ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ10 ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ.  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕೆಲವು ಸ್ಟಾರ್‌ ನಟ - ನಟಿಯರು ಸಹ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಕೆಲವರು ಮತದಾನ ಮಾಡಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗಕ್ಕೂ ರಾಜಕೀಯಕ್ಕೂ ಒಂದು ನಂಟಿದೆ. ಕೆಲವು ನಟ - ನಟಿಯರು ರಾಜಕಾರಣಿಗಳೂ ಆಗಿದ್ದಾರೆ. ಚುನಾವಣೆಯ ಬಿಸಿಯ ನಡುವೆ ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಯಾವವು ಇಲ್ಲಿ ತಿಳಿಯೋಣ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಬಾಲಕಿ ಇಂದು ಫೇಮಸ್‌ ನಟಿ.. ಇವ್ರು ಕರ್ನಾಟಕದ ಕುಡ್ಲದವರು! ಯಾರೆಂದು ಹೇಳುವಿರಾ?


ಸ್ಯಾಂಡಲ್‌ವುಡ್‌ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಇವು : 


ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮತದಾನ ಕ್ಷೇತ್ರ ಕತ್ರಿಗುಪ್ಪೆ, ಸುದೀಪ್ ಅವರದ್ದು ಪುಟ್ಟೇನಹಳ್ಳಿ, ಕಾಂತಾರದಿಂದ ಮನೆ ಮಾತಾದ ನಟ ರಿಷಬ್ ಶೆಟ್ಟಿ ಅವರ ಮತಕ್ಷೇತ್ರ ಕುಂದಾಪುರ ಆಗಿದೆ. ಇನ್ನೂ ರಕ್ಷಿತ್‌ ಶೆಟ್ಟಿ- ಕುಂದಾಪುರ (ಉಡುಪಿ), ರಾಜ್ ಬಿ.ಶೆಟ್ಟಿ- ಕುಂದಾಪುರ, ಶಿವರಾಜ್ ಕುಮಾರ್- ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್- ರಾಜಾಜಿನಗರ, ಉಪೇಂದ್ರ,- ಕತ್ರಿಗುಪ್ಪೆ ಕ್ಷೇತ್ರದ ಮತದಾರರಾಗಿದ್ದಾರೆ. 


ಧ್ರುವ ಸರ್ಜಾ- ತ್ಯಾಗರಾಜನಗರ (ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್ - ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್- ಸದಾಶಿವನಗರ ಮತ್ತು ರಾಧಿಕ ಪಂಡಿತ್- ದೇವಯ್ಯ ಪಾರ್ಕ್ ಕ್ಷೇತ್ರದಲ್ಲಿ ಮತದಾನ ಮಾಡಲಿದ್ದಾರೆ. ಸುಧಾರಾಣಿ- ಮಲ್ಲೇಶ್ವರಂ, ರಕ್ಷೀತಾ ಪ್ರೇಮ್ - ಚಂದ್ರಲೇಔಟ್, ಪ್ರೇಮ್- ಚಂದ್ರಲೇಔಟ್, ಅಮೂಲ್ಯ- ಆರ್ ಆರ್ ನಗರ, ನೆನಪಿರಲಿ ಪ್ರೇಮ್ -ಆರ್ ಆರ್ ನಗರ, ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ( ಬಿಡದಿ), ರಚಿತಾ ರಾಮ್- ಆರ್ ಆರ್ ನಗರ, ಮೇಘನಾ ಸರ್ಜಾ- ಜೆಪಿ ನಗರ, ತಾರಾ - ಜೆಪಿ ನಗರ, ದ್ವಾರಕೀಶ್- ಬೊಮ್ಮನಹಳ್ಳಿ ಮತ್ತು ಸೃಜನ್‌ ಲೋಕೇಶ್‌ - ಕತ್ರಿಗುಪ್ಪೆಯಲ್ಲಿ ಮತದಾನ ಮಾಡುತ್ತಾರೆ. 


ಇದನ್ನೂ ಓದಿ: NEET Exam ದಿನವೇ ಪ್ರಧಾನಿ ರೋಡ್ ಶೋ, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವೇಳಾಪಟ್ಟಿ ಬದಲಿಸಿಕೊಳ್ಳಲು ಎಚ್‌ಡಿ‌ಕೆ ಆಗ್ರಹ


ಅಜಯ್ ರಾವ್- ರಾಜಾಜಿನಗರ, ಬಿ.ಸರೋಜದೇವಿ- ಮಲ್ಲೇಶ್ವರ, ಹರ್ಷಿಕಾ ಪೂಣಚ್ಚ .- ಕೆ.ಆರ್‌ ಪುರ, ಡಾಲಿ ಧನಂಜಯ-ಅರಸೀಕೆರೆ, ಪೂಜಗಾಂಧಿ- ಕತ್ರಿಗುಪ್ಪೆ, ಯೋಗರಾಜ್ ಭಟ್- ಗಿರಿ ನಗರ, ಅನಂತ್ ನಾಗ್ - ಮಲ್ಲೇಶ್ವರ, ಚಂದನ್ ಶೆಟ್ಟಿ- ನಾಗರಭಾವಿ, ದೊಡ್ಡಣ್ಣ- ಬಿದರುಕಲ್ಲು, ಕಾರುಣ್ಯರಾಮ್- ಆರ್‌ ಆರ್‌ ನಗರ, ಅವಿನಾಶ್ - ಆರ್‌ ಆರ್‌ ನಗರ, ಜಗ್ಗೇಶ್- ಮಲ್ಲೇಶ್ವರ, ಶರಣ್- ಹೊಸಕೆರೆಹಳ್ಳಿ, ದುನಿಯಾ ವಿಜಯ್- ಕತ್ತಿಗುಪ್ಪೆ, ಆಶಿಕಾ - ತುಮಕೂರು ಕ್ಷೇತ್ರದ ಮತದಾರರಾಗಿದ್ದಾರೆ. 


ಸಾಧುಕೋಕಿಲ- ನಾಗರಭಾವಿ, ಚಿಕ್ಕಣ್ಣ- ಮೈಸೂರು, ಅರ್ಜುನ್ ಜನ್ಯ- ಹೆಬ್ಬಾಳ, ಶ್ರೀಮುರುಳಿ- ವಸಂತನಗರ, ವಿಜಯ್ ರಾಘವೇಂದ್ರ- ಯಲಹಂಕ, ಸಪ್ತಮಿಗೌಡ- ಜೆಪಿ ನಗರ, ರಮೇಶ್ ಅರವಿಂದ್- ಪದ್ಮನಾಭ ನಗರ, ಮಾಲಾಶ್ರೀ- ಶಿವಾಜಿನಗರ, 
ವಶಿಷ್ಠ ಸಿಂಹ- ಆರ್‌ ಆರ್‌ ನಗರ, ಹರಿಪ್ರಿಯಾ- ಆರ್‌ ಆರ್ ನಗರ‌, ಶೃತಿ - ಹೊಸಕೆರೆ ಹಳ್ಳಿ, ಲೀಲಾವತಿ- ಸೋಲದೇವನಹಳ್ಳಿ,
ವಿನೋದ್ ರಾಜ್ - ಸೋಲದೇವನ ಹಳ್ಳಿ, ಭಾರತಿ-ಜಯನಗರ, ಅನಿರುದ್ದ್- ಜಯನಗರ, ಅಭಿಷೇಕ್ ಅಂಬರೀಶ್ - ಜೆಪಿನಗರ, ಸುಮಲತಾ- ಜೆಪಿ ನಗರ, ಪ್ರಶಾಂತ್ ನೀಲ್- ವಸಂತನಗರ ಕ್ಷೇತ್ರದ ಮತದಾರರಾಗಿದ್ದಾರೆ. 


ಇದನ್ನೂ ಓದಿ:  "ದೇಶಕ್ಕೆ ಮೆಟ್ರೋ ಯೋಜನೆ ತಂದವರು ದೇವೆಗೌಡ್ರು, ರಾಜ್ಯಕ್ಕೆ ಮೆಟ್ರೋ ತಂದದ್ದು ನಾನು" : ಹೆಚ್‌ಡಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.