್ಣಮೂರ್ತಿ, ರಂಗಸೇವೆಗಾಗಿ ನೀನಾಸಂ ಸಂಸ್ಥೆ, 5 ರೂಪಾಯಿ ವೈದ್ಯರಾದ ಶಂಕರೇಗೌಡ, ಐಪಿಎಸ್‌ ಮಾಡಿದ ಮೊದಲ ಕನ್ನಡತಿ ಖ್ಯಾತಿಯ ರೂಪಾ ಮುದ್ಗಲ್‌, ರಾಜಕುಮಾರ ಸಿನಿಮಾದ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಪುನೀತ್‌ ರಾಜ್‌ ಕುಮಾರ್‌, ರಶ್ಮಿಕಾ ಮಂದಣ್ಣ, ಕ್ರೇಜಿ ಸ್ಟಾರ್‌ ರವಿಚಂದ್ರನ್‌, ನಟ ರಮೇಶ್‌ ಮೊದಲಾದವರನ್ನು ಅಭಿನಂದಿಸಲಾಗಿದೆ. 



ಕನ್ನಡ ಚಿತ್ರರಂಗದ ಸ್ಟಾರ್ಗಳಾದ ದುನಿಯಾ ವಿಜಯ್. ರಂಗಾಯಣ ರಘು, ಸಾನ್ವಿ ಶ್ರೀವಾಸ್ತವ, ರೋರಿಂಗ್ ಸ್ಟಾರ್ ಶ್ರಿಮುರಳಿ ಸೇರಿದಂತೆ ಮೊದಲಾದವರ ನೃತ್ಯ ಪ್ರದರ್ಶನ ಇಡೀ ಕಾರ್ಯಕ್ರಮಕ್ಕೆ ರಂಗು ನೀಡಿದೆ. 


ಬಹಳ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು ಮಾತಿನ ಮಲ್ಲಿ ಅನುಶ್ರೀ ಮತ್ತು ರಮೇಶ್ ಅರವಿಂದ್ ಜೋಡಿ ನಿರೂಪಣೆ. ಈ ಜೋಡಿಯ ಅದ್ಭುತ ನಿರೂಪಣೆಯಿಂದ ಮೂಡಿಬಂದಿರುವ ವರ್ಣರಂಜಿತ 'ಹೆಮ್ಮೆಯ ಕನ್ನಡಿಗ 2018' ಕಾರ್ಯಕ್ರಮವನ್ನು ಜೀ ವಾಹಿನಿಯಲ್ಲಿ ಇದೇ ಮಾರ್ಚ್ 17 ಮತ್ತು 18ರಂದು ರಾತ್ರಿ 7.30ಕ್ಕೆ ಪ್ರಸಾರವಾಗದ್ದು, ತಪ್ಪದೇ ವೀಕ್ಷಿಸಿ. Don't mis it...