ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್ ಅಲಿ ಖಾನ್, ಟಬು, ಸೋನಾಲಿಗೆ ಹೈಕೋರ್ಟ್ ನೋಟಿಸ್
1996ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿ ಟಬು ಹಾಗೂ ಸೋನಾಲಿ ಬೇಂದ್ರೆಗೆ ರಾಜಸ್ಥಾನ ಹೈ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜೋಧ್ಪುರ: 1996ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ನಟ ಸೈಫ್ ಅಲಿ ಖಾನ್, ನಟಿ ಟಬು ಹಾಗೂ ಸೋನಾಲಿ ಬೇಂದ್ರೆಗೆ ರಾಜಸ್ಥಾನ ಹೈ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜತೆಗೆ ನಟ ನೀಲಂ ಕೊಥಾರಿ ಮತ್ತು ಸ್ಥಳೀಯ ದುಶ್ಯಂತ್ ಸಿಂಗ್ ಎಂಬವರಿಗೂ ಕೋರ್ಟ್ ನೋಟಿಸ್ ನೀಡಿದೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆ ನಡೆಸಿದ್ದ ಜೋಧ್‌ಪುರ್ ಕೋರ್ಟ್ ಕಳೆದ ಏಪ್ರಿಲ್ನಲ್ಲಿ ತೀರ್ಪು ಪ್ರಕಟಿಸಿತ್ತು. ಅಂದು ನಟ ಸಲ್ಮಾನ್ ಖಾನ್ ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ, 'ಹಮ್ ಸಾಥ್ ಸಾಥ್ ಹೈ' ಚಿತ್ರದ ಸಹ ನಟ ಸೈಫ್ ಅಲಿಖಾನ್, ಟಬು ಹಾಗೂ ಸೋನಾಲಿ ಬೇಂದ್ರೆ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಕಳೆದ ಸೆಪ್ಟೆಂಬರ್ನಲ್ಲಿ ಹೈಕೋರ್ಟ್'ನಲ್ಲಿ ಮೆಲ್ಮನವಿ ಸಲ್ಲಿಸಿತ್ತು.
ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿರುವ ರಾಜಸ್ಥಾನ ಹೈಕೋರ್ಟ್, ಸೊನಾಲಿ ಬೇಂದ್ರೆ, ಟಬು ಹಾಗೂ ಸೈಫ್ ಅಲಿ ಖಾನ್ ಸೇರಿದಂತೆ ಐವರಿಗೆ ನೋಟೀಸ್ ಜಾರಿ ಮಾಡಿದೆ.