ಬೆಂಗಳೂರು: ಪಾರ್ವತಮ್ಮ ರಾಜ್ ಕುಮಾರ್ ಅವರ ನಿರ್ಮಾಣದ 'ಮನೆದೇವ್ರು' ಸೀರಿಯಲ್‌ ಒಂದು ಕಾಲದಲ್ಲಿ ಬಹಳ ಫೇಮಸ್ ಆಗಿತ್ತು...ಈ ಮುದ್ದಾದ ಲವ್‌ ಸ್ಟೋರಿಯಲ್ಲಿ ಸೂರ್ಯ ಎಂದೇ ಫೇಮಸ್‌ ಆಗಿದ್ದ ಜಯ್ ಡಿಸೋಜಾ ಪೈಲೇಟ್‌ ಆಗಬೇಕು ಎಂದುಕೊಂಡು ನಟನೆಗೆ ಎಂಟ್ರಿ ಕೊಟ್ಟಿದ್ಯಾಕೆ? ಇವರ ಸ್ಟೋರಿ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ಪಾರ್ವತಮ್ಮ ರಾಜ್ ಕುಮಾರ್ ಅವರ ನಿರ್ಮಾಣದ 'ಮನೆದೇವ್ರು' ಧಾರಾವಾಹಿ ಒಂದು ಕಾಲದಲ್ಲಿ ಬಹಳ ಫೇಮಸ್ ಆಗಿತ್ತು. ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡ ಜಯ್ ಡಿಸೋಜಾ ಅವರು ತಮ್ಮ ಮುಗ್ಧ ಅಭಿನಯದ ಮೂಲಕ ಎಲ್ಲರ ಮನಗೆದ್ದಿದ್ದರು...ಸುಮಾರು ಎಂಟು 'ಮನೆದೇವ್ರು' ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಜಯ್ ಡಿಸೋಜಾ. ಸದ್ಯ ಅವರು ಪರಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. 


ಇದನ್ನೂ ಓದಿ: Chetan Ahimsa: ಬಿಜೆಪಿಗೆ ಕಿಚ್ಚ ಸುದೀಪ್‌ ಬೆಂಬಲ.. ಚೇತನ್‌ ಅಹಿಂಸಾ ಏನ್‌ ಹೇಳಿದ್ರು ಗೊತ್ತಾ?


ಪೈಲಟ್ ಆಗಬೇಕೆಂಬ ಮಹಾದಾಸೆ ಹೊಂದಿದ್ದ ಜಯ್ ಡಿಸೋಜಾ ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಮಾಡೆಲಿಂಗ್ ಕಡೆಗೆ ಕಾಲಿಟ್ಟರು. ಬಹಳಷ್ಟು ವೇದಿಕೆಗಳಲ್ಲಿ ಮಾಡಲ್ ಆಗಿ ರಾಂಪ್ ವಾಕ್ ಮಾಡಿದ ನಂತರ ನಿಧಾನಕ್ಕೆ ಜಾಹೀರಾತುಗಳ ಕಡೆಗೆ ಮುಖ ಮಾಡಿದ ಇವರು ಹಲವಷ್ಟು ಬ್ರಾಂಡ್‌ಗಳಿಗೆ ಜಾಹೀರಾತು ಮಾಡಿದ್ದಾರೆ. ಹೀಗಿರುವಾಗಲೇ ನಟನೆಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದರು...ನಟನನಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಜಯ್ ಅವರು ಮುಂಬೈಗೆ ತೆರಳಿದರು. ಅಲ್ಲಿ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದು ಕರ್ನಾಟಕಕ್ಕೆ ವಾಪಸ್ ಬಂದ ಇವರು ಸಿಕ್ಕ ಅವಕಾಶಗಳ್ಯಾವುದನ್ನೂ ಬಿಡದೆ ಎಲ್ಲದಕ್ಕೂ ಆಡಿಶನ್‌ಗೆ ಅಪ್ಲೈ ಮಾಡುತ್ತಿದ್ದರು.


ಇದನ್ನೂ ಓದಿ: Kichcha Sudeep Press Meet : ‘ಚುನಾವಣೆ ನಿಲುವಿನ ಬಗ್ಗೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್ 


'ಮನೆದೇವ್ರು' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಜಯ್ ಡಿಸೋಜಾ ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ. ಅಲ್ಲಿಯೂ ಮನೋಜ್ಞ ನಟನೆಯ ಮೂಲಕ ಮನ ಸೆಳೆದ ಜಯ್ ಡಿಸೋಜಾ  'ಆಕಾಶದೀಪ' ಧಾರಾವಾಹಿಯಲ್ಲಿ ನಾಯಕ ಆಕಾಶನಾಗಿ ನಟಿಸಿದರು. ಅದರಲ್ಲಿ ಕುರುಡನ ಪಾತ್ರಕ್ಕೆ ಜೀವ ತುಂಬಿದ್ದ ಜಯ್ ಡಿಸೋಜಾ ಎರಡನೇ ಬಾರಿಯೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು..


ಸಿನಿಮಾದಲ್ಲಿಯೂ ಮೋಡಿ ಸದ್ಯ ತಮಿಳಿನ 'ಸೀತಾ ರಾಮಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಜಯ್ ಡಿಸೋಜಾ 'ರಾಗ' ಹಾಗೂ 'ಹ್ಯಾಪಿ ನ್ಯೂ ಇಯರ್' ಎಂಬ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ. ತಮ್ಮ ನಟನ ಜರ್ನಿ ಬಗ್ಗೆ ಮಾತನಾಡಿದ ಅವರು "ಇಂದು ನಾನು ಇಷ್ಟೆಲ್ಲ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ ಎಂದಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.